September 17, 2024

MALNAD TV

HEART OF COFFEE CITY

ಕಿರ್ಲೋಸ್ಕರ್ ಕಂಪನಿಯ ಹೊಸ ಜನರೇಟರ್ ಅನಾವರಣ, ದೇಶ ಬಿಟ್ಟು ಕಾಫಿನಾಡಲ್ಲೇ ಏಕೆ ಗೊತ್ತಾ…!

1 min read

 

ಚಿಕ್ಕಮಗಳೂರು ದೇಶದ ಅತ್ಯಂತ ದೊಡ್ಡ ಜನರೇಟರ್ ಉತ್ಪಾದನಾ ಸಂಸ್ಥೆ ಕಿರ್ಲೋಸ್ಕರ್ ಕಂಪನಿಯು ಅತ್ಯಾಧುನಿಜ ತಂತ್ರಜ್ಞಾನ ಹಾಗೂ ಪರಿಸರಸ್ನೇಹಿಯಾಗುವಂತಹಾ ಹೊಸ ಜನರೇಟರ್ ಸಂಶೋಧಿಸಿದ್ದು ಚಿಕ್ಕಮಗಳೂರು ನಗರದಲ್ಲಿ ಲೋಕಾರ್ಪಣೆ ಮಾಡಿದ್ದಾರೆ. ದೆಹಲಿ, ಬೆಂಗಳೂರು, ಮುಂಬೈ, ಕೊಲ್ಕತ್ತಾ ಸೇರಿದಂತೆ ದೊಡ್ಡ-ದೊಡ್ಡ ನಗರಗಳನ್ನ ಬಿಟ್ಟು ಚಿಕ್ಕಮಗಳೂರಿನಲ್ಲೇ ಏಕೆ ಲೋಕಾರ್ಪಣೆ ಮಾಡಿದ್ದಾರೆ ಎಂಬ ಪ್ರಶ್ನೆ ಮೂಡಬಹುದು. ಪಶ್ಚಿಮಘಟ್ಟಗಳ ತಪ್ಪಲಿನ ನಿತ್ಯ ಹರಿದ್ವರ್ಣದಂತಹಾ ಕಾಡುಗಳನ್ನ ಹೊಂದಿರುವ ಚಿಕ್ಕಮಗಳೂರಿನ ಮಲೆನಾಡು ಪ್ರದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಪ್ರದೇಶ ಇದಾಗಿದ್ದು, ಕಿರ್ಲೋಸ್ಕರ್ ಕಂಪನಿಯ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡುತ್ತಿರುವ ಗ್ರಾಹಕರು ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದಾರೆ. ಆ ಕಾರಣದಿಂದ ಚಿಕ್ಕಮಗಳೂರು ನಗರದಲ್ಲಿ ಸಂತೋಷದಿಂದ ಕಂಪನಿಯ ಉತ್ಪನ್ನವನ್ನು ಕಂಪನಿ ಬಿಡುಗಡೆ ಮಾಡಿದೆ. ದೇಶದ ಅತಿ ದೊಡ್ಡ ಜನರೇಟರ್ ತಯಾರಿಕಾ ಸಂಸ್ಥೆ ಕಿರ್ಲೋಸ್ಕರ್ ಕಂಪನಿ ಈಗ ಅತ್ಯಾಧುನಿಕ ಸಂತ್ರಜ್ಞಾನ ಮತ್ತು ಪರಿಸರ ಸ್ನೇಹಿ 2.8 – 5.5 ಕೆವಿಎ ವರೆಗಿನ ಇನ್ವರ್ಟರ್ ತಂತ್ರಜ್ಞಾನ ಮಾದರಿಯ ಜನರೇಟರನ್ನ ಅನಾವರಣಗಿಳಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಕಿರ್ಲೋಸ್ಕರ್ ಕಂಪನಿಯ ಸೀನಿಯರ್ ಜನರಲ್ ಮ್ಯಾನೇಜರ್ ಭೂಷಣ್ ಪವಾರ್ ಹೇಳಿದರು. ಕಂಪನಿ ಈ ಹಿಂದೆ ಮಾರುಕಟ್ಟೆಗೆ ತಂದಿರುವ ಜನರೇಟರ್‌ಗಳಿಗಿಂತ ಇಂದು ಬಿಡುಗಡೆಯಾದ ಜನರೇಟರ್ ಇನ್ವರ್ಟರ್ ತಂತ್ರಜ್ಞಾನದ ಸುಧಾರಿತ ಉತ್ಪನ್ನವಾಗಿದೆ. ವಿದ್ಯುತ್‌ ಸರಬರಾಜಿನಲ್ಲಿ ಉಂಟಾಗುವ ಏರಿಳಿತವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಗುಣಮಟ್ಟದ ಸ್ಥಿರವಾದ ವಿದ್ಯುತ್ ಮತ್ತು ಯಾವುದೇ ತೊಂದರೆಗಳಿಲ್ಲದೆ ವಿದ್ಯುತ್ ಪೂರೈಸುವ ಸಾಮರ್ಥ್ಯ ಈ ಜನರೇಟರ್‌ನ ವಿಶೇಷತೆಯಾಗಿದೆ. ಈ ಜನರೇಟರ್ ಪರಿಸರ ಸ್ನೇಹಿಯಾಗಿದೆ. ಶಬ್ದ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಹೊಂದಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಈ ಜನರೇಟರ್ ಇಂಧನ ಕಾರ್ಯಕ್ಷಮತೆ ದೃಷ್ಟಿಯಿಂದ ಉತ್ತಮ ಲಾಭದಾಯಕವಾಗಿದೆ ಎಂದರು. ಇತರೆ ಕಂಪನಿಗಳ ಜನರೇಟರ್‌ಗಳಿಗೆ ಹೋಲಿಕೆ ಮಾಡಿದಾಗ ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ. ಈ ಜನರೇಟರ್‌ಗೆ ಚಕ್ರಗಳನ್ನು ಆಳವಡಿಸಿರುವುದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಜೊತೆಗೆ ಕಡಿಮೆ ಸ್ಥಳಾವಕಾಶದಲ್ಲಿ ಈ ಜನರೇಟರ್ ಇಡಬಹುದಾಗಿದೆ.‌ ಮುಂಬೈನ್ ಪವರ್ ಟೆಕ್ ಐಡಿಯಾಸ್ ಸಂಸ್ಥೆಯ ಮುಖ್ಯಸ್ಥರಾದ ಸುನಿಲ್ ಸುಬ್ರಮಣಿ, ಕಿರ್ಲೋಸ್ಕರ್ ಕಂಪನಿಯ ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ಶ್ರೀನಿವಾಸ್, ಸುಹಾಸ್, ಚಿಕ್ಕಮಗಳೂರು ಜಿಲ್ಲೆಯ ಅಧಿಕೃತ ಮಾರಾಟಗಾರರಾದ ವಾಟರ್ ಜೆಟ್ ಎಂಜಿನಿಯರ್ಸ್ ಮುಖ್ಯಸ್ಥರಾದ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ಸುನಿಲ್ ಬ್ಯಾಪ್ಟಿಸ್ಟ್ ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!