ದತ್ತಭಕ್ತರ ಭಜನೆ, ಘೋಷಣೆಗೆ ಡಿ.ಸಿ ನಿರ್ಬಂಧ : ಶ್ರೀರಾಮಸೇನೆ ಆಕ್ರೋಶ
1 min readಶ್ರೀರಾಮಸೇನೆ ಪ್ರಾಯೋಜಿತ ದತ್ತಮಾಲಾ ಅಭಿಯಾನಕ್ಕೆ ಮಾಲಾಧಾರಿಗಳಿಗೆ ಇಲ್ಲಸಲ್ಲದ ನಿಬಂಧನೆಗಳನ್ನು ಹೇರಿರುವ ಚಿಕ್ಕಮಗಳೂರು ಜಿಲ್ಲಾಡಳಿತದ ಕ್ರಮಕ್ಕೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದತ್ತ ಮಾಲಾಧಾರಿಗಳು ಘೋಷಣೆ ಹಾಕುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ, ಭಜನೆ ಮಾಡುವಂತಿಲ್ಲ, ಧ್ಯಾನ ಮಾಡುವಂತಿಲ್ಲ, ಹೀಗೆ ಹತ್ತಾರು ನಿಬಂಧನೆಗಳನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಶ್ರೀರಾಮಸೇನೆ ನಡೆಸುವ ನವಂಬರ್ 10 ರ ದತ್ತಮಾಲಾ ಅಭಿಯಾನಕ್ಕೆ ಹೇರಿದ್ದಾರೆ. ಇದರಿಂದ ಕೆರಳಿ ಕೆಂಡವಾಗಿರುವ ಶ್ರೀರಾಮಸೇನೆ ಮುಖಂಡರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘರ್ಷಕ್ಕೆ ಎಡೆಮಾಡಿಕೊಡುವ ನಿಮ್ಮ ನಿಬಂಧನೆಗಳನ್ನು ಕೂಡಲೇ ಹಿಂದೆ ಪಡೆಯಿರಿ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನು ನೀಡಿರುವ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇದೊಂದು ಧರ್ಮ ವಿರೋಧಿ ಆದೇಶ ಎಂದು ಕಿಡಿ ಕಾರಿದ್ದಾರೆ. ನಿಮ್ಮ ಉದ್ದೇಶ ಏನು ದತ್ತಭಕ್ತರು ಮಾಲೆ ಹಾಕಬಾರದು, ದತ್ತಪೀಠಕ್ಕೆ ಬರಬಾರದು, ಶೋಭಾಯಾತ್ರೆ ಮಾಡಬಾರದು ಎಂಬುದೇ ಎಂದು ಪ್ರಶ್ನಿಸಿರುವ ಜಿಲ್ಲಾಡಳಿತ ನೀಡಿರುವ ಸೂಚನೆ ಎಷ್ಟು ಸರಿ ಯಾವ ಮಟ್ಟಕ್ಕೆ ನೀವು ಯೋಚನೆ ಮಾಡಿದ್ದೀರಿ ನಾವು ಮಾಡುವುದು ಶೋಭಾಯಾತ್ರೆ ಶವಯಾತ್ರೆ ಅಲ್ಲ ಎಂದು ಗುಡುಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g