September 8, 2024

MALNAD TV

HEART OF COFFEE CITY

ಪಾಕಿಸ್ತಾನ ಜಿಂದಾಬಾದ್ ಪೋಸ್ಟ್ ಮೋದಿ ವಿರುದ್ಧ ಅವಹೇಳನ ಮಾಡಿದವನ ಬಂಧನ

1 min read

 

ಪಾಕಿಸ್ತಾನ ಜಿಂದಾಬಾದ್ ಜಿಂದಾಬಾದ್ ನರೇಂದ್ರ ಮೋದಿ ಕೂ….. ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ ಕೊಪ್ಪ ತಾಲೂಕಿನ ಅಸ್ಗರ್ ಕೊಪ್ಪ ಎಂಬಾತನನ್ನು ಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕೊಪ್ಪ ಭಜರಂಗದಳದ ವಿರುದ್ಧ ಸಹಾ ಅವಹೇಳನಕಾರಿ ಆಗಿ ಅಸ್ಗರ್ ಕೊಪ್ಪ ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಹಾಕಿದ್ದು ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಅಸ್ಗರ್ ನನ್ನು ಕೊಪ್ಪ ಪೊಲೀಸ್ ಠಾಣೆಯಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿದೆ.

ಚಿಕ್ಕಮಗಳೂರಿನಲ್ಲಿ ಮತ್ತೆ ಪಾಕ್ ಪರ ಕೂಗು ಕೇಳಿ ಬಂದಿದೆ.
ಪಾಕಿಸ್ತಾನ್ ಜಿಂದಾಬಾದ್ ಜಿಂದಾಬಾದ್ ಎಂದು ಫೇಸ್ಬುಕ್ ನಲ್ಲಿ ಪಾಕಿಸ್ತಾನ ಪರ ಪೋಸ್ಟ್ ಹಾಕಲಾಗಿದೆ. ಪ್ರಧಾನಿ ಮೋದಿ ವಿರುದ್ಧವೂ ಅವಹೇಳನಕಾರಿ ಬರಹ ಹಾಕಲಾಗಿದೆ. ಫೇಸ್ಬುಕ್ ಪೋಸ್ಟ್ ಮಾಡಿದ ಬಳಿಕ ಅಕೌಂಟನ್ನೇ ಡಿಲೀಟ್ ಮಾಡಿದ ಭೂಪ ಅಸ್ಗರ್ ನನ್ನು ಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮೋಟೋ ಕೇಸ್ ಅನ್ನು ದಾಖಲಿಸಿಕೊಳ್ಳಲಾಗಿದೆ.
ಪೋಸ್ಟ್ ಹಾಕಿದ ಅಫ್ಜರ್ ಅಲಿಯಾಸ್ ಅಸ್ಗರ್ ಗಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಪ್ಪ ಭಜರಂಗದಳದ ವಿರುದ್ಧ ಕೂಡಾ ಪೋಸ್ಟ್ ಹಾಕಿರುವ ಇವನ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಯನ್ನು ಸಾರ್ವಜನಿಕರಿಗೆ ಒಪ್ಪಿಸುವಂತೆ ಒತ್ತಾಯ ಸಹಾ ಕೇಳಿ ಬಂದಿದೆ.

 


ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಮೂಲದ ಯುವತಿ ಅಮೂಲ್ಯ ಲಿಯೊನ್ ನರೋನಾ ಈ ಹಿಂದೆ ಪಾಕ್ ಪರ ಘೋಷಣೆ ಕೂಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು,

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!