September 19, 2024

MALNAD TV

HEART OF COFFEE CITY

ರೈತರು ಹಲಸು ಬೆಳೆಯನ್ನು ಉಪ ಬೆಳೆಯಾಗಿ ಪರಿಗಣಿಸಿ – ಹೆಚ್.ಡಿ.ತಮ್ಮಯ್ಯ

1 min read

????????????????????????????????????

ಚಿಕ್ಕಮಗಳೂರು-ರೈತರು ಹಲಸು ಬೆಳೆಯನ್ನು ಉಪ ಬೆಳೆಯಾಗಿ ಪರಿಗಣಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ-ಹೊಸ ವಿವಿಧ ಬಗೆಯ ಹಲಸು ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕಅಭಿವೃದ್ಧಿ ಹೊಂದುವAತೆ ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಅವರುಇಂದುಎA.ಎಲ್.ವಿ ರೋಟರಿ ಸಭಾಂಗಣದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ವಿಸ್ತರಣಾ ನಿರ್ದೇಶನಾಲಯ, ಐ.ಸಿ.ಎ.ಆರ್ ಕೃಷಿ ವಿಜ್ಞಾನಕೇಂದ್ರ, ಮೂಡಿಗೆರೆ, ಹಾಗೂ ಕೃಷಿ ಪರಿಕರ ಮಾರಾಟಗಾರರ ಸಂಘ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಪ್‌ಕಾಮ್ಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯೋಜನೆ, ಕೆನರಾ ಬ್ಯಾಂಕ್, ಪ್ರಾದೇಶಿಕ ಕಛೇರಿ ಚಿಕ್ಕಮಗಳೂರು ಹಾಗೂ ಹಲಸು ಬೆಳೆಗಾರರ ಸಂಘ ಸಖರಾಯಪಟ್ಟಣ ಇವರುಗಳ ಸಂಯುಕ್ತಾಶ್ರಯದಲ್ಲಿಏರ್ಪಡಿಸಲಾಗಿದ್ದ ಹಲಸಿನ ಮೇಳ – 2023ಯನ್ನು ಉದ್ಘಾಟಿಸಿ ಮಾತನಾಡಿದರು.
ಸೂಕ್ತ ಮಾರುಕಟ್ಟೆ ವ್ಯವಸ್ಥೆಇಲ್ಲದೆ, ತುಂಬಾಜಾಗ ತೆಗೆದುಕೊಳ್ಳುತ್ತದೆ ಎಂಬಿತ್ಯಾದಿ ಕಾರಣಗಳಿಂದ ಇತ್ತೀಚೆಗೆ ಹಲಸು ಬೆಳೆಯುವ ಬೆಳೆಗಾರರು ಕಡಿಮೆಯಾಗುತ್ತಿದ್ದಾರೆ, ತೋಟಗಾರಿಕೆ ಇಲಾಖೆ ಈ ಬಗ್ಗೆ ಹಲಸು ಬೆಳೆಯಲು ರೈತರಿಗೆ ಮನವರಿಕೆ ಮಾಡಿದಾಗ ಮಾತ್ರ ಹಲಸು ವಾಣಿಜ್ಯ ಬೆಳೆಯಾಗುತ್ತದೆ ಎಂಬ ಭಾವನೆರೈತರಲ್ಲಿ ಮೂಡುತ್ತದೆಎಂದು ಸಲಹೆ ಮಾಡಿದರು.
ಸಖರಾಯಪಟ್ಟಣ, ಇಬ್ಬೀಡು ಭಾಗದಲ್ಲಿ ಹಲಸು ಬೆಳೆಯನ್ನು ಬೆಳೆಯುತ್ತಿದ್ದು ಇದರಿಂದ ಈಗ ಹಲವಾರು ಖಾದ್ಯಗಳನ್ನು ತಯಾರು ಮಾಡಲು ಬಳಸುತ್ತಿರುವುದರಿಂದ ಸರ್ಕಾರ ಹಲಸು ಬೆಳೆಯಲು ಉತ್ತೇಜನ ನೀಡಿದರೆ, ರೈತರುಆರ್ಥಿಕ ಸ್ವಾವಲಂಭಿಗಳಾಗುತ್ತಾರೆ ಎಂದರು.
ಸಾಮಾನ್ಯರೈತನ ಮಗನಾಗಿರುವ ನಾನು, ಹಲಸು ಬೆಳೆದು ತಿಂದುರುಚಿನೋಡಿಗೊತ್ತಿದೆ, ಹಲಸಿನ ಹಣ್ಣನ್ನುತಿನ್ನುವುದಿಲ್ಲ ಎಂಬ ವ್ಯಕ್ತಿಗೆ ಬೇರೆಯಾವಹಣ್ಣನ್ನುತಿಂದುಗೊತ್ತಿರುವುದಿಲ್ಲ ಎಂದಅವರು ಹಲಸು-ಮಾವು ಹಣ್ಣುಗಳ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ, ಈ ಸಂದರ್ಭದಲ್ಲಿ ಆಯೋಜಿಸಿರುವ ಹಲಸಿನ ಮೇಳ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಶೋಧನಾ ನಿರ್ದೇಶಕಡಾ.ಬಿ.ಹೇಮ್ಲಾ ನಾಯಕ್ ಮಾತನಾಡಿಆರು ಸಾವಿರ ವರ್ಷಗಳ ಇತಿಹಾಸಇರುವ ಹಲಸನ್ನು ಬೆಳೆಯುತ್ತ ಬಂದಿದ್ದೇವೆ, ಹಿಂದೆ ತೋಟಗಳಲ್ಲಿ ನೆರಳಿಗೆ, ಬಂಜರು ಭೂಮಿಯಲ್ಲಿ ಗಾಳಿ ತಡೆಗೆ ಬೆಳೆಯುತ್ತಿದ್ದ ಹಲಸು ಈಗ ರಾಜ ಎಂಬ ಸ್ಥಾನವನ್ನು ಪಡೆದುಕೊಂಡಿತು, ಪ್ರಪಂಚದಲ್ಲಿಯೇ ಒಳ್ಳೆಯ ಹೆಸರು ಪಡೆದಿದೆಎಂದು ಶ್ಲಾಘಿಸಿದರು.
ರೈತರ ಪರವಾಗಿಎರಡು ದಿನ ಹಲಸು ಮೇಳವನ್ನು ಆಯೋಜಿಸಿದ್ದು, ಹಲವಾರು ವಿಜ್ಞಾನಿಗಳು ಸುಧಾರಿತ ಬೇಸಾಯ, ಹಲಸು ಬೆಳೆ ಬೆಳೆಯುವ ಕುರಿತು, ಈಗಾಗಲೇ ಸೂಕ್ತ ಮಾಹಿತಿ ನೀಡಿದ್ದಾರೆಜೊತೆಗೆ ಮೌಲ್ಯಯುತವಾಗಿ ವಿವಿಧ ಖಾದ್ಯಗಳನ್ನು ತಯಾರುಮಾಡಿ ಬೇರೆ-ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆಎಂದು ಹೇಳಿದರು.
ಹಲಸು ಬೆಳೆ ನೈಸರ್ಗಿಕಕೃಷಿಯಾಗಿದ್ದು, ಈ ಬೆಳೆಗೆ ನಿರ್ಧಿಷ್ಟ ವಾತಾವರಣದಅಗತ್ಯವಿಲ್ಲ, ಎಲ್ಲಾರೀತಿಯ ಹವಾಮಾನದಲ್ಲಿಯೂ ಬೆಳೆಯುತ್ತದೆ, ಅನೇಕ ಪೋಷಕಾಂಶಗಳನ್ನು ಹಲಸು ಹೊಂದಿದೆ, ಹಣ್ಣುಅಲ್ಲದೆತರಕಾರಿರೂಪದಲ್ಲಿಯೂ ಸಹ ಬಳಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಂಶೋಧನೆ ಮೂಲಕ ರೈತರನ್ನುತಲುಪಿದ್ದೇವೆಎಂದು ತಿಳಿಸಿದರು.

????????????????????????????????????

ಹಾಪ್‌ಕಾಮ್ಸ್ಅಧ್ಯಕ್ಷ ಮತ್ತು ಪ್ರಶಸ್ತಿ ವಿಜೇತಕುಮಾರಸ್ವಾಮಿ ಮಾತನಾಡಿಯಾವುದೇ ಹಣ್ಣನ್ನು ಹೊಟ್ಟೆತುಂಬ ತಿನ್ನಲು ಸಾಧ್ಯವಿಲ್ಲ ಆದರೆ ಹಲಸಿನ ಹಣ್ಣನ್ನು ಹಸಿವಾದಾಗ ಹೊಟ್ಟೆತುಂಬ ತಿನ್ನಬಹುದು, ಸಮೃದ್ಧವಾದ ಪ್ರೋಟೀನ್‌ಯುಕ್ತ ಹಣ್ಣು ಹಲಸು ಎಂದಅವರುದೇವಿ ಹಲಸು, ಸಿದ್ಧ ಹಲಸು, ಚಂದ್ರ ಹಲಸು, ಹೀಗೆ ನಾನಾ ಬಗೆಯ ಹಲಸಿನ ಹಣ್ಣುಇದ್ದು, ತರಕಾರಿಗಾಗಿ, ಮರಮುಟ್ಟುತಯಾರಿಸಲು ಹೆಬ್ಬ ಹಲಸು ಬೆಳೆಯುತ್ತಿದ್ದಾರೆ, ಆದರೆಇತ್ತೀಚೆಗೆಅಡಿಕೆ ಬೆಳೆ ಸುನಾಮಿ ರೀತಿ ಭೂಮಿಯನ್ನುಆವರಿಸುತ್ತಿದೆಎಂದು ವಿಷಾಧಿಸಿದರು.
ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು ಮಳೆಯಾಶ್ರಿತ ಬೆಳೆಯಾಗಿ ಹಲಸನ್ನು ಬೆಳೆಯಲು ಅವಕಾಶವಿದೆ, ನೈಸರ್ಗಿಕವಾಗಿ ಪ್ರದೇಶಸದ ಹವಾಮಾನಕ್ಕೆಅನುಗುಣವಾಗಿ ಹೊಂದಿಕೊAಡುಉತ್ಕೃಷ್ಟವಾಗಿ ಬೆಳೆಯುವ ಹಲಸು ಎಂದು ಸಲಹೆ ಮಾಡಿದರು.
ದರಕಡಿಮೆಇದ್ದರು ಹಲಸಿಗೆ ಒಳ್ಳೆಯ ಬೇಡಿಕೆಇದೆ, ಹಾಪ್‌ಕಾಮ್ಸ್ ಮೂಲಕ ಮಾರುಕಟ್ಟೆಒದಗಿಸುತ್ತಿದ್ದು, ಹಲಸು ಹಣ್ಣಿನಚಿಪ್ಸ್ ಮುಂತಾದ ಮೌಲ್ಯವರ್ಧಿತ ಖಾದ್ಯಗಳನ್ನು ತಯಾರು ಮಾಡಲುಕಾರ್ಮಿಕರು, ಸರಳ ಉಪಕರಣಅಗತ್ಯವಾಗಿ ಬೇಕಾಗಿದೆಎಂದರು.
ಹಿರಿಯ ವಿಜ್ಞಾನಿ ಡಾ. ಬಿ.ಟಿ.ಕೃಷ್ಣಮೂರ್ತಿ ಮಾತನಾಡಿಎಲ್ಲಾಅಭಿವೃದ್ಧಿ ಇಲಾಖೆಗಳ ಆಶ್ರಯದಲ್ಲಿ ಹಲಸು ಮೇಳವನ್ನು ಆಯೋಜನೆ ಮಾಡಲಾಗಿದ್ದು, ತಲೆ ಮಾರುಗಳಿಂದ ಕಾಡಿನಲ್ಲಿ ಬೆಳೆಯುತ್ತಿದ್ದ ಹಣ್ಣು ಹಲಸಿನಹಣ್ಣು, ಕಾಡಿನಿಂದತAದುತಿನ್ನುತ್ತಿದ್ದ ಪದ್ಧತಿಯೊಂದಿತ್ತು ನಂತರ ತೋಟಗಳಲ್ಲಿ ಮತ್ತು ಬದುಗಳಲ್ಲಿ ಒಂದೆರಡು ಮರಗಳು ಕಾಣಿಸತೊಡಗಿತ್ತು ನಂತರರೈತರು ಮುಖ್ಯ ಬೆಳೆಯನ್ನಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಿಸ್ತರಣಾ ನಿರ್ದೇಶಕಾಡಾ.ಕೆ.ಟಿ.ಗುರುಮೂರ್ತಿ ವಹಿಸಿದ್ದರು, ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್, ಮೂಡಿಗೆರೆತೋಟಗಾರಿಕೆಇಲಾಖೆಯ ನಾರಾಯಣ್.ಎಸ್ ಮಾವರ್ಕರ್, ಡಾ.ಎಂ.ಶಿವಪ್ರಸಾದ್, ಕೆ.ಯತೀರಾಜ್, ಕೆ.ತಿಮ್ಮಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮಲಮ್ಮ, ಕಾಂತರಾಜು, ಶಿವಣ್ಣ ಮತ್ತಿತರರುಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!