ಲವ್ ಜಿಹಾದ್ ಆರೋಪ ? ಸಹೋದರನಿಂದ ಠಾಣೆಗೆ ದೂರು
1 min readಚಿಕ್ಕಮಗಳೂರು : ಮಹಮ್ಮದ್ ರೋಫ್ ಎಂಬ ಕೊಪ್ಪ ಮೂಲದ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಸಹೋದರಿ ಫೋಟೋ ಹಾಕಿರುವ ಹಿನ್ನೆಲೆ ಯುವತಿಯ ಅಣ್ಣನಿಂದ ಲವ್ ಜಿಹಾದ್ ಪಿತೂರಿ ನಡೆಸಲಾಗಿದೆ ಎಂಬ ಅರೋಪ ಕೇಳಿಬಂದಿದೆ.
ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಂ ಮೂಲಕ ಕಳೆದ ಎರಡು ತಿಂಗಳಿoದ ಯುವತಿಯ ಖಾಸಗಿ ಫೋಟೋಳನ್ನು ತನ್ನ ಪ್ರೊಫೈಲ್ನಲ್ಲಿ ಹಂಚಿಕೊoಡಿದ್ದಾನೆ. ಫೋಟೋಗಳನ್ನು ಗಮನಿಸಿದ ಯುವತಿಯ ಸಹೋದರ ಈ ಕುರಿತು ಹರಿಹರಪುರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ ಠಾಣೆಯಲ್ಲಿ ಎಫ್. ಐ.ಆರ್ ದಾಖಲಾಗಿದ್ದು, ವಿಚಾರ ಸೈಬರ್ ಕ್ರೈಂ ವ್ಯಾಪ್ತಿಗೆ ಒಳಪಟ್ಟಿದ್ದು ಸೆನ್ ಕ್ರೈಂ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ.
ದೂರಿನಲ್ಲಿ ಸೆನ್ ಇನ್ಸೆಪೆಕ್ಟರ್ ಜಾಕೀರ್ ಹುಸೇನ್ ಮೇಲೆಯೂ ಕ್ರಮಕೈಗೊಳ್ಳದ ಆರೋಪ ಕೇಳಿಬಂದಿದೆ. ಸೋಶಿಯಲ್ ಮೀಡಿಯಾ ಹಿನ್ನೆಲೆ ಸೆನ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದ ಹರಿಹರಪುರ ಪೊಲೀಸರು ಸಲಹೆ ಸೂಚಿಸಿದ್ದಾರೆ. ಅದರಂತೆ ದೂರು ಸಂಭoದಿತ ಕ್ರಮಕೈಗೊಂಡಿಲ್ಲ ಎಂಬ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಎಫ್.ಐ.ಆರ್ ನಲ್ಲಿ ಮೊಹಮ್ಮದ್ ರೋಫ್ ಮೇಲೆ ಕೇಸ್ ದಾಖಲಾಗಿದೆ. ಅರೋಪ ಕುರಿತು ಎಸ್ಪಿಗೂ ಯುವತಿಯ ಸಹೋದರ ಲಿಖಿತ ದೂರು ನೀಡಿದ್ದಾರೆ. ಯುವತಿ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವುದಾಗಿ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಲವ್ ಜಿಹಾದ್ ಕುರಿತ ಅರೋಪಗಳು ಕೇಳಿಬರುತ್ತಿದ್ದು, ಈ ಪ್ರಕರಣದ ಸತ್ಯಾಂಶವು ಪೊಲೀಸ್ ತನಿಕೆಯ ನಂತರ ತಿಳಿಯಬುಹುದಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g