October 18, 2024

MALNAD TV

HEART OF COFFEE CITY

ನಿರಂತರ ಮಳೆಗೆ ಮನೆ ಹೊರಗೆ ನಿಲ್ಲಿಸಿದ್ದ ಆಟೋ ಮೇಲೆ ಬಿದ್ದ ಗೋಡೆ

1 min read

 

 

ಜಿಲ್ಲೆಯಲ್ಲಿ ಮಳೆಯಿಂದಾಗಿ ಅವಘಡಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಶಿಥಿಲಗೊಂಡ ಮನೆಗಳ ಗೋಡೆಗಳಂತೂ ಯಾವಾಗ ಬೀಳುತ್ತವೊ ಎಂಬ ಭೀತಿಯಲ್ಲಿ ಇರಬೇಕಾಗಿದೆ ಅದರಲ್ಲೂ ರಾತ್ರಿ ಮಲಗಿದ್ದ ವೇಳೆ ಬೆಳಿಗ್ಗೆ ಏಳುವಷ್ಟರಲ್ಲಿ ಏನಾಗುತ್ತೋ ಎಂಬದು ತಿಳಿಯದಂತಾಗಿದೆ.

 

ಕಾಫಿನಾಡಲ್ಲಿ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ, ಭಾರಿ ಗಾಳಿಗೆ ಮನೆಯ ಗೋಡೆ ಒಂದು ಕುಸಿದಿದೆ

ಚಿಕ್ಕಮಗಳೂರು ನಗರದ ಹೊರ ವಲಯದ ಅಲ್ಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯ ಗೋಡೆ ಹೊರ ಭಾಗಕ್ಕೆ ಬಿದ್ದಿದ್ದರಿಂದ ಅನಾಹುತ ತಪ್ಪಿದೆ, ಒಳ ಭಾಗಕ್ಕೆ ಬಿದ್ದಿದ್ರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಾಗೇಶ್ ಶೆಟ್ಟಿ ಎಂಬುವರ ಮನೆಯ ಮುಂಭಾಗದ ಗೋಡೆ ಸಂಪೂರ್ಣ ನಾಶವಾಗಿದೆ. 

ಆದರೆ ಮನೆಯ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಗೋಡೆ ಬಿದ್ದಿದ್ದು ಆಟೋ ಭಾಗಶಃ ಜಖಂ ಆಗಿದೆ. 

ನಾಗೇಶ್ ಶೆಟ್ಟಿ ಮನೆ ಬಳಿ ಆಟೋ ನಿಲ್ಲಿಸಿದ್ದ ಜಗದೀಶ್ ಆಟೋ ಕಳೆದು ಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಭೇಟಿಯನ್ನು ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಳೆಗೆ ಮನೆ ಗೋಡೆಗಳು ಬೀಳುವ ಪ್ರಕರಣಗಳು ಹೆಚ್ಚುತ್ತಿವೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!