October 18, 2024

MALNAD TV

HEART OF COFFEE CITY

ಅಧಿಕಾರ-ಹಣ ಬಳಸಿ ಸಮಾವೇಶ ಮಾಡಬಹುದು, ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಧ್ಯವಿಲ್ಲ : ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ

1 min read

 

ಚಿಕ್ಕಮಗಳೂರು : ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಿದ್ದರಂತೆ ಸಿಎಂ ಸಿದ್ದರಾಮಯ್ಯನವರು ನಾನು ಯಾರಿಗೂ ಹೆದರಲ್ಲ, ಬಿಜೆಪಿ-ಜೆಡಿಎಸ್ ಗೆ ಹೆದರಲ್ಲ, ರಾಜೀನಾಮೆ ಕೊಡಲ್ಲ ಎಂದು ಹೇಳುತ್ತಿದ್ದಾರೆ‌. ಹಾಗಾದರೆ, ನಾವು ನಿಮ್ಮನ್ನ ಏನೆಂದು ಕರೆಯಬೇಕೆಂದು ಮಾಜಿ ಸಚಿವ ಸಿ.ಟಿ.ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಅವರಿಗೆ ಸಂವಿಧಾನ-ಕಾನೂನಿನ ಬಗ್ಗೆ ಭಯವಿಲ್ಲ.‌ನೈತಿಕತೆ ಪ್ರಜ್ಞೆಯೂ ಇಲ್ಲ.ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಅವರು ಜನರಿಗಿಂತಾ ದೊಡ್ಡವರಾ ಎಂದು ಪ್ರಶ್ನಿಸಿದ್ದಾರೆ.ಜನ, ಸಂವಿಧಾನ, ಕಾನೂನು, ನ್ಯಾಯಾಲಯಕ್ಕೆ ಹೆದರಲ್ಲ ಅಂದ್ರೆ, ನಾವು ಮನುಷ್ಯರು ಅನ್ಕೊಳ್ಳಾದಾ ಇಲ್ಲ ರಾಕ್ಷಸರು ನಾವು ಯಾರಿಗೂ ಹೆದರಲ್ಲ ಅಂತಿದ್ರಂತೆ, ಹಾಗೇ ಅನ್ಕೋಬೇಕಾ ಎಂದು ವ್ಯಂಗ್ಯವಾಡಿದ್ದಾರೆ.‌ ರಾಯಚೂರಿನ ಸಮಾವೇಶದ ಕುರಿತು ಮಾತನಾಡಿದ ಅವರು, ಅಧಿಕಾರ-ಹಣ ಉಪಯೋಗಿಸಿಕೊಂಡು ಯಾವ ಸಮಾವೇಶಬೇಕಾದರೂ ಮಾಡಬಹುದು. ಆದರೆ, ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಆಗಲ್ಲ. ಭ್ರಷ್ಟಾಚಾರ ಭ್ರಷ್ಟಾಚಾರವೇ, ಉಪ್ಪು ತಿಂದೋನು‌ ನೀರು ಕುಡಿಯಬೇಕು, ಅದು ಪ್ರಕೃತಿ ಧರ್ಮ ಎಂದಿದ್ದಾರೆ. 

 

ಇದೇ ವೇಳೆ, ಮತ್ತೆ ಮುನ್ನೆಲೆಗೆ ಬಂದ ಜಾತಿ ಜನಗಣತಿ ವಿಚಾರಕ್ಕೆ ಸಂಬಂಧಿಸಿದಂತೆ, ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡೋ ದೃಷ್ಟಿಯಿಂದ ಮುಂದುವರಿದರೆ ಸಮಸ್ಯೆ ಇಲ್ಲ.‌ಆದರೆ, ಸಮಾಜ‌ ಒಡೆಯಲು, ಜಾತಿ ಎತ್ತಿಕಟ್ಟಲು, ರಾಜಕೀಯಕ್ಕೆ ಮಾಡಿದ್ರೆ ಮಾತ್ರ ಯಾರೂ ಕ್ಷಮಿಸಲ್ಲ. ಆದರೆ, ಎಚ್.ಎಂ. ರೇವಣ್ಣ ಆರ್.ಎಸ್.ಎಸ್. ಹಾಗೂ ಬಿಜೆಪಿ ವಿರೋಧ ಎಂದಿದ್ದಾರೆವಿರೋಧಿಸಿದ್ದು ಆರ್.ಎಸ್.ಎಸ್. ಬಿಜೆಪಿ ಅಲ್ಲ. ನೆಹರೂ ವಿರೋಧಿಸಿದ್ದು. ರಾಹುಲ್ ಗಾಂಧಿಯವರ ಮುತ್ತಜ್ಜ, ಇಂದಿರಾಗಾಂಧಿ ತಂದೆ, ರಾಜೀವ್ ಗಾಂಧಿ ಅಜ್ಜ ನೆಹರೂ ಮೀಸಲಾತಿ ವಿರೋಧಿಸಿದ್ದು. ಅಭಿವೃದ್ಧಿ, ದಕ್ಷತೆಗೆ ಅಡ್ಡಿಯಾಗುತ್ತೆಂದು ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ನೆಹರೂ.‌ ರೇವಣ್ಣ ತಪ್ಪು ತಿಳಿದಿದ್ದಾರೆ. ನೆಹರೂ ಬಿಜೆಪಿ-ಆರ್.ಎಸ್.ಎಸ್.ನವರಲ್ಲ. ಕಾಂಗ್ರೆಸ್ಸಿಗರು. ಮೀಸಲಾತಿಗೆ ವಿರೋಧ ಇದ್ದು. ಈಗ ಕಾಂಗ್ರೆಸ್ ನಾಟಕ ಆಡ್ತಿದೆ ಎಂದು ಕಿಡಿಕಾರಿದ್ದಾರೆ. ಮಂಡಲ್‌ ಆಯೋಗವನ್ನ ಅಡಿಗೆ ಹಾಕಿಕೊಂಡು ಕೂತಿದ್ದು ಕಾಂಗ್ರೆಸ್. ಆರ್.ಎಸ್.ಎಸ್. ಬಿಜೆಪಿ ವಿರೋಧ ಮಾಡಿಲ್ಲ, ಮಾಡೋದು ಇಲ್ಲ ಎಂದಿದ್ದಾರೆ. 

 

ಕಾಂಗ್ರೆಸ್ ದಲಿತರನ್ನ ಸಿಎಂ ಮಾಡೋದಾಗಿದ್ರೆ ಪರಮೇಶ್ವರ್ ಅವರನ್ನ ಏಕೆ ಸೋಲಿಸ್ತಿದ್ರು.‌ ಕಾಂಗ್ರೆಸ್ಸಿನದ್ದು ಯೂಸ್ ಅಂಡ್ ಥ್ರೋಅಷ್ಟೆ.ಉಪಯೋಗಿಸಿಕೊಳ್ಳುವುದು, ಬಿಸಾಕೋದು ಅವರ ನೀತಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು.‌ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರನ್ನೇ ಹೆಚ್ಚಿನ ರಾಜ್ಯಗಳಲ್ಲಿ ಸಿಎಂ ಮಾಡಿತ್ತು.ಆದರೆ, ಅವರು ಗೆಲ್ಲದಂತೆ ನೋಡಿಕೊಂಡು ಸೋಲಿಸಿದರು. ಖರ್ಗೆ 60 ವರ್ಷ‌ ರಾಜಕಾರಣ ಮಾಡಿದ್ದಾರೆ. 60 ವರ್ಷ ದಾಟಿದೆ. 60 ವರ್ಷ ರಾಜಕಾರಣದಲ್ಲಿ ಅಷ್ಟು ಸಿನಿಯಾರಿಟಿ ಇದ್ರು ಸಿಎಂ ಆಗ್ಲಿಲ್ಲ.ಕಾಂಗ್ರೆಸ್ ಪಕ್ಷ ದಲಿತರನ್ನ ನಿಜಕ್ಕೂ ಸಿಎಂ ಮಾಡುತ್ತಾ. ಕಾಂಗ್ರೆಸ್ಸಿನ ನೀತಿ ಯೂಸ್ ಅಂಡ್ ಥ್ರೋ ಅಷ್ಟೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!