September 8, 2024

MALNAD TV

HEART OF COFFEE CITY

ಶಿಕಾರಿಗೆ ತೆರಳಿದ ವೇಳೆ ಮಿಸ್ ಫೈರ್ : ಯುವಕನ ಎದೆ ಸೀಳಿದ ತೋಟಕೋವಿ

1 min read

 

ಗುಂಡೇಟಿನಿಂದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕು ಉಳುವಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ತಾಲ್ಲೂಕಿನ ಕೆರೆಮಕ್ಕಿ ಗ್ರಾಮದ ಯುವಕ ಸಂಜುಗೌಡ(33) ಎಂಬಾತ ಶೂಟೌಟ್ ನಲ್ಲಿ ಮೃತಪಟ್ಟಿರುವ ಯುವಕನಾಗಿದ್ದು
ಸಂಜು ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದೆ. ಎದೆಗೆ ತೋಟದಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ದೇಹ ಕಂಡುಬರುತ್ತಿದೆ

 


ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ತೋಟಕೋವಿಯೊಂದು ಪತ್ತೆಯಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ? ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಮೃತ ಸಂಜುಗೌಡ ಕೆರೆಮಕ್ಕಿ ಗ್ರಾಮದ ಅವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರಿಯ ಜೊತೆ ವಾಸವಿದ್ದ ಒಂದೇ ಗ್ರಾಮದ ಮೂವರು ಶಿಕಾರಿಗೆ ತೆರಳಿದ್ದು ಘಟನೆ ನಂತರ ಸುಮನ್ ಎಂಬಾತ ತಪ್ಪಿಸಿಕೊಂಡು ಬೈಕ್ ನಲ್ಲಿ ತೆರಳುವಾಗ ಭುಜದ ಮೂಳೆ ಮುರಿದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮತ್ತೊಬ್ಬ ನಿಸರ್ಗ ಎಂಬುವವನು ತಪ್ಪಿಸಿಕೊಂಡಿದ್ದಾನೆ.
ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!