November 1, 2024

MALNAD TV

HEART OF COFFEE CITY

ನಾಡಪ್ರಭು ಕಂಪೇಗೌಡರ 513ನೇ ಜನ್ಮದಿನಾಚರಣೆ

1 min read

ಚಿಕ್ಕಮಗಳೂರು: ನಾಡಪ್ರಭು ಕೆಂಪೇಗೌಡರು ದಿಟ್ಟ ದೂರದೃಷ್ಠಿ ಆಡಳಿತಗಾರ ಎಂದು ಜಿಲ್ಲಾ ಧಿಕಾರಿ ಕೆ.ಎನ್.ರಮೇಶ್ ಬಣ್ಣಿಸಿದರು.ಸೋಮವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನಾಡಪ್ರಭು ಕಂಪೇಗೌಡರ 513ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.1510ನೇ ಇಸವಿಯಲ್ಲಿ ಜನ್ಮತಾಳಿದ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯ ರಕ್ಷಣೆಗಾಗಿ ಹೋರಾಡಿದ ಮಹಾವೀರರು. ಯೋಜಿತ ನಗರ ನಿರ್ಮಾಣ ಕನಸನ್ನು 1500 ವರ್ಷಗಳ ಹಿಂದೇ ಕಂಡಿದ್ದರು. ನೀರಿನ ಸಮಸ್ಯೆ ಆಗಬಾರದೆಂದು ಬೆಂಗಳೂರು ಸುತ್ತಮುತ್ತ ಕೆರೆಗಳನ್ನು ಅಂದಿನ ಕಾಲದಲ್ಲೇ ನಿರ್ಮಿಸಿದ್ದರು ಎಂದರು.

ವಿಜ್ಞಾನ, ತಂತ್ರಜ್ಞಾನ ಕಲೆಯನ್ನು ಬಳಸಿಕೊಂಡು ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಬೆಂಗಳೂರು ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿದ್ದರೇ ಅದಕ್ಕೆ ಕಾರಣ ನಾಡಪ್ರಭು ಕೆಂಪೇಗೌಡರು. ಜಗತ್ತಿನ ಸುಂದರ ಮತ್ತು ಅಭಿವೃದ್ಧಿಗೊಂಡ ನಗರಗಳ ಪಟ್ಟಿಯಲ್ಲಿ ಬೆಂಗ ಳೂರು ಒಂದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು ಮಾತನಾಡಿ, ಈ ನಾಡಿನಲ್ಲಿ ಅನೇಕ ರಾಜ ವಂಶಸ್ಥರು ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಗೆ ಕೊಡುಗೆ ನೀಡಿದ್ದಾರೆ. ವಿಜಯ ನಗರ ಸಾಮ್ರಾಜ್ಯದಲ್ಲಿ ಸಾಮಂತನಾಗಿದ್ದ ನಾಡಪ್ರಭು ಕೆಂಪೇಗೌಡ ಅವರು ವಿಶ್ವಮಾನ್ಯವಾಗಿ ಬೆಳೆದ ಬೆಂಗಳೂರು ನಿರ್ಮಾಣದ ಖ್ಯಾತಿ ಅವರಿಗೆ ಸಲ್ಲುತ್ತದೆ ಎಂದರು.
ಯೋಜನೆ ಇಲ್ಲದೇ ಕಟ್ಟಿದ ಅನೇಕ ನಗರಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಕೆಂಪೇಗೌಡರು ದೂರದೃಷ್ಠಿಯಿಂದ ಕಟ್ಟಿದ ಬೆಂಗಳೂರು ನಗರ ಇಂದು ವಿಶ್ವವಿಖ್ಯಾತಿ ಪಡೆದಿದೆ. ಅವರ ದೂರದೃಷ್ಠಿ ಪರಿಕಲ್ಪನೆ ಎಲ್ಲರಿಗೂ ದಾರಿದೀಪವಾಗಬೇಕು ಎಂದು ತಿಳಿಸಿದರು.

ಹಿರಿಯ ಉಪ ವಿಭಾಗಾಧಿಕಾರಿ ಡಾ|ಎಚ್.ಎಲ್.ನಾಗರಾಜ್ ಮಾತನಾಡಿ, ವಿಜಯ ನಗರ ಸಾಮ್ರಾಜದ್ಯ ಸಾಮಂತರಾಗಿದ್ದ ಕೆಂಪೇಗೌಡರು. ಬೆಂಗಳೂರಿನ ಯಲಹಂಕದಲ್ಲಿ ಸಾಮ್ರಾಜ್ಯ ವನ್ನು ಕಟ್ಟಿ ಬೆಳೆಸಿದರು.ಕೆಂಪೇಗೌಡರು ಚಾರಿತ್ರಿಕ ಪುರುಷರಾಗಿದ್ದು, ಕೆಂಪೇಗೌಡರು ಸಾಮ್ರಾಜ್ಯ ಕಟ್ಟುವ ಕಾರ್ಯಕ್ಕೆ ಅವರ ಸೊಸೆ ಲಕ್ಷಿö್ಮoದೇವಿಯವರು ಪ್ರಾಣತ್ಯಾಗ ಮಾಡಿದ್ದು ಅವರ ತ್ಯಾಗ ಸ್ಮರಣಿಯ ಎಂದ ಅವರು ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ಯೋಜಿತವಾಗಿ ಕಟ್ಟಿದ ಬೆಂಗಳೂರಿನಲ್ಲಿ ದೇಶ ವಿದೇಶದ ಜನರು ನೆಲೆಸಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಕೆಂಪೇಗೌಡರವ ಹೆಸರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಟ್ಟು ಅವರ ಹೆಸರನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅವರ ಸಮಾಧಿ ಸ್ಥಳವನ್ನು ಅಭಿ ವೃದ್ಧಿಪಡಿಸುತ್ತಿದೆ. ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮವಲ್ಲಿ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಆಯ್ಕೆಯಾದ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ಒಕ್ಕಲಿಗರ ಸಂ ಘದ ಅಧ್ಯಕ್ಷ ಎನ್.ರಾಜಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ, ಎಐಟಿ ಪ್ರಾಂಶುಪಾಲ ಡಾ|ಜಯದೇವ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷö್ಮಣ್‌ಗೌಡ, ಪ್ರಧಾ ನ ಕಾರ್ಯದರ್ಶಿ ಮಾಡ್ಲು ಪ್ರಕಾಶ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇ ಶಕ ರಮೇಶ್ ಇದ್ದರು

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!