October 18, 2024

MALNAD TV

HEART OF COFFEE CITY

ಜೈನ ಶ್ವೇತಂಬರ ಮಹಿಳಾ‌ ಮಂಡಲ ಸಂಘದವರು ಕೈಕಾಲು ಕಳೆದಕೊಂಡವರಿಗೆ ಕೃತಕ ಕೈಕಾಲು ಜೋಡಣೆ ಮಾಡಿ ಉತ್ಸಾಹ ತುಂಬಿದ್ದಾರೆ – ತಮ್ಮಯ್ಯ

1 min read

ಜಿಲ್ಲೆಯಲ್ಲಿ ಯಾವುದೇ ಮಹಿಳಾ ಮಂಡಳಿ ಸಂಘಗಳು ಮಾಡದೇ ಇರುವಂತಹ ಪುಣ್ಯ ಕೆಲಸವನ್ನು ಜೈನ ಶ್ವೆತಂಬರ ಮಹಿಳಾ ಮಂಡಲ ಮಾಡಿ ತೋರಿಸಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.ನಗರದ ತೆರಾಪಂಥ್ ಸಮುದಾಯ ಭವನದಲ್ಲಿ ಜೈನ ಶ್ವೇತಂಬರ ಮಹಿಳಾ ಮಂಡಲ ವತಿಯಿಂದ ಅಂಗವಿಕಲರಿಗೆ ಉಚಿತವಾಗಿ ಕೃತಕ ಕೈಕಾಲು ಜೊಡಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ 24ನೇ ತೀರ್ಥಂಕರರಾದ ಭಗವಾನ್ ಮಹಾವೀರ್ ರವರ ಆದರ್ಶಗಳನ್ನು ಜೈನ ಸಮುದಾಯದವರು ತಮ್ಮ ಜೀವನದಲ್ಲು ಅಳವಡಿಸಿಕೊಂಡಿದ್ದಾರೆ, ತಮ್ಮ ವ್ಯಾಪಾರದ ಜೊತೆಗೆ ಸಮಾಜ ಸೇವೆ ಕಾರ್ಯಗಳನ್ನು ಕೈಗೊಂಡು ಜೈನ್ ಮಹಿಳಾ ಸಂಘ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.
ಜೀವನದಲ್ಲಿ ಆಕಸ್ಮಿಕವಾಗಿ ಕೈಕಾಲುಗಳನ್ನು ಕಳೆದುಕೊಂಡವರ ಜೀವನದಲ್ಲಿ ಉತ್ಸಾಹ ತುಂಬುವ ಕೆಲಸವನ್ನು ಮಾಡಿ ಯಾವುದೇ ಜಾತಿ ಬೇದ ಮಾಡದೆ ಎಲ್ಲರಿಗೂ ಕೃತಕ ಕೈಕಾಲುಗಳನ್ನು ನೀಡಿ ಸಮಾಜಕ್ಕೆ ಆದರ್ಶವಾಗಿದ್ದಾರೆ ಎಂದರು.

ಜೈನ್ ಶ್ವೇತಂಬರ ಮಹಿಳಾ ಸಂಘದ ಅಧ್ಯಕ್ಷೆ ನರಿತಾಗಾದಿಯಾ ಮಾತನಾಡಿ ಜೈನ್ ಶ್ವೇತಾಂಬರ ಮಹಿಳಾ ಸಂಘದಿoದ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಪ್ರತಿ ವರ್ಷ ಮಹಾವೀರ್ ಜಯಂತಿಯ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ನಡೆಸಲಾಗುತಿತ್ತು, ಈ ಬಾರಿ ವಿಶೇಷವಾಗಿ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ, ಎಲ್ಲರು ಇದರ ಉಪಯೋಗ ಪಡೆದುಕೊಳ್ಳುವುದರ ಜತೆಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ತಿಳಿಸಿದರು. ನಾನು ಅಧ್ಯಕ್ಷೆಯಾದ ನಂತರ ಹೆಚ್ಚು ಮಹಿಳೆಯರನ್ನು ಸಂಘದ ಸದಸ್ಯರನ್ನಾಗಿ ಮಾಡಿ ಮಹಿಳೆಯರಿಗೆ ವಿವಿಧ ಕ್ರೀಡೆ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ಹೆಚ್ಚು ಕ್ರಿಯಾಶೀಲತೆಯಿಂದ ನಮ್ಮ ಸಂಘ ನಡೆದುಕೊಂಡು ಬರುವುದರ ಜತೆಗೆ ಅನೇಕ ಸಮಾಜ ಸೇವೆ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ ಎಂದರು.

 

ಜೈನ್ ಸಂಘದ ಅಧ್ಯಕ್ಷರಾದ ಕಾಂತಿಲಾಲ್‌ಖಿವೇಸರ್ ಮಾತನಾಡಿ ಜೈನ್ ಸಂಘದ ಆಶ್ರಯದಲ್ಲಿರುವ ಮಹಿಳಾ ಮಂಡಲ ಮತ್ತು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಶಾಖೆ ಬೆಂಗಳೂರು ಅವರಿಂದ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ, ಜನರಿಗೆ ಒಳ್ಳೆಯದಾಗಿಲಿ ಎಂಬ ನಿಟ್ಟಿನಿಂದ ಕಾಲು ರಹಿತರಿಗೆ ಉಚಿತವಾಗಿ ಕಾಲು ಜೊಡಣೆ ಮಾಡಲಾಗುತ್ತಿದ್ದು, ಜೈನ್ ಸಂಘದ ಕಾರ್ಯಕ್ರಮವು ಜನ ಸೇವೆಗೆ ಪ್ರಾಮುಖ್ಯತೆ ನೀಡಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ ಎಂದರು.
ಜೈನ್ ಶ್ವೇತಂಬರ ಮಹಿಳಾ ಸಂಘದ ಪೂರ್ವ ಅಧ್ಯಕ್ಷೆ ಮಂಜುಳಾಬನ್ಸಾಲಿ ಮಾತನಾಡಿ ಮಹಿಳಾ ಮಂಡಲ ವತಿಯಿಂದ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರವನ್ನು ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಕೃತಕ ಕಾಲು ಜೊಡಣೆಯನ್ನು ಮಾಡಲಾಗುತ್ತಿದೆ, ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದು, ತಮ್ಮ ಬಾಳನ್ನು ಬೆಳಗಿಸಿಕೊಂಡಿದ್ದಾರೆ, ಮಹಾವೀರ್ ಭಗವಾನ್ ರವರ ಕೃಪೆಯಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಜನರಿಗೆ ಉಪಯೋಗವಾಗಿ ಅವರ ಜೀವನಕ್ಕೆ ಬೆಂಬಲ ಸಿಗುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವಿಫುಲ್‌ಕುಮಾರ್ ಜೈನ್, ಜೈನ್ ದೇವಸ್ಥಾನದ ಕಾರ್ಯದರ್ಶಿ ಸಂಜಯ್ ಜೈನ್ ಜೈನ್ ಸಂಘದ ಕಾರ್ಯದರ್ಶಿ ರಮೇಶ್‌ಖಿವೇಸರ್, ಮುಖಂಡರುಗಳಾದ ಲಾಲ್‌ಚಂದ್ ಜೈನ್, ಮಹೇಂದ್ರ ಸಿಯಾಲ್, ದೀಪಕ್‌ದುಗಡ, ಜಸ್ವಂತ್‌ಡೋಸಿ, ಗೌತಮ್‌ಚಂದ್ ಸಿಯಾಲ್, ಮಹಿಳಾ ಸಂಘದ ಕಾರ್ಯದರ್ಶಿ ನಿತಾಖಿವೇಸರ್, ಗೀತಾಸೋನಾಲಿಕ, ದೀಪಿಕಪಿರ್ಗಲ್, ಶಾಮತಿದೇವಿ ಮತ್ತಿತತರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!