ಕೊಪ್ಪ ಪಿಎಸ್ಐ ಬಸವರಾಜ್ ವಿರುದ್ಧ ಠಾಣೆಯ ಮಹಿಳಾ ಸಿಬ್ಬಂದಿ ಗೆ ಲೈಂಗಿಕ ಕಿರುಕುಳ ಆರೋಪ
1 min read
ಕೊಪ್ಪ ಪೊಲೀಸ್ ಠಾಣೆಯ ಮಾನ ಬೀದಿಯಲ್ಲಿ ಹರಾಜಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಠಾಣೆಯ ಮಹಿಳಾ ಸಿಬ್ಬಂದಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ತಮ್ಮ ಮಾನಕ್ಕೆ ರಕ್ಷಣೆ ಕೊಡಿ ಅಂತ ಮಹಿಳಾ ಸಿಬ್ಬಂದಿಗಳು ಗೋಳಾಡುವಂತಾಗಿದೆ.
ಕೊಪ್ಪ PSI ನಿಂದ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮಹಿಳಾ PC ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಹಿಳಾ ಸಿಬ್ಬಂದಿ ಡೆತ್ ನೋಟ್ ಬರೆದಿಟ್ಟು ಕಳೆದ ರಾತ್ರಿ ಸೂಸೈಡ್ ಅಟ್ಟೆಂಪ್ಟ್ ಮಾಡಿದ್ದಾರಂತೆ, ಕಳೆದ ರಾತ್ರಿ ನಡೆದಿರುವ ಘಟನೆ ಚಿಕ್ಕಮಗಳೂರು ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯ PSI ಬಸವರಾಜು ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ.
PSI ನಿಂದ ಲೈಂಗಿಕ ಕಿರುಕುಳ ತಾಳಲಾರದೆ ನೊಂದ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ
ಹೇಳಿಕೊಳ್ಳಲು ಆಗದೆ ಬಿಡಲು ಆಗದೆ ಹಲವು ಮಹಿಳಾ ಸಿಬ್ಬಂದಿಗಳಿಂದ ನೋವು ಅನುಭವಿಸುತ್ತಿದ್ದಾರಂತೆ ಹೀಗೆ
ಕಿರುಕುಳ ತಾಳಲಾರದೆ ರಾತ್ರಿ ಏಕಾಏಕಿ ಠಾಣೆಯಿಂದ ಓಡಿ ಹೋದ ಮಹಿಳಾ ಸಿಬ್ಬಂದಿ ಡೆತ್ ನೋಡ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸುವಾಗ ವಿಷಯ ತಿಳಿದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ
ಸಹ ಸಿಬ್ಬಂದಿಗಳಿಂದ ಮನವೊಲಿಸಿ ಮಹಿಳಾ ಸಿಬ್ಬಂದಿಯ ರಕ್ಷಣೆ ಮಾಡಿದ್ದಾರೆ. ಈ ಹಿಂದೆಯೂ ಹಲವು ಠಾಣೆಗಳಲ್ಲಿ ಬಸವರಾಜು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು, ಈ ನಡುವೆ ಮೇಲಾಧಿಕಾರಿಗಳಿಂದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಸಂಪೂರ್ಣ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳು ಜಾಣ ನಡೆ ಇಡುತ್ತಿದ್ದಾರೆ. ಏತನ್ಮಧ್ಯೆ ಹಲವು ಅನುಮಾನಗಳಿಗೆ ಕೊಪ್ಪ ಠಾಣೆ ಲೈಂಗಿಕ ಕಿರುಕುಳ ಘಟನೆ ಕಾರಣವಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g