September 19, 2024

MALNAD TV

HEART OF COFFEE CITY

ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಿರಬೇಕು – ವಿಶ್ವನಾಥ್

1 min read

ಚಿಕ್ಕಮಗಳೂರು – ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ, ಸರ್ಕಾರ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಮಾಡಲು ಹೆಚ್ಚಿನ ಶ್ರಮ ಹಾಕಬೇಕೆಂದು ಎಸ್.ಡಿ.ಎಂ.ಸಿ ಅಧ್ಯಕ್ಷ ವಿಶ್ವನಾಥ್ ತಿಳಿಸಿದರು.
ನಗರದ ಬಸವನಹಳ್ಳಿಯ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠ ಶಾಲೆ ಬಸವನಹಳ್ಳಿಯಲ್ಲಿ ತಾಲೂಕು ಸವಿತಾ ಸಮಾಜ ಮತ್ತು ದಲಿತ್ ಜನ ಸೇನೆವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಸರ್ಕಾರ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸದೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಊಟದ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೋರೆಯುತ್ತದೆ, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು, ಸರ್ಕಾರ ಶಾಲಾ ಮಕ್ಕಳಿಗೆ ಹಾಲು, ಊಟ, ಸಮವಸ್ತç ಮತ್ತು ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.
ನನ್ನ ಮಗಳು ಸಹ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಯಾವುದೇ ಬೆಳವಣಿಗೆ ಹಿಂದೆ ಸ್ನೇಹಿತರು ಮತ್ತು ಹಿತೈಷಿಗಳು ಇರುತ್ತಾರೆ, ನಾನು ಈ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷನಾದ್ದರಿಂದ ಸ್ನೇಹಿತರೆಲ್ಲರೂ ನನ್ನನ್ನು ಗೌರವಿಸಿದ್ದಾರೆ ಎಂದರು.
ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳು ನಮ್ಮ ಮಕ್ಕಳೇ, ವಿದ್ಯಾರ್ಥಿಗಳು ಶಾಲೆಗೆ ಸಂಬAಧಪಟ್ಟ ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಖುದ್ದಾಗಿ ತಿಳಿಸಬಹುದು, ಈಗಿನ ಆಧುನಿಕ ಯುಗಕ್ಕೆ ತಕ್ಕಂತ ಶೌಚಾಲಯ ಬದಲಾವಣೆ ಮಾಡಬೇಕೆಂದು ಶಾಲಾ ಮುಖ್ಯೋಪದ್ಯಾಯರೊಂದಿಗೆ ಚರ್ಚಿಸಲಾಗಿದ್ದು ಮತ್ತು ಸತತ ಪ್ರಯತ್ನದಿಂದ ೧೦ ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದರು.
ಯಾವುದೇ ಒಂದು ಕೆಲಸವಾದರು ಸಂಘಟಿತವಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಅಭಿವೃದ್ಧಿಪಡಿಸಲು ಸಾದ್ಯ, ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯು ಅವರ ಜೀವನದ ಮೈಲಿಗಲ್ಲು, ಗುರುಗಳಲ್ಲಿ ಶ್ರದ್ಧೆ ಮತ್ತು ಗುರು ಭಕ್ತಿ ಇದ್ದವರು ಮಾತ್ರ ಜೀವನಲ್ಲಿ ಏನನ್ನಾದರು ಸಾಧಿಸಲು ಸಾದ್ಯ, ಈ ಹಿಂದೆ ವ್ಯಾಸಂಗ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದು, ಅವರು ಶಾಲೆಗೆ ದಾನವನ್ನು ನೀಡಿದ್ದಾರೆ ಅಂತವರು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು ಅವರ ದಾರಿಯಲ್ಲಿ ನಡೆಯುವಂತೆ ತಿಳಿಸಿದರು.
ಸರ್ವಪಲ್ಲಿ ರಾಧಾಕೃಷ್ಣ ರವರು ತಮ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚಾರಣೆಯನ್ನಾಗಿ ಆಚರಣೆ ಮಾಡಿದ್ದು, ಆ ದಿನದಂದು ನಾವೆಲ್ಲರೂ ಶ್ರದ್ಧೆಯಿಂದ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಬೇಕು, ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ಸತ್ಯನಾರಾಯಣ್, ಖಜಾಂಚಿ ರಾಘವೇಂದ್ರ, ದಲಿತ್ ಜನಸೇವೆಯ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಉಪಾಧ್ಯಕ್ಷರಾದ ಸಿ.ಮಾದವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉದಯ್ ಕುಮಾರ್, ಸಹ ಕಾರ್ಯದರ್ಶಿ ನಟರಾಜ್, ಶ್ರೀನಿವಾಸ್, ರಶ್ಮಿ, ಮೆಹಬೂಬ್, ಮುಖ್ಯ ಶಿಕ್ಷಕರಾದ ಪ್ರಭಾಕರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!