ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ರೀನಾ ಸುಜೇಂದ್ರ ಆಯ್ಕೆ
1 min readಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ರೀನಾ ಸುಜೇಂದ್ರ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್‌ರವರು ಅಧ್ಯಕ್ಷರಾದವರು ತಾಳ್ಮೆ, ಸಮಾಧಾನ, ನಗುಮುಖ ಇವುಗಳ ಜೊತೆಗೆ ಸದಸ್ಯರು ಸಮಸ್ಯೆಗಳನ್ನು ಹೇಳಿದಾಗ ಸ್ಥಳದಲ್ಲೇ ಪರಿಹರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಚಿಕ್ಕಮಗಳೂರಿಗೆ ಒಂದು ಹೆಮ್ಮೆ ಪಡುವಂತ ಸಂಘಟನೆಯಾಗಿದೆ. ಮಾತೃ ಸಂಘಕ್ಕೆ ಮಹಿಳಾ ಸಂಘ ಬೆನ್ನೆಲುಬಾದರೆ ಮಹಿಳಾ ಸಂಘ ಮಾತೃ ಸಂಘಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಹೀಗೆ ಒಟ್ಟಿಗೆ ಸೇರಿ ಸಮುದಾಯದ, ಸಮಾಜದ ಸೇವೆ ಜೊತೆಗೆ ಅಭಿವೃದ್ಧಿ ಮಾಡಬೇಕೆಂಬುದು ಎರಡು ಸಂಘಗಳ ಧ್ಯೇಯವಾಗಿದೆ ಎಂದರು.
ಅಭಿವೃದ್ಧಿ ಮತ್ತು ಸಂಘಟನೆಗಾಗಿ ಈ ಎರಡು ಸಂಘಗಳನ್ನು ಇದೇ ಉದ್ದೇಶವಾಗಿಟ್ಟುಕೊಂಡು ನಮ್ಮ ಹಿರಿಯರು ಸ್ಥಾಪನೆ ಮಾಡಿದ್ದಾರೆ. ಸಂಘದಲ್ಲಿ ವ್ಯಕ್ತಿಗೋಸ್ಕರ ಭಿನ್ನಾಭಿಪ್ರಾಯ ಬರಬಾರದು, ಮಹಿಳಾ ಸಂಘವನ್ನು ಗೌರವಿಸುವ ಗುಣ ಎಲ್ಲಾ ಪದಾಧಿಕಾರಿಗಳಲ್ಲಿ ಮೂಡಬೇಕಾಗಿರುವುದು ಅಗತ್ಯ ಎಂದು ಹೇಳಿದರು. ಹಾಲಿ ಮಹಿಳಾ ಸಂಘದ ಅಧ್ಯಕ್ಷೆ ಕಲ್ಪನಾ ಪ್ರದೀಪ್ ರವರು ಮಾತೃ ಸಂಘಕ್ಕೆ ಕಳೆದ ತಿಂಗಳಲ್ಲಿ ಎಐಟಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮುದಾಯ ಭವನ ಕೊಟ್ಟಿಲ್ಲವೆಂಬ ಪುಕಾರು ಹಬ್ಬಿಸಿರುವುದು ಕಲ್ಪನಾರ ಕಲ್ಪನೆಯಾಗಿದೆ. ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಈ ಕುರಿತು ಯಾವುದೇ ರೀತಿಯ ಮನವಿ ಪತ್ರ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು. ನೂತನವಾಗಿ ಅಧ್ಯಕ್ಷರಾಗಿರುವ ವೀಣಾರವರು ಕಳೆದ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಹೆಚ್ಚು ಅನುಭವ ಹೊಂದಿದ್ದು, ಈಗ ಅಧ್ಯಕ್ಷರಾಗಿರುವುದರಿಂದ ಎಲ್ಲರ ವಿಶ್ವಾಸ ಪಡೆದು ಕರ್ತವ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು. ನೂತನ ಅಧ್ಯಕ್ಷೆ ವೀಣಾ ಸುಜೇಂದ್ರ ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಎಲ್ಲಾ ನಿರ್ದೇಶಕರುಗಳಿಗೆ ಮತ್ತು ಮಾತೃ ಸಂಘದ ಪದಾಧಿಕಾರಿಗಳಿಗೆ ಗೌರವ ಪೂರ್ವಕ ನಮನ ಸಲ್ಲಿಸುವುದಾಗಿ ಹೇಳಿದರು. ಮಹಿಳಾ ಸಂಘಕ್ಕೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಲು ಬದ್ಧನಾಗಿದ್ದೇನೆ. ಜಿಲ್ಲಾ ಒಕ್ಕಲಿಗರ ಸಂಘದ ಸಹಕಾರದೊಂದಿಗೆ ಮಹಿಳಾ ಸಂಘವನ್ನು ನಡೆಸುವ ಭರವಸೆಯನ್ನು ನೀಡಿದರು. ಸಂಘದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಿ ತಮ್ಮ ಅಧಿಕಾರವಧಿಯಲ್ಲಿ ವಿಭಿನ್ನವಾಗಿ ಕಾರ್ಯ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g