ಖುದ್ದು ಫೀಲ್ಡ್ ಗೆ ಇಳಿದು ದನಗಳನ್ನು ಅರೆಸ್ಟ್ ಮಾಡಿಸಿದ ಎಸ್ಪಿ ವಿಕ್ರಮ್ ಅಮಟೆ
1 min readದನಗಳನ್ನು ಹಿಡಿಯಲು ಖುದ್ದು ರಸ್ತೆಗಿಳಿದಿದ್ದಾರೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ,, ಹೌದುಪೊಲೀಸರಿಂದ ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳ ಹಿಡಿಯೋ ಕಾರ್ಯಾಚರಣೆ ಒಂದು ನಡೆದಿದೆ. ನಗರದಲ್ಲಿ ಹಗಲಿರುಳೆನ್ನದೇ ದನಗಳ ಓಡಾಟದಿಂದ ಸಾಕಷ್ಟು ವಾಹನಗಳ ಅಪಘಾತಗಳು ಸಂಭವಿಸಿದ್ದು,ಖುದ್ದು ರಸ್ತೆಗೆ ಇಳಿದು ಇಂತಹ ಬಿಡಾಡಿ ದನಗಳನ್ನು ಎಸ್.ಪಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಹಿಡಿಯಲಾಯಿತು. ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಹಾಗೂ ಕೆ.ಎಂ.ರಸ್ತೆಯಲ್ಲಿ ಕಾರ್ಯಾಚರಣೆ ನಡೆದಿದ್ದು ಒಟ್ಟು 4 ಹಸುಗಳನ್ನು ಹಿಡಿದು ಗೋಶಾಲೆಗೆ ಬಿಟ್ಟದ್ದಾರೆ ಪೊಲೀಸರು, ಇತ್ತೀಚೆಗೆ ರಸ್ತೆಯಲ್ಲಿ ಹಸು ಅಡ್ಡ ಬಂದ ಕಾರಣ ಇಬ್ಬರ ಸಾವಾಗಿತ್ತು ಅಲ್ಲದೇ ಬೈಕಿನಿಂದ 60ಕ್ಕೂ ಹೆಚ್ಚು ಸವಾರರು ಬಿದ್ದು ಗಾಯಗೊಂಡಿದ್ದರು. ಇದನ್ನು ಗಮನಿಸಿ ಪೊಲೀಸರ ಜೊತೆ ಅಗ್ನಿಶಾಮಕ ದಳ, ಪಶುಸಂಗೋಪನೆ ಇಲಾಖೆ ನಗರಸಭೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಿಕೊಡಲಾಗಿದ್ದು, ದಂಡ ಕಟ್ಟಿ ದನಗಳನ್ನು ಬಿಡಿಸಿಕೊಂಡು ಹೋಗಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇನ್ನೊಂದು ಬಾರಿ ರಾಸುಗಳನ್ನ ರಸ್ತೆಗೆ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಎಸ್ಪಿ ಎಚ್ಚರಿಕೆ ನೀಡಿದರು. ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ನೂರಾರು ಸಿಬ್ಬಂದಿಗಳು ಈ ದನ ಹಿಡಿಯುವ ಕೆಲಸದಲ್ಲಿ ಭಾಗಿಯಾಗಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g