ಜನನಿಬಿಡ ರಸ್ತೆಯಲ್ಲಿ ಕ್ಷಣಮಾತ್ರದಲ್ಲಿ ನಕಲಿ ಕೀ ಬಳಸಿ ಓಮ್ನಿಯಲ್ಲಿದ್ದ ವಸ್ತುಗಳ ಕಳ್ಳತನ
1 min read
ನಗರದ ಜನನಿಬಿಡ ಇಂದಿರಾಗಾಂಧಿ ರಸ್ತೆಯಲ್ಲಿ ನಿಲ್ಲಿಸಿದ್ದ ವಕೀಲರೊಬ್ಬರ ಓಮ್ನಿ ಕಾರಿನಲ್ಲಿದ್ದ 42 ಸಾವಿರ ಹಣ ಬ್ಲೇಜರ್ ಹಾಗೂ ಮೊಬೈಲ್ ಅನ್ನು ಕಳ್ಳನೊಬ್ಬ ಕದ್ದ ಘಟನೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಯಾರಿಗೂ ಸಂದೇಹ ಬರದಂತೆ ನಕಲಿ ಕೀ ಬಳಸಿ ಚೋರಿ ಮಾಡಿದ್ದಾನೆ.
ನಕಲಿ ಕೀ ಬಳಸಿ ಓಮಿನಿ ಕಾರಿನಲ್ಲಿದ್ದ ವಸ್ತುಗಳನ್ನು ಚಾಲಾಕಿ ಕಳ್ಳನೊಬ್ಬ ಎಗರಿಸಿದ್ದಾನೆ. ಕಾರಿನಲ್ಲಿದ್ದ ವಕೀಲರ ಬ್ಲೇಜರ್ ಸೇರಿದಂತೆ 42 ಸಾವಿರ ಹಣ, ಮೊಬೈಲ್ ಕದ್ದು ಚೋರನು ಎಸ್ಕೇಪ್ ಆಗಿದ್ದಾನೆ. ನಕಲಿ ಕೀ ಬಳಸಿ ಓಮಿನಿ ಕಾರಿನ ಡೋರ್ ಓಪನ್ ಮಾಡಿದ ಕಳ್ಳ ವಸ್ತುಗಳನ್ನು ಎಗರಿಸಿದ್ದಾನೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರಿನ ಡೋರ್ ತೆಗೆದು ಕಳ್ಳತನ ಮಾಡಿದ್ದಾನೆ ಈ ಚೋರ. ಅಡ್ವೋಕೇಟ್ ದೀಕ್ಷಿತ್ ಎಂಬುವವರಿಗೆ ಸೇರಿದ ಓಮಿನಿ ಕಾರು ಇದಾಗಿದ್ದು, ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ಘಟನೆ ನಡೆದಿದೆ. ತಮ್ಮ ವಕೀಲ ಕಚೇರಿಯ ಮುಂಭಾಗ ಕಾರು ನಿಲ್ಲಿಸಿ ಕಾಫಿಗೆ ಹೋದಾಗ ಘಟನೆ ನಡೆದಿದೆ. ಕಳ್ಳನ ಕೈಚಳಕ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದೇ ಒಂದು ನಿಮಿಷದಲ್ಲಿ ಕಳ್ಳತನ ಮಾಡಿ ಚೋರ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g