October 18, 2024

MALNAD TV

HEART OF COFFEE CITY

ಬಿ.ಎಲ್‌ಸಂತೋಷ್ ಹೇಳಿಕೆಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಂಯೋಜಕ ತರೀಕೆರೆ ಉಸ್ತುವಾರಿ ಜಿ.ಬಿ.ಪವನ್ ಖಂಡನೆ

1 min read

ಚಿಕ್ಕಮಗಳೂರು. ಅನೇಕ ಮಠ ಮಂದಿರಗಳು ಹಣ ತೆಗೆದುಕೊಂಡು ರಾಜಕಾರಣಿಗಳ ದಿನಾಂಕಕ್ಕೆ ಸೀಮಿತವಾಗಿವೆ ಎಂಬ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರವರು ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಂಯೋಜಕ ತರೀಕೆರೆ ಉಸ್ತುವಾರಿ ಜಿ.ಬಿ.ಪವನ್ ತಿಳಿಸಿದ್ದಾರೆ.

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಬಿ.ಎಲ್.ಸಂತೋಷ್ ರವರು ಈ ಬಗ್ಗೆ ಹೊಂದಿರುವ ಅಭಿಪ್ರಾಯದ ವಿಡಿಯೋ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದ್ದು ರಾಜ್ಯದ ಜನತೆ ಗುರು ಪರಂಪರೆಯ ಬಗ್ಗೆ ಇಟ್ಟಿರುವ ಗೌರವ ಭಾವನೆಗೆ ದಕ್ಕೆ ತಂದಿದೆ ಮತ್ತು ಬಿಜೆಪಿಯ ಸಂಕುಚಿತ ಮನೋಭಾವನೆಯನ್ನು ಎತ್ತಿತೋರಿದೆ ಎಂದಿದ್ದಾರೆ.

ಅಕ್ಷರ,ಅನ್ನ,ಚಿಂತನೆಯ ದಾಸೋಹಗಳನ್ನು ನೀಡುತ್ತಾ ಅಪರಿಮಿತ ಆಸೆಗಳನ್ನಿಟ್ಟು ಪರಿಮಿತ ಸಂಪನ್ಮೂಲಗಳ ನಡುವೆ ಬದುಕುತ್ತಿರುವ ಮಾನವ ಸಮಾಜವನ್ನು ತಿದ್ದಿ ತೀಡುತ್ತಿರುವ ಮಠಮಂದಿರಗಳು ಉತ್ತಮ ಸಮಾಜ ಸೃಷ್ಟಿಸುವ ಬೃಹತ್ ಸಂಸ್ಥೆಗಳಾಗಿವೆ.

ಇವುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಯಾರು ಎಂಬುದನ್ನು ಸಂತೋಷ್ ಅರ್ಥಮಾಡಿಕೊಂಡು ಮಾತನಾಡಬೇಕೆಂದು ತಿಳಿಸಿದರು. ಸಂತೋಷ್ ರವರು ಅನೇಕ ಮಠಗಳು ಈ ಎಂದು ಉಲ್ಲೇಖಿಸಿರುವ ಅವರು ಯಾವ ಮಠಗಳು ಎಂದು ಸ್ಪಷ್ಟಪಡಿಸಲಿ ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬಿಜೆಪಿ ನಾಯಕರು ಮಠಮಂದಿರಗಳಿಗೆ ಹೋಗದಂತೆ ಕಟ್ಟಪ್ಪಣೆ ಹೊರಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ.

ಅನಾದಿ ಕಾಲದಿಂದ ಸೃಷ್ಟಿಯಾಗಿರು ಜಾತಿಪದ್ದತಿ ಎಂಬ ವಿಷ ವರ್ತುಲದ ನಡುವೆ ಇಂದಿಗೂ ಸಮಾಜದಲ್ಲಿ ಸಾಮರಸ್ಯ ಬದುಕಿಗೆ ಎಡೆಮಾಡಿಕೊಟ್ಟಿದೆ ಎಂದರೆ ಅದು ಮಠಮಂದಿರಗಳು ಎಲ್ಲ ವರ್ಗದ ಜನರಿಗೆ ತೋರಿರುವ ಮಾನವ ಸಮಾಜದ ಬದುಕಿನ ದಾರಿಯಿಂದಲೇ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ಧಾರೆ. ಕೂಡಲೆ ಸಂತೋಷ್ ರವರು ಈ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಕಿಡಿಕಾರಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!