September 21, 2024

MALNAD TV

HEART OF COFFEE CITY

ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಶೆಟ್ಟಿ ನೇಮಕ

1 min read

 

ಬಿಜೆಪಿ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಶೆಟ್ಟಿ ನೇಮಕರಾಗಿದ್ದಾರೆ.

ಪೈಪೋಟಿ ನಡುವೆ ದೇವರಾಜ್ ಶೆಟ್ಟಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ನೂತನ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೆಸರು ಘೋಷಿಸಿದ್ದಾರೆ. ರಾಜ್ಯದ 39 ಘಟಕಗಳಿಗೂ ಅಧ್ಯಕ್ಷರನ್ನು ಏಕ ಕಾಲದಲ್ಲಿ ನೇಮಕ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹತ್ತಾರು ಜನರು ಜಿಲ್ಲಾಧ್ಯಕ್ಷ‌ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಮೂವರ ಹೆಸರು ಕೇಳಿ ಬಂದಿತ್ತು. ಅದರಲ್ಲೂ ದೇವರಾಜ್ ಶೆಟ್ಟಿ ಹೆಸರು ಪೈಪೋಟಿ ಯಲ್ಲಿ ಮುಂಚೂಣಿಯಲ್ಲಿತ್ತು. ನಿರೀಕ್ಷೆ ಯಂತೆ ದೇವರಾಜ್ ಶೆಟ್ಟಿ ಹೆಸರು ಆಯ್ಕೆಯಾಗಿದೆ. ದೇವರಾಜ್ ಶೆಟ್ಟಿ ಹೆಸರು ಜಿಲ್ಲಾಧ್ಯಕ್ಷರಾಗಿ ಪ್ರಕಟಗೊಳ್ಳುತ್ತಿದ್ದಂತೆ ಕಾರ್ಯಕರ್ತರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದ್ದು, ಶೆಟ್ಟಿ ಕುಟುಂಬಸ್ಥರಲ್ಲಿ ಹರ್ಷೋದ್ಗಾರ ಹೆಚ್ಚಿದೆ. ಈ ಮೂಲಕ ಸಂಕ್ರಾಂತಿಯ ಸಿಹಿಯನ್ನು ಬಿಜೆಪಿ ಪಕ್ಷ ನೀಡಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನೇಮಕಾತಿ ಮಹತ್ವ ಪಡೆದಿದ್ದು ನೂತನ ಜಿಲ್ಲಾಧ್ಯಕ್ಷರ ಹೆಗಲಿಗೆ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ಹೊರಿಸಿದಂತಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!