September 8, 2024

MALNAD TV

HEART OF COFFEE CITY

ಚಿಕ್ಕಮಗಳೂರು ನಗರಕ್ಕೆ ನೀರೊದಗಿಸುವ ಹಿರೇಕೊಳಲೆ ಕೆರೆ ಕೋಡಿ

1 min read

 

 

ಚಿಕ್ಕಮಗಳೂರು ನಗರಕ್ಕೆ ನೀರೊದಗಿಸುವ ಹತ್ತಿರದ ಪ್ರವಾಸಿ ಸ್ಥಳ ಹಿರೇಕೊಳಲೆ ಕೆರೆ ಕೋಡಿ ಹೊಡೆದು ಮೈದುಂಬಿ ಹರಿಯುತ್ತಿದೆ. ಕಳೆದ 15 ದಿನಗಳ ನಿರಂತರ ಮಳೆಗೆ ತುಂಬಿ ಹರಿಯುತ್ತಿದ್ದು ಕೆರೆಯ ವಿಹಂಗಮ ನೋಟ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು ಕೈ ಬೀಸಿ ಕರೆಯುತ್ತಿದೆ. 

 

ಚಿಕ್ಕಮಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಭಾರೀ ವರ್ಷಧಾರೆಯಿಂದಾಗಿ ಐತಿಹಾಸಿಕ ಹಿರೇಕೊಳಲೆಕೆರೆ ಸಂಪೂರ್ಣತುಂಬಿ ಕೊಡಿ ಬಿದ್ದಿದೆ. ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ದೊಡ್ಡ ಕೆರೆ ಇದಾಗಿದ್ದು ನಗರವಾಸಿಗಳ ನೀರ ಕೊರತೆ ನೀಗಿಸಿದೆ. ಕೆರೆ ಭರ್ತಿಯಿಂದಾಗಿ ಚಿಕ್ಕಮಗಳೂರು ನಗರದ ನಿವಾಸಿಗಳಲ್ಲಿ ಸಂತಸ ಮೂಡಿದಂತಾಗಿದೆ. ವರ್ಷವಿಡಿ ‌ ಹಲವು ಬಡಾವಣೆಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಆಸರೆಯಾಗಿದೆ. 

ತುಂಬಿದ ಕೆರೆಯ ಸೌಂದರ್ಯ ನೋಡಲು ಸ್ಥಳೀಯರು ಮುಗಿಬಿದ್ದು ಆಗಮಿಸುತ್ತಿದ್ದಾರೆ. ಗಿರಿ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಹಿರೇಕೊಳಲೆ ಕೆರೆ ಭರ್ತಿಯಾಗಿದೆ

ಚಿಕ್ಕಮಗಳೂರು ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಕೆರೆ ಕಳೆದ 15 ದಿನಗಳ ಹಿಂದೆ ನೀರಿಲ್ಲದೇ ಸೊರಗಿದಂತಿತ್ತು .

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!