ಮೂಡಿಗೆರೆಯ ಬಣಕಲ್ ಸಮೀಪ ಸೇಗು ಬಳಿ ಸರಣಿ ಅಪಘಾತ ನಾಲ್ವರು ಸಾವು
1 min read
ಮೆಸ್ಕಾಂ ಲಾರಿ ಹಾಗೂ ಓಮ್ನಿ ಹಾಗೂ ಆಲ್ಟೊ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ ಘಟನೆ ಮೂಡಿಗೆರೆಯ ಬಣಕಲ್ ಸಮೀಪದ ನಡೆದಿದೆ. ಓಮ್ನಿ ವಾಹನದಲ್ಲಿ ಇದ್ದ ನಾಲ್ಕು ಜನರು ಮೃತಪಟ್ಟಿದ್ದು ಮೃತ ಎಲ್ಲರೂ ಚಿತ್ರದುರ್ಗ ಮೂಲದವರು ಎನ್ನಲಾಗಿದೆ.
ಮೆಸ್ಕಾಂ ಲಾರಿ- ಓಮಿನಿ ಹಾಗೂ ಆಲ್ಟೋ ಕಾರುಗಳ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್-ಕೊಟ್ಟಿಗೆಗಾರ ಮಧ್ಯೆ ಸರಣಿ ಅಪಘಾತ ನಡೆದಿದ್ದು ಭೀಕರ ಅಪಘಾತದಲ್ಲಿ ಮೆಸ್ಕಾಂ ಲಾರಿ, ಓಮ್ನಿ, ಆಲ್ಟೋ ನಡುವೆ ಡಿಕ್ಕಿ ಸಂಭವಿಸಿದೆ. ಧರ್ಮಸ್ಥಳದಿಂದ ವಾಪಸ್ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಓಮಿನಿ ವಾಹನದಲ್ಲಿದ್ದ ನಾಲ್ವರು ಸಾವಿಗೀಡಾಗಿದ್ದಾರೆ.ಮೂಡಿಗೆರೆ ಇಂದ ಕೊಟ್ಟಿಗೆಹಾರಕ್ಕೆ ಹೋಗುತ್ತಿದ್ದ ಮೆಸ್ಕಾಂ ಲಾರಿ ಎರಡೂ ಕಾರುಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂರು ಜನ ಸ್ಥಳದಲ್ಲೇ ಸಾವು ಕಂಡೆ ಓರ್ವ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಉಳಿದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g