September 19, 2024

MALNAD TV

HEART OF COFFEE CITY

ದ್ರೋಹ ಮತ್ತು ಮೋಸದ ಬಜೆಟ್ – ಟಿ. ರಾಜಶೇಖರ್

1 min read

ಚಿಕ್ಕಮಗಳೂರು : ಅತೀ ನೀರಿಕ್ಷೆಯನ್ನು ಇಟ್ಟುಕೊಂಡಿದ್ದ ಜಿಲ್ಲೆಯ ಜನತೆಗೆ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ 2023-24 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲೆಗೆ ಶೂನ್ಯ ಕೊಡುಗೆ ನೀಡುವ ಮೂಲಕ  ಚಿಕ್ಕಮಗಳೂರು ಜನತೆಯನ್ನು ನಿರಾಶೆಗೊಳಿಸಿದ್ದಾರೆ. ಜಿಲ್ಲೆಯ ಮಲೆನಾಡು ಮತ್ತು ಬಯಲುಸೀಮೆಯ ಭಾಗದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ದೊರಕಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಇಂದಿನ ಬಜೆಟ್ ಮಂಡನೆಯಿಂದಾಗಿ ನೀರಿಕ್ಷೆಗಳೆಲ್ಲ ಹುಸಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚಿಕ್ಕಮಗಳೂರು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಕಲ್ಮರುಡಪ್ಪ ಮತ್ತು ಜಿಲ್ಲಾ ವಕ್ತಾರ ಟಿ. ರಾಜಶೇಖರ್ ಹೇಳಿದರು.

ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಜನ ಐದು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿರುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಚಿಕ್ಕಮಗಳೂರಿನ ಜನರಿಗೆ ಮೂರು ನಾಮ ಹಾಕಿದೆ. ಮತವನ್ನು ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಮೇಲೆ ಈ ಐದು ಜನ ಶಾಸಕರು ಚಿಕ್ಕಮಗಳೂರನ್ನು ಮರೆತಂತಿದೆ, ನಗರ ಅಭಿವೃದ್ಧಿಗಾಗಲಿ, ಅಡಿಕೆಗೆ ಬಂದಿರುವಂತಹ ಎಲೆ ಚಿಕ್ಕಿರೋಗ, ಕಾಫಿ ಹಾಗೂ ತೆಂಗು ಬೆಳೆಗಾರರಿಗೆ ನೇರವಾಗಿ ಯಾವುದೇ ಅನುದಾನ ಬಜೆಟ್‌ನಲ್ಲಿ ಮೀಸಲಿಟ್ಟಿರುವುದಿಲ್ಲಾ.

ಚಿಕ್ಕಮಗಳೂರನ್ನು “ಟೂರಿಸಂ ಹಬ್”ಆಗಿ ಮಾಡುವುದಾಗಿ ಎಲ್ಲಾ ಕಾಂಗ್ರೆಸ್ ಶಾಸಕರು ಕೊಚ್ಚಿಕೊಳ್ಳುತ್ತಿದ್ದರು ಆದರೆ ಟೂರಿಸಂಗೋಸ್ಕರ ಬಜೆಟ್‌ನಲ್ಲಿ ಒಂದು ರೂಪಾಯಿ ಅನುದಾನ ನೀಡದೇ ಚಿಕ್ಕಮಗಳೂರು ಜನರಿಗೆ ಮೋಸ ಮಾಡಿರುತ್ತಾರೆ. ಹಿಂದಿನ ಭಾಜಪ ಸರ್ಕಾರದಲ್ಲಿ ಮೆಡಿಕಲ್‌ ಕಾಲೇಜಿಗೆ 200 ಕೋಟಿ ರೂಗಳನ್ನು ಕೊಟ್ಟಿರುತ್ತಾರೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ 100 ರೂಗಳನ್ನು ಕೊಟ್ಟಿರುವುದಿಲ್ಲಾ. ಚಿಕ್ಕಮಗಳೂರುನಲ್ಲಿ ಹಾಲಿನ ಡೈರಿ ಸ್ಥಾಪನೆಗೆ ಬೇಡಿಕೆ ಇದ್ದು ಈ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇತ್ತು, ಆದರೆ ಶಾಸಕರ ಪ್ರಯತ್ನದ ಕೊರತೆಯಿಂದ ಚಿಕ್ಕಮಗಳೂರಿನ ಜನರಿಗೆ ನಿರಾಸೆಯಾಗಿದೆ.

“ 85,818 ಕೋಟಿರೂಪಾಯಿ ಈ ಬಜೆಟ್‌ನಲ್ಲಿ ಮಂಡಿಸಿರುವಂತೆ ಹೊಸ ಸಾಲ ಪಡೆಯಲಾಗುತ್ತದೆ, ಇದರಿಂದಾಗಿ ಪ್ರತೀಕನ್ನಡಿಗನ ಮೇಲೆ 1 ಲಕ್ಷರೂ. ಅಧಿಕ ಸಾಲ ಹೊರಿಸಲಾಗುತ್ತಿದೆ.”

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಯಾವುದೇ ಅನುದಾನ ಕೊಟ್ಟಿರುವುದಿಲ್ಲಾ, ಬೆಲೆ ಏರಿಕೆ ವಿರುದ್ಧ ಹೋರಾಡಿಕೊಂಡುಅಧಿಕಾರಕ್ಕೆಏರಿದಂತಹ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸಲ್ ಹಾಗೂ ಅಬಕಾರಿ ಮತ್ತು ದಿನನಿತ್ಯದ ಬಳಕೆಯ ವಸ್ತುಗಳ ಮೇಲಿನ ರಾಜ್ಯದ ಸುಂಕವನ್ನುಕಡಿಮೆ ಮಾಡಿರುವುದಿಲ್ಲಾ ಬದಲಾಗಿ ಅಬಕಾರಿ ಇಲಾಖೆಯಿಂದ 36 ಸಾವಿರಕೋಟಿ, ವಾಣಿಜ್ಯತೆರಿಗೆಯಿಂದ 1 ಲಕ್ಷದ 1 ಸಾವಿರಕೋಟಿ, ನೋಂದಣಿ ಮತ್ತು ಮುದ್ರಣ ಇಲಾಖೆಯಿಂದ 25 ಸಾವಿರ ಕೋಟಿ ಆದಾಯ ಬರುವುದಾಗಿ ಬಜೆಟ್‌ನಲ್ಲಿ ತೋರಿಸಿರುತ್ತಾರೆ, ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮೇಲೆ ತೆರಿಗೆಯ ಬರೆಯನ್ನು ಮತ್ತು ಪೆಟ್ರೋಲ್, ಡೀಸಲ್, ಅಬಕಾರಿ, ವಾಣಿಜ್ಯತೆರಿಗೆ, ನೋಂದಣಿ ಮತ್ತು ಮುದ್ರಣ ಸುಂಕಗಳನ್ನು ಹೆಚ್ಚು ಮಾಡುವುದಾಗಿ ಘೋಷಿಸಿದಂತಾಗಿದೆ.ಇದರಿಂದ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡಿರುವ ದ್ರೋಹ ಮತ್ತು ಮೋಸ ಇಂದಿನ ಬಜೆಟ್‌ನಲ್ಲಿ ತಿಳಿದಿರುತ್ತದೆ.

ಗ್ಯಾರಂಟಿಗಳ ಅನುಷ್ಠಾನದಲ್ಲು ನುಡಿದಂತೆ ನಡೆದಿಲ್ಲ, ಮತ್ತು ಈ ರಾಜ್ಯವನ್ನು ಸಾಲದ ಕೂಪಕ್ಕೆ ಕಾಂಗ್ರೆಸ್ ಸರ್ಕಾರ ತಳ್ಳಿದೆ, ಯಾವುದೇ ಅಭಿವೃದ್ಧಿಗೆ ಅನುದಾನವನ್ನು ನೀಡದಿರುವುದರಿಂದ ಕರ್ನಾಟಕ ರಾಜ್ಯವು 10 ವರ್ಷ ಅಭಿವೃದ್ಧಿಯಲ್ಲಿ ಹಿಂದೆ ಹೋದಂತಾಗಿದೆ, ಆದುದರಿಂದ ಈ ಬಜೆಟ್‌ ಗ್ಯಾರಂಟಿಗಳ ಅನುಷ್ಠಾನಕ್ಕೆ ರಾಜ್ಯವನ್ನು ಅಡಇಟ್ಟು ಜನರ ಜೇಬಿಗೆ ಕತ್ತರಿ ಹಾಕಲು ಮಾಡಿರುವ ಸಂಚು,ಆದುದರಿಂದ ಮುಂದಿನ 6 ತಿಂಗಳಲ್ಲಿ ಈ ಗ್ಯಾರಂಟಿ ಸರ್ಕಾರ ಹೋಗುವುದು “ಗ್ಯಾರಂಟಿ”ಎಂದು ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!