ಬುರ್ಖಾ ಧರಿಸಿ ನಗರದಲ್ಲಿ ಓಡಾಡುತ್ತಿದ್ದ ಯುವಕನಿಗೆ ಹಿಡಿದು ಥಳಿಸಿದ ಸಾರ್ವಜನಿಕರು
1 min read
ಭಿಕ್ಷೆ ಬೇಡಲು ಬುರ್ಖಾ ಧರಿಸಿ ಚಿಕ್ಕಮಗಳೂರಿಗೆ ಬಂದ ಯುವಕನಿಗೆ ಸ್ಥಳೀಯರು ಸಖತ್ ಗೂಸಾ ಕೊಟ್ಟಿದಾರೆ. ಬೆರಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು ಶೃಂಗಾರ ಮಾಡಿಕೊಂಡು ಚಾಕು ಇಟ್ಟುಕೊಂಡ ಯುವಕನ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬುರ್ಖಾ ತೊಟ್ಟು ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಯುವಕನ ಓಡಾಟ ನಡೆಸುವಾಗ ಅನುಮಾನ ಗೊಂಡು ಜನರು ಹಿಡಿದಿದ್ದಾರೆ. ಹರೀಶ್ ಎಂಬ ಯುವಕನ ಕೈ ಬೆರಳು ಕಾಲು ನೋಡಿ ಅನುಮಾನ ಗೊಂಡ ಸ್ಥಳೀಯರು ಹಿಡಿದು ವಿಚಾರಿಸಿದ್ದಾರೆ. ಥೇಟ್ ಯುವತಿಯಂತೆ ಬುರ್ಖಾ ಧರಿಸಿ ನಿಂತಿದ್ದವನಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟಿದ್ದಾರೆ. ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಬಾಳೆಹೊನ್ನೂರು ಮೂಲದ ಹರೀಶ್ ಎಂಬ ಯುವಕನ್ನ ಸ್ಥಳೀಯರು ಥಳಿಸಿದ್ದಾರೆ. ಭಿಕ್ಷೆ ಬೇಡಲು ಬುರ್ಖಾ ಧರಿಸಿ ಬಂದಿದ್ದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಆದರೆ
ಬುರ್ಖಾ ಒಳಗೆ ಚಾಕು ಇಟ್ಟುಕೊಂಡಿದ್ದ ಬಂದಿದ್ದು ಸಾಕಷ್ಟು ಅನುಮಾನ ಹುಟ್ಟಿಸಿದ್ದು ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ತನಿಖೆ ವೇಳೆ ಬಾಳೆಹೊನ್ನೂರಿನಲ್ಲಿ ಬುರ್ಖಾ ಖರೀದಿ ಮಾಡಿದ್ದಾಗಿ ಗೊತ್ತಾಗಿದೆ
ಬಸವನಹಳ್ಳಿ ಪೊಲೀಸರು ಯುವಕನ ವಿಚಾರಣೆಗೊಳಪಡಿಸಿ ತಹಶಿಲ್ದಾರ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g