ಸರ್ಕಾರಿ ಶಾಲೆಯನ್ನೇ ಅಡ್ಡಾ ಮಾಡಿಕೊಂಡು ಎಣ್ಣೆ ಪಾರ್ಟಿ ಮಾಡಿದ ಕುಡುಕರು
1 min readಕುಡುಕರಿಗೆ ಅಡ್ಡಾಗಳ ಕೊರತೆ ಎದುರಾದಂತೆ ಕಾಣುತ್ತಿವೆ. ರಾಜ್ಯ ಸರ್ಕಾರ ಮದ್ಯದ ದರ ಏರಿಸಿದ ನಂತರ ಬಾರ್ ರೆಸ್ಟೋರೆಂಟ್ ಗಳಿಗೆ ಹೋಗುವ ಕುಡುಕರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಇದರ ಪರಿಣಾಮ ಖಾಲಿ ಜಾಗ ಸಿಕ್ಕರೆ ಸಾಕು ಅದೇ ಕುಡುಕರ ಅಡ್ಡಾ ಆಗುತ್ತಿವೆ. ಚಿಕ್ಕಮಗಳೂರು ನಗರದ ಹೊರವಲಯದ ವಸ್ತಾರೆ ಬಳಿ ಶಾಲಾ ಆವರಣವನ್ನು ಬಿಡದೆ ಅಡ್ಡಾ ಮಾಡಿಕೊಂಡಿದ್ದಾರೆ.
ಸರ್ಕಾರಿ ಶಾಲೆ ಆವರಣದಲ್ಲೇ ರಾತ್ರಿ ಯಿಡೀ ಎಣ್ಣೆ ಪಾರ್ಟಿ ಮಾಡಿಕೊಂಡು ಬಾರ್ ಮಾಡಿಕೊಂಡ ಕಿಡಿಗೇಡಿಗಳು
ಕುಡಿದು, ಕಿರುಚಾಡಿ ಮದ್ಯದ ಬಾಟಲಿಗಳನ್ನು ಪುಂಡರು ಬಿಟ್ಟುಹೋದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಯಲ್ಲಿ ನಡೆದಿದೆ ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಪ್ರತಿ ದಿನವೂ ಎಣ್ಣೆ ಪಾರ್ಟಿ ಮಾಡಲು ಸರ್ಕಾರಿ ಶಾಲೆಯೇ ಅಡ್ಡ ಆಗಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ
ರಾತ್ರಿ ಎಣ್ಣೆ ಪಾರ್ಟಿ ಮಾಡಿದ ವಸ್ತುಗಳನ್ನು ವಿದ್ಯಾರ್ಥಿಗಳೇ ಸೇರಿ ಸ್ವಚ್ಛಗೊಳಿಸಿದ್ದಾರೆ. ಕೃತ್ಯ ಎಸಗುವ ಯುವಕರ ವಿರುದ್ಧ ಸೂಕ್ತ ಕ್ರಮಕ್ಕೆ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g