October 18, 2024

MALNAD TV

HEART OF COFFEE CITY

ರಾಜಕೀಯ ದ್ವೇಷಕ್ಕೆ ಅಪ್ರಾಪ್ತರಿಂದ ಸುಳ್ಳು ಹೇಳಿಸಿದವನ ಮೇಲೆ ದಾಖಲಾಯ್ತು ಪೋಕ್ಸೋ ಕೇಸ್

1 min read

 

 

ರಾಜಕೀಯ ದ್ವೇಷಕ್ಕೆ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪವನ್ನು ಮಾಡಿಸಿದ ತಪ್ಪಿಗೆ ಶೃಂಗೇರಿ ಗ್ರಾಮ ಪಂಚಾಯ್ತಿ ಸದಸ್ಯ ಶಬರೀಶ್ ಇದೀಗ ತಾನೆ ತಗಾಲಾಕಿಕೊಂಡಿದ್ದಾನೆ ಶಬರೀಶ್ ವಿರುದ್ಧವೇ ಫೋಕ್ಸೋ ಪ್ರಕರಣ ದಾಖಲಾಗಿದ್ದು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ. 

 

ಲೈಂಗಿಕ ದೌರ್ಜನ್ಯದ ಕೇಸಲ್ಲಿ MLC ಸೂರಜ್ ರೇವಣ್ಣ‌ ಬಂಧನ ಬೆನ್ನಲೇ ಕಾಫಿನಾಡಲ್ಲೂ ಬಿಜೆಪಿ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರಿಬ್ಬರ ಮೇಲೆ ದೌರ್ಜನ್ಯದ ಆರೋಪ ಎಂಬ ಸುದ್ದಿ ನಿನ್ನೆ ದಿನವಿಡೀ ಹರಿದಾಡಿತ್ತು, ಆದರೆ ದಾಲ್ ಮೆ ಕುಚ್ ಕಾಲಾ ಹೈ ಎಂದು ಅನಿಸಿತ್ತು, ಅದು ಇಂದು ಸತ್ಯ ವಾಗಿದೆ. ಶೃಂಗೇರಿ ಬಿಜೆಪಿ ಪಕ್ಷದ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದಲಿತ ಬಾಲಕರ ಮೇಲೆ ಬಿಜೆಪಿ ಮುಖಂಡನಿಂದ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ 

ಸಲಿಂಗಕಾಮಕ್ಕೆ ಅಪ್ರಾಪ್ತ ಬಾಲಕರನ್ನ ಬಳಸಿಕೊಂಡ ಆರೋಪ ಸುಳ್ಳಾಗಿದೆ. ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಅಪ್ರಾಪ್ತ ಬಾಲಕರ ವಿಡಿಯೋ ಮಾಡಿ ಅದು ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ್ದ ಶೃಂಗೇರಿ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ

ಯ ಅಧಿಕಾರಿಗಳ ಕೌನ್ಸಿಲಿಂಗ್ ನಲ್ಲಿ ಸತ್ಯ ಬಯಲಾಗಿದೆ. ಅಪ್ರಾಪ್ತ ಬಾಲಕನ ಬಳಸಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಇಬ್ಬರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ರಾಜಕೀಯ ದ್ವೇಷಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುವಂತೆ ಬಾಲಕರಿಗೆ ಧಮ್ಕಿ ಹಾಕಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದ ಇಬ್ಬರ‌ ವಿರುದ್ಧ FIR ದಾಖಲಾಗಿದೆ. ಇಬ್ಬರಲ್ಲಿ ಓರ್ವನ ಬಂಧನವಾಗಿದ್ದು ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಪ್ರಾಪ್ತ ಬಾಲಕರನ್ನ ಬಳಸಿಕೊಂಡು ‌ದುರ್ಬಳಕೆಗೆ ಯತ್ನ ಮಾಡಿದ್ದಕ್ಕಾಗಿ

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರರಿಂದ ಶೃಂಗೇರಿ ಪೊಲೀಸರಿಗೆ ದೂರು ನೀಡಲಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಶಬರೀಶ್ ಹಾಗೂ ಸೂರ್ಯ ವಿರುದ್ಧ ರಾಘವೇಂದ್ರ ದೂರು ನೀಡಿದ್ದಾರೆ. ಸದ್ಯ ಶಬರೀಶ್ ನನ್ನು ಬಂಧಿಸಿರುವ ಶೃಂಗೇರಿ ಇನ್ಸ್‌ಪೆಕ್ಟರ್ ಜಿ.ಎಸ್ ಸಂದೀಪ್ ವಿಚಾರಣೆ ನಡೆಸುತ್ತಿದ್ದಾರೆ. ಪಟ್ಟಣ ಪಂಚಾಯ್ತಿ ಸದಸ್ಯ ಹರೀಶ್ ಶೆಟ್ಟಿ ಹಾಗೂ ಶಬರೀಶ್ ನಡುವೆ ವೈಯಕ್ತಿಕ. ಹಾಗೂ ರಾಜಕೀಯ ದ್ವೇಷವಿತ್ತು

ಸೂರಜ್ ರೇವಣ್ಣ ಪ್ರಕರಣ ‌ಹೊರ ಬರುತ್ತಿದ್ದಂತೆ ಬಾಲಕರನ್ನ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿ ಶೃಂಗೇರಿ ಬಿಜೆಪಿ ಮುಖಂಡ ಹರೀಶ್ ಶೆಟ್ಟಿ ವಿರುದ್ಧ ಇದೇ ರೀತಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಶಬರೀಶ್ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!