September 19, 2024

MALNAD TV

HEART OF COFFEE CITY

ಬ್ರಿಟೀಷರನ್ನು ಓಡಿಸಲು ಹೊರಬಂದ ಗಣಪ : ಕಸ್ತೂರಿ ರಂಗನ್ ವರದಿ ಬೇಡ ಎನ್ನುತ್ತಿದ್ದಾನೆ

1 min read

ಸದ್ಯ ಮಲೆನಾಡಿಗರ ನಿದ್ದೆ ಕೆಡಿಸಿರುವುದು ಒತ್ತುವರಿ ಖುಲ್ಲಾ ಎಂಬ ಗುಮ್ಮ, ಇಡೀ ಜಿಲ್ಲೆಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಬಡ ಜನರನ್ನು ಒಕ್ಕಲೆಬ್ಬಿಸುವ ಕಾನೂನು ಗಳೇ ಕಂಟಕವಾಗಿ ಕಾಡುತ್ತಿವೆ. ಇಂತಹದ್ದೇ ಮತ್ತೊಂದು ದುಸ್ವಪ್ನ ಮಲೆನಾಡಿಗರನ್ನು ಕಾಡುತ್ತಿದ್ದು ಇದೇ ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಜಾಗೃತಿಗೆ ಇದೀಗ ಖುದ್ದು ವಿಘ್ನ ನಿವಾರಕ, ಲಂಬೋದರ ಗಣಪತಿಯೇ ಮುಂದಾಗಿದ್ದಾನೆ. ಅಂದು ಬ್ರಿಟೀಷರನ್ನು ಭಾರತ ಬಿಟ್ಟು ತೊಲಗಿಸಲು ಗುಡಿಗಳಿಂದ ಬೀದಿಗೆ ಬಂದಿದ್ದ ಗಣಪ ಇಂದು ಮಲೆನಾಡ ಜನರ ಬದುಕು ಉಳಿಸಲು ತಾನೇ ಭಿನ್ನವಾಗಿ ದಾರಿಯನ್ನು ಹುಡುಕಿ ಕೊಟ್ಟಿದ್ದಾನೆ.

ಅಂದು ತಿಲಕರ ಮಹದಾಶಯದಂತೆ ಬ್ರಿಟೀಷರ ವಿರುದ್ದ ಜನ ಸಂಘಟನೆ ಗೊಂಡು ಹೋರಾಟಕ್ಕೆ ಸಜ್ಜಾಗಲು ದೇವಸ್ಥಾನದಿಂದ ಬೀದಿಗೆ ಬಂದಿದ್ದ ಗಣೇಶೋತ್ಸವ ಇಂದು ಮಲೆನಾಡಿಗೆ ಕಂಟಕವಾಗಿರುವ ಅಂಧ ಕಾನೂನು ಒಂದರ ವಿರುದ್ಧ ಜನ ಜಾಗೃತಿಗಾಗಿ ಬಳಕೆಯಾಗುತ್ತಿದೆ. ಮಲೆನಾಡಿಗರ ನೆತ್ತಿ ಮೇಲೆ ಕಸ್ತೂರಿ ರಂಗನ್ ಎಂಬ ವರದಿ ತೂಗುಗತ್ತಿ ಕಾಡುತ್ತಿದ್ದು ಈ ಬಾರಿಯ ಗಣೇಶ ಚತುರ್ಥಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕಳಸ ಮುಂತಾದೆಡೆ ಸಾರ್ವಜನಿಕ ಜಾಗೃತಿಗಾಗಿ ಬಳಕೆ ಮಾಡಲು ಮುಂದಾಗಿದ್ದಾರೆ ಕೆಲ ಸಂಘಟಕರು. ಒಂದು ವೇಳೆ ಕಸ್ತೂರಿ ರಂಗನ್ ವರದಿ ಜಾರಿಯಾದ್ರೆ ಎಲ್ಲಾ ಧರ್ಮಿಯರು ಎಲ್ಲಾ ಆಚರಣೆಯನ್ನ ಬಂದ್ ಮಾಡಬೇಕಾಗುತ್ತದೆ. ಎಂದು
ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಲೆನಾಡಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರದಿ ಜಾರಿಯಾದ್ರೆ ಧ್ವನಿ ವರ್ಧಕ ಬಳಕೆಗೂ ಮಲೆನಾಡು ಭಾಗದಲ್ಲಿ ನಿಷೇಧ ಬೀಳಲಿದೆ. ಅಂದರೆ ಗಣಪತಿಯನ್ನು ಕೂರಿಸಿದ ಕಡೆಗಳಲ್ಲಿ ತಮಟೆಯನ್ನು ಬಡಿಯುವಂತಿಲ್ಲ, ಡೋಲನ್ನೂ ಬಾರಿಸುಂತಿಲ್ಲ, ಪಟಾಕಿಯನ್ನು ಸಿಡಿಸುವಂತಿಲ್ಲ ಎಂದು ಸಾರಲಾಗುತ್ತಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ರೈತರು, ಹಳ್ಳಿ ಜನರು, ಗ್ರಾಮ ಪಂಚಾಯಿತಿ ಎಲ್ಲರೂ ಆಕ್ಷೇಪಣೆ ಸಲ್ಲಿಸಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ.
ಒಂದೊಮ್ಮೆ ಕಸ್ತೂರಿ ರಂಗನ್ ವರದಿ ಜಾರಿಯಾದ್ರೆ ಮಲೆನಾಡಿನ ಬದುಕಿನ ಜೊತೆಗೆ ಸಂಪ್ರದಾಯಗಳು ಬಂದ್ ಆಗಲಿವೆ. ವರದಿ ಜಾರಿಯಾದ್ರೆ ಕಾಫಿನಾಡಿನ ಅರ್ಧ ಮಲೆನಾಡು ಕಣ್ಮರೆಯಾಗಲಿದೆ. ಎಂದು ಜನರಿಗೆ ಇದರ ವಾಸ್ತವತೆ ತಿಳಿಸಲು ಹಾಗೂ
ಬದುಕಿಗಾಗಿ ಗಣೇಶ ಚತುರ್ಥಿಯನ್ನ ಸಾರ್ವಜನಿಕ ಜಾಗೃತಿಗಾಗಿ ಜಿಲ್ಲೆಯ ಮಲೆನಾಡಿನ ಕೆಲ ಭಾಗಗಳಲ್ಲಿ ಗಣೇಶೋತ್ಸವದಲ್ಲಿ ಈ ರೀತಿಯ ವಿಷಯ ಮಂಡನೆ ಮಾಡಲಾಗುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!