September 17, 2024

MALNAD TV

HEART OF COFFEE CITY

ಸಂಘಟನೆಯಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಬಾಲಕೃಷ್ಣ

1 min read

ಚಿಕ್ಕಮಗಳೂರು-ಜನಾಂಗದ ಸಂಘಟನೆಗೆ ಪ್ರತಿಯೊಬ್ಬರು ಸಹಕರಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾದ್ಯ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಒಕ್ಕಲಿಗರ ಭವನದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಸಹಕಾರಿ ರತ್ನ ಪ್ರಶಸ್ತಿಬಂದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮತ್ತು ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕಚೋಡಿ ಶ್ರೀನಿವಾಸ್ ಅವರಿಗೆ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮಾತನಾಡಿ, ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ೬೯ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿಗೆ ಆಹ್ವಾನಿಸಿ ವಿಶೇಷ ಗೌರವವನ್ನು ನೀಡಿದ್ದಾರೆ, ಚಿಕ್ಕಮಗಳೂರು ಜಿಲ್ಲೆಗೂ ನಮಗು ಅವಿನಾಭಾವ ಸಂಬoದವಿದೆ, ನಾವು ಸಹ ಕಾಫಿ ಬೆಳೆಗಾರರೇ, ೧೯೧೪ ರಿಂದ ಇತ್ತೀಚೆಗೆ ಮೂಡಿಗೆರೆ ಭಾಗದಲ್ಲಿ ನಮ್ಮ ತಾತರವರು ಮೂರುಗದ್ದೆ ಚೌಡಿಯನ್ನು ಪೂಜಿಸಿಕೊಂಡು ಬಂದಿದ್ದು ಇಂದಿಗು ಮುಂದುವರೆಸಿಕೊoಡು ಬಂದಿದ್ದೇವೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆಯುವ ಅವಕಾಶ ದೊರೆತಿರುವುದು ನನ್ನ ಜೀವಮಾನದ ಒಂದು ಸೌಭಾಗ್ಯ ಎಂದರು.

ಸಾಕಷ್ಟು ಸಭೆ ಸಮಾರಂಭಗಳಿಗೆ ಕಲ್ಯಾಣ ಮಂಟಪಕ್ಕೆ ಬಂದಾಗ ಜತೆಗಾರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೆ, ನಮ್ಮ ಸಮಾಜದ ಬಂದುಗಳು ತನು-ಮನ ಮತ್ತು ಧನದೊಂದಿಗೆ ಸಹಕಾರದಿಂದ ದೊಡ್ಡ ಪ್ರಮಾಣದ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿ, ಅದಕ್ಕೆ ಪೂರಕ ಎಂಬoತೆ ವಿದ್ಯಾ ಸಂಸ್ಥೆಯನ್ನು ತೆರೆದು ಶಿಕ್ಷಣವನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ, ಅಡಿಪಾಯದಿಂದ ಇಲ್ಲಿಯವರೆಗು ಸಹಕಾರ ಮಾಡಿದ ಎಲ್ಲರಿಗೂ ತಮ್ಮ ವಿಶೇಷ ಅಭಿನಂದನೆಗಳನ್ನು ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘ ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸಂಘದ ಒಡನಾಡಿಯಲ್ಲಿ ಇರುತ್ತೇನೆ, ಈ ಭಾಗದ ಪ್ರತಿನಿಧಿಯಾಗಿ ಪೂರ್ಣೇಶ್ ಅವರು ರಾಜ್ಯಮಟ್ಟದಲ್ಲಿ ಪೂರ್ಣ ಪ್ರಮಾಣದ ಸಹಕಾರ ಬೇಕೆಂದು ಶೈಕ್ಷಣಿಕವಾಗಿ ಪ್ರಸ್ತಾಪ ಮಾಡಿದ್ದಾರೆ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷನಾಗಿ ಪೂರ್ಣ ಪ್ರಮಾಣದಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಜನಾಂಗದ ಆಶೀರ್ವಾದ ಮತ್ತು ನಿರ್ದೇಶಕರ ಸಹಕಾರದಿಂದ ೩ನೇ ಬಾರಿಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದು, ನಾಡಪ್ರಭು ಕೆಂಪೇಗೌಡರ ಭವನದಲ್ಲಿ ಕಾರ್ಯ ನಿರ್ವಹಿಸುವ ಶಕ್ತಿಯನ್ನು ಜನಾಂಗದ ಪ್ರಮುಖರು, ಹಿರಿಯರು, ನಿರ್ದೇಶಕರು ನೀಡಿರುವ ಹಿನ್ನೆಲೆಯಲ್ಲಿ, ಗೌರವವನ್ನು ಎತ್ತಿಹಿಡಿಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರಲಾಗುತ್ತಿದೆ, ೨೧ ಗುಂಟೆ ಭೂಮಿ ಸಂಘಕ್ಕೆ ಕ್ರಯವಾಗಿದೆ, ಪೂಣೇಶ್ ರವರು ದಿನನಿತ್ಯ ಮೈಸೂರಿನ ಜೆ.ಡಿ.ಎಲ್.ಆರ್‌ಗೆ ತೆರಳಿ, ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನವನ್ನು ಪಡುತ್ತಿದ್ದಾರೆ, ಬೇಗ ಬಗೆಹರಿದಲ್ಲಿ ೩೦೦ ಜನ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಕಟ್ಟಡವನ್ನು ರಾಜ್ಯ ಸಂಘದಿoದ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿ ಕಾಫಿನಾಡಿನ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.

 


ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ಶ್ರವಣಬೆಳಗೋಳ ಶಾಸಕ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರು ಅಧ್ಯಕ್ಷರಾದ ನಂತರ ಪ್ರಥಮಬಾರಿಗೆ ಸಂಘದ ಕಚೇರಿಗೆ ಆಗಮಿಸಿದ್ದು, ನಮ್ಮ ಸಂಘದ ವತಿಯಿಂದ ಅವರಿಗೆ ಸನ್ಮಾನಿಸಲಾಗಿದೆ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘವು ಉನ್ನತ ಮಟ್ಟದಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಹಲವಾರು ಕಡೆಗಳಲ್ಲಿ ಕೇಳಿದ್ದಾರೆ, ಅವರು ಅಧ್ಯಕ್ಷ ಸ್ಥಾನದಲ್ಲಿ ಇರುವುದು ನಮ್ಮೆಲ್ಲರಿಗು ಹೆಮ್ಮೆಯ ವಿಷಯ, ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿರುವ ಕಚೋಡಿ ಶ್ರೀನಿವಾಸ್ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ದೋರೆತ್ತಿದ್ದು ಜಿಲ್ಲೆಗು, ಸಂಘ ಮತ್ತು ಜನಾಂಗಕ್ಕು ಹೆಮ್ಮೆಯ ವಿಚಾರ, ಸಹಕಾರಿ ರತ್ನದ ಜತೆಗೆ ಸಹಕಾರಿ ಬೀಷ್ಮರಾಗಲಿ ಎಂದು ತಿಳಿಸಿದರು.
ರಾಜ್ಯ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರು ನೂತನ ಅಧ್ಯಕ್ಷರಾದ ಮೇಲೆ ಒಳ್ಳೆಯ ಕಾರ್ಯಕ್ರಮಗಳನ್ನು ಕ್ರಿಯಾಶೀಲವಾಗಿ ಮಾಡಿಕೊಂಡು ಬರುತ್ತಿದ್ದು, ಅವರ ಕನಸ್ಸಿನಂತೆ ಒಕ್ಕಲಿಗರ ಸಂಘದ ಕಾರ್ಯಗಳು ನಡೆಯುತ್ತಿವೆ, ನಮ್ಮ ಜನಾಂಗದ ಮಾಚಿಗೊಂಡನಹಳ್ಳಿ ಶಾಲೆಯಲ್ಲಿ ಇರುವ ಜಾಗದಲ್ಲಿ ೧ ಕೋಟಿ ರೂ ವೆಚ್ಚದಲ್ಲಿ ಬಾಲಕ, ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡುವ ಪ್ರಯತ್ನದ ಜತೆಗೆ, ಒಕ್ಕಲಿಗರ ಕೆಂಪೇಗೌಡ ಜಯಂತೋತ್ಸವಕ್ಕೆ ರಾಜ್ಯದ ೧೩ ಜಿಲ್ಲೆಗಳಿಗೆ ೧ ಲಕ್ಷ ರೂ ವಾರ್ಷಿಕ ಅನುದಾನವನ್ನು ಪ್ರಥಮಬಾರಿಗೆ ಅಧ್ಯಕ್ಷರಿಂದ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘವು ನಮ್ಮ ಹಿರಿಯರ ಸಹಕಾರದಿಂದ ಬೆಳೆದುಬಂದ ಸಂಘ, ಜೆವಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂಜಿನಿಯರ್, ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ಉನ್ನತ ಹುದ್ದೆಗಳಲ್ಲಿದ್ದು ಇದು ನಮ್ಮ ಶಾಲೆಯ ಶಿಕ್ಷಕರ ಕೊಡುಗೆಯಾಗಿದೆ, ಸಮಾಜದಲ್ಲಿ ಒಕ್ಕಲಿಗರ ಸಂಘವನ್ನು ಗಟ್ಟಿಯಾಗಿ ಕಟ್ಟಬೇಕು ಎಂಬ ಮುಂದಾಲೋಚನೆಯಿoದ, ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಬಲಿಷ್ಟವಾಗಿ ಬೆಳೆಸಿ, ಮುಂದಿನ ಕೆಲಸವನ್ನು ಮಾಡಲು ನಮಗೆ ಬಿಟ್ಟುಹೊಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಪೂರ್ಣೇಶ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ನಿರ್ದೇಶಕರುಗಳಾದ ವಿಕ್ರಾಂತ್, ಶ್ಯಾಮ್, ಕೆ.ವಿ.ರವಿಕುಮಾರ್, ದಿನೇಶ್, ಕುಸುಮರಮೇಶ್, ಮಾಜಿ ನಿರ್ದೇಶಕ ಚಂದ್ರಪ್ಪ, ವ್ಯವಸ್ಥಾಪಕ ರಾಜು, ಸಿಇಓ ಕುಳ್ಳೇಗೌಡ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!