ನಿದ್ರೆಯ ಮಂಪರಿನಲ್ಲಿದ್ದ ವೇಳೆ ನಸುಕಿನ ಜಾವ ಮನೆಯ ಮೇಲೆ ಬಿದ್ದ ಬೃಹತ್ ಮರ
1 min read
ನಸುಕಿನ ಜಾವ ಗಾಡ ನಿದ್ರೆಯಲ್ಲಿ ಮಲಗಿದ್ದ ಕುಟುಂಬ ರಾತ್ರಿ ಇಡೀ ಬಾರೀ ಬಿರುಗಾಳಿ ಮಳೆ ಬೆಳಿಗ್ಗೆ ಕಣ್ಣು ಬಿಡುವ ವೇಳೆಗೆ ಮನೆಯ ಮೇಲೆ ಬಿದ್ದ ಮರ ಗಾಬರಿಗೊಂಡು ಎಚ್ಚರ ಕಳಚಿ ಬೆಚ್ಚಿಬಿದ್ದ ಮನೆಯ ಜನರು
ಇಂದು ಬೆಳಗಿನ ಜಾವ ನಿರಂತರ ಸುರಿಯುತ್ತಿರುವ ಮಳೆ ಜೊತೆ ಕಳಸ ತಾಲೂಕಿನಲ್ಲಿ ಬಿರುಗಾಳಿ ಅಬ್ಬರಕ್ಕೆ ಮನೆ ಮೇಲೆ ಬಿದ್ದ ಬೃಹತ್ ಮರ ಒಂದು ಗಿರಿಜಾ ಎಂಬುವವರ ಮನೆ ಮೇಲೆ ಬಿದ್ದು ಕಟ್ಟಡ ಸಂಪೂರ್ಣ ಜಖಂಗೊಂಡಿದೆ. ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಕಗ್ಗನಹಳ್ಳ ಗ್ರಾಮದಲ್ಲಿ ಘಟನೆ ನಡೆದಿದ್ದು ಬೆಳಗಿನ ಜಾವ ನಾಲ್ಕು ಗಂಟೆಗೆ ಮರ ಬಿದ್ದ ಪರಿಣಾಮ ಮನೆಯ ಗೋಡೆಗಳು ಕುಸಿದಿವೆ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳೆಲ್ಲ ಪುಡಿ ಪುಡಿಯಾಗಿ ನಾಶವಾಗಿವೆ. ಮನೆಯಲ್ಲಿ ನಿದ್ರೆಯ ಮಂಪರಿನಲ್ಲಿ ಮಲಗಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಕೂಲಿ ಮಾಡಿ ಜೀವನ ಮಾಡಿತ್ತಿದ್ದ ಗಿರಿಜಾ ಕುಟುಂಬಕ್ಕೆ ಮಳೆ ಗಾಳಿ ಸಂಚಕಾರ ತಂದೊಡ್ಡಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಸುತ್ತಮುತ್ತ ಕಳೆದ 15 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g