October 18, 2024

MALNAD TV

HEART OF COFFEE CITY

ಸೆಲ್ಫಿ ದುರಂತಕ್ಕೆ ಯುವಕ ಬಲಿ : ಬಂಡೆ ಮೇಲಿಂದ ಬಿದ್ದು ಸಾವು

1 min read

 

ಸೆಲ್ಫಿ ಹುಚ್ಚಿಗೆ ಪ್ರವಾಸಿಗನೊಬ್ಬ ಬಂಡೆಗಳ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಹೆಬ್ಬೆ ಫಾಲ್ಸ್ ನಲ್ಲಿ ನಡೆದಿದೆ. ಹೈದರಾಬಾದ್ ನಿಂದ ಬಂದಿದ್ದ ಸ್ನೇಹಿತರಿಬ್ಬರಲ್ಲಿ ಓರ್ವ ದಾರುಣ ಸಾವು ಕಂಡಿದ್ದಾನೆ.

ಫಾಲ್ಸ್ ನಲ್ಲಿ ಕಾಲು ಜಾರಿ ಬಿದ್ದು ಪ್ರವಾಸಿಗನೊಬ್ಬ ದಾರುಣ ಸಾವು ಕಂಡಿದ್ದಾನೆ, ಬಂಡೆ ಮೇಲಿಂದ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟಿದ್ದಾನೆ. ಹೈದರಾಬಾದ್ ಮೂಲದ ಯುವಕ ಶ್ರವಣ್ (25) ಮೃತ ದುರ್ದೈವಿಯಾಗಿದ್ದು, ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ನಲ್ಲಿ ಘಟನೆ ನಡೆದಿದೆ. ಹೈದರಾಬಾದ್ ನಿಂದ‌ ಕಾಫಿನಾಡಿನ ಪ್ರವಾಸ ಕೈಗೊಂಡಿದ್ದ ಇಬ್ಬರು ಯುವಕರಲ್ಲಿ ಓರ್ವ ಸೆಲ್ಫಿ ಹುಚ್ಚಿಗೆ ಬಲಿಯಾಗಿದ್ದಾನೆ. ಇಂದು ಬೆಳಿಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್ ಗೆ ಇಬ್ಬರು ಸ್ನೇಹಿತರು ತೆರಳಿದ್ದರು.
ಹೆಬ್ಬೆ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುವ ವೇಳೆಯಲ್ಲಿ ಕಾಲು ಜಾರಿ ಬಿದ್ದು ಶ್ರವಣ್ ಸಾವನ್ನಪ್ಪಿದ್ದಾನೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಳೆಗಾಲದಲ್ಲಿ ಫಾಲ್ಸ್‌ ಗಳ ಬಳಿ ಸೆಲ್ಫಿ ದುರಂತ ಮರುಕಳಿಸಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!