ಭಾರೀ ಮಳೆಗೆ ಕೆಎಸ್ಆರ್.ಟಿಸಿ ಬಸ್ ಸ್ಟಾಂಡ್ ಕಾಂಪೌಂಡ್ ಕುಸಿತ
1 min read
ಕರಾವಳಿ ಮಲೆನಾಡು ಸಂಪರ್ಕಿಸುವ ಕೊಟ್ಟಿಗೆಹಾರ ಬಸ್ ಸ್ಟಾಂಡ್ ನ ತಡೆಗೋಡೆ ಕಳೆದ ಕೆಲ ದಿನಗಳ ಭಾರಿ ಮಳೆಯಿಂದಾಗಿ ಕುಸಿದು ಬಿದ್ದಿದೆ.
ಮಲೆನಾಡಲ್ಲಿ ಭಾರೀ ಗಾಳಿ-ಮಳೆ ಅಬ್ಬರ ಜೋರಾಗಿದ್ದು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚಾರ್ಮಾಡಿ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಗೆ ಬಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಕಾಪೌಂಡ್ ಕುಸಿದಿದೆ.
ಬಸ್ ನಿಲ್ದಾಣದ ಒಂದು ಭಾಗದ ಕಾಪೌಂಡ್ ಕುಸಿತ ಕಂಡಿದೆ.
ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣ ಪ್ರವಾಸಕ್ಕೆ ತೆರಳುವವರಿಗೆ ವಿಶ್ರಾಂತಿ ತಂಗು ದಾಣವಾಗಿತ್ತು.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಬೀಳುತ್ತಿದ್ದು ನಿನ್ನೆ ಸಂಜೆಯ ನಂತರ ಧಾರಾಕಾರ ಮಳೆಯಾದಾಗ ಕಾಂಪೌಂಡ್ ಕುಸಿತ ಕಂಡಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಸೇರಿದಂತೆ ಹಲವೆಡೆ ಮಳೆ ಆರ್ಭಟ ಹೆಚ್ಚಾಗುತ್ತಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g