October 18, 2024

MALNAD TV

HEART OF COFFEE CITY

ಪೋಷಕರಿಂದ ಹಣ ವಸೂಲಿಗೆ ಇಳಿದ ಖಾಸಗಿ ಶಾಲೆಗಳು ಪೋಷಕರ ಆರೋಪ

1 min read

ಚಿಕ್ಕಮಗಳೂರು : ಕೊರೋನ ಮಹಾ ಮಾರಿಯಿಂದ ಜನರು ಜೀವನ ನಡೆಸಲು ಪರದಾಡುತ್ತಿದ್ದಾರೆ. ವ್ಯಾಪಾರ ವಹಿವಾಟುಗಳನ್ನೇ ನಂಬಿ, ದುಡಿದು ಬದುಕು ನಿರ್ವಹಿಸುತ್ತಿದ್ದ ಜನರ ಜೀವನ ಲಾಕ್‌ಡೌನ್ ನಿಂದ ಬೀದಿಗೆ ಬೀಳುವಂತಾಗಿದೆ. ಆದರೆ ಖಾಸಗಿ ಶಾಲೆಗಳು ಮಾತ್ರ ಹೃದಯ ಹೀನತೆಯಿಂದ ಪೋಷಕರಿಂದ ಹಣ ಹಿಂಡಲು ಪ್ರಾರಂಭಿಸಿವೆ ಎನ್ನುವುದು ಪೋಷಕರ ಆರೋಪವಾಗಿದೆ.

 

ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸ ಸರಿಯಾಗಿ ನಡಿತಿಲ್ವಲ್ಲ ಅನ್ನೋ ಚಿಂತೆಯಾದ್ರೆ, ಖಾಸಗಿ ಶಾಲೆಗಳಿಗೆ ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಪೋಷಕರಿಂದ ಹಣ ಕೀಳೊ ಚಿಂತೆಯಾಗಿದೆ. ಕರೋನ ಸೋಂಕು ಹರಡುವಿಕ ತಡೆಯಲು ಶಾಲಾ ಕಾಲೇಜ್‌ಗಳಿಗೆ ಸರ್ಕಾರ ರಜೆ ನೀಡಿವೆ. ಆದರೆ ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಕಳ್ಳ ಹಾದಿ ಹಿಡಿದಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಶೂಲ್ಕದ ಹೆಸರಿನಲ್ಲಿ ಹಣ ವಸೂಲಿಗೆ ಆರಂಭಿಸಿವೆ. 2021-22 ನೇ ಶೈಕ್ಷಣೀಕ ವರ್ಷದ ಆರಂಭದ ವೇಳೆಗೆ ಪೋಷಕರ ಮೊಬೈಲ್‌ಗಳಿಗೆ ಸಂದೇಶ ಕಳುಹಿಸುತ್ತಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಾವಿರಾರು ರೂಪಾಯಿಗಳ ಶಾಲಾ ಶುಲ್ಕ ಕಟ್ಟುವಂತೆ ದುಂಬಲು ಬಿದ್ದಿವೆ. ಅಲ್ಲದೆ ಕಳೆದ ವರ್ಷದ ಬಾಕಿ ವಸೂಲಿಗೂ ಇಳಿದಿವೆ. ಖಾಸಗಿ ಶಾಲೆಗಳ ಹಣ ವಸೂಲಿಗೆ ಕಡಿವಾಣ ಹಾಕಬೇಕಾದ ಸರ್ಕಾರ ಹಾಗೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿರುವಂತಿದೆ. ನಾಯಿ ಬಾಲವನ್ನು ಅಲ್ಲಾಡಿಸುವುದು ಲೋಕ ರೂಡಿ, ಆದರೆ ಇಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಗಿದೆ. ಆದಷ್ಟು ಬೇಗ ಸರ್ಕಾರ ಹಾಗೂ ಜಿಲ್ಲಾಡಳಿತ ಖಾಸಗಿ ಶಾಲೆಗಳ ಹಣ ವಸೂಲಿಗೆ ಕಡಿವಾಣ ಹಾಕಬೇಕೆನ್ನುವುದು ಸಂಘ-ಸಂಸ್ಥೆಗಳ ಸಾರ್ವಜನಿಕರ ಹಾಗೂ ಪೋಷಕರ ಒತ್ತಾಯವಾಗಿದೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!