October 18, 2024

MALNAD TV

HEART OF COFFEE CITY

ಇನ್ನು ಮುಂದೆ ಮರ್ಡರ್ ಅನ್ನು 302 ಎನ್ನುವಂತಿಲ್ಲ, ವಂಚಕರನ್ನು 420 ಎನ್ನುವಂತಿಲ್ಲ

1 min read

ಇನ್ನು ಮುಂದೆ ಮರ್ಡರ್ ಕೇಸ್ ಅನ್ನು 302 ಎನ್ನುವಂತಿಲ್ಲ, ರೇಪ್ ಕೇಸ್ ಅನ್ನು 376 ಎನ್ನುವಂತಿಲ್ಲ, ಫ್ರಾಡ್ ಗಳನ್ನು 420 ಎನ್ನುವಂತಿಲ್ಲ

ಹೌದು ಎಲ್ಲವೂ ಬದಲಾಗುತ್ತಿದೆ. IPC ಸೆಕ್ಷನ್ ಗಳು ಇನ್ನು ಮುಂದೆ ಹೊಸ ರೂಪ ಪಡೆದುಕೊಳ್ಳಲಿದ್ದು ದೇಶದ ಕಾನೂನು ಕಟ್ಟಲೆಗಳು ನೂತನ ಆಯಾಮದಲ್ಲಿ ಕಂಡು ಬರಲಿದ್ದು ಇಂಡಿಯನ್ ಪೀನಲ್ ಕೋಡ್ ಇನ್ನು ಮುಂದೆ ಭಾರತೀಯ ನ್ಯಾಯ ಸಂಹಿತೆ ಎಂದು ಚೇಂಜ್ ಆಗಲಿದೆ. ಜುಲೈ 2024 ರಿಂದ ಈ ಹೊಸಾ ಕಾನೂನು ಜಾರಿಗೊಳ್ಳಲಿದೆ.

1860 ರಲ್ಲಿ ರಚನೆಯಾಗಿದ್ದ IPC ಇನ್ನು ಮುಂದೆ ನಮ್ಮ ದೇಶದಲ್ಲಿ ಇರೋದಿಲ್ಲ ಆದರೆ ಹೊಸರೂಪದಲ್ಲಿ
BNS,BNSS ಆಗಿ ಕಾಣಿಸಿಕೊಳ್ಳಲಿದೆ

IPC ಸೆಕ್ಷನ್ ಗಳನ್ನು ಉಲ್ಲೇಖಿಸಿ ಅಪರಾಧಗಳನ್ನು ನಮೂದಿಸುತ್ತಿದ್ದ ಕಾಲ ಇದೀಗ ಅಂತ್ಯಗೊಂಡಿದೆ.‌ ಕೊಲೆ ಪ್ರಕರಣವನ್ನು ಇನ್ನು ಮುಂದೆ 103 ಎನ್ನಬೇಕು, ಅತ್ಯಾಚಾರವನ್ನು 64 ಎನ್ನಬೇಕು, ವಂಚನೆ ಮಾಡಿದ ವ್ಯಕ್ತಿಯನ್ನು 420 ಬದಲಾಗಿ 112 ಎನ್ನಬೇಕು, ಆತ್ಮಹತ್ಯೆ ಇನ್ನು ಮುಂದೆ ಅಪರಾಧ ಅಲ್ಲ ಎಂದು ಈ ಹೊಸ ಕಾನೂನು ಹೇಳುತ್ತಿದೆ. ಆಕ್ಸಿಡೆಂಟ್ ಗಳು ಇನ್ನು ಮುಂದೆ 85 ಎನ್ನಿಸಿಕೊಳ್ಳಲಿವೆ, ಆಫ್ ಮರ್ಡರ್ 109 ಸೆಕ್ಷನ್ ಗೆ ಬರಲಿವೆ. ಕೊಲೆ ಬೆದರಕೆ , ನಿಂದನೆ 504-506 ನಿಂದ 351-352 ಎಂದು ಕರೆಯಬೇಕಿದೆ.

IPC ಯಲ್ಲಿದ್ದ 511 ಕಲಂ ಗಳನ್ನು ಇಳಿಸಿ 358ಕಲಂಗಳಾಗಿ ಸರಳಿಕರಣ ಗೊಂಡು ಇನ್ನು ಮುಂದೆ ಜಾರಿಗೆ ಬರಲಿವೆ. ಮುಂಬರುವ ಜುಲೈ 1 ರಿಂದ ಇದು ಜಾರಿಯಾಗಲಿವೆ.

ಇದರೊಂದಿಗೆ 1973ರ Crpc ಕೂಡ ಬದಲಾಗಲಿದೆ ಔಟ್ ಡೇಟೆಡ್ ಕಾನೂನು ಇನ್ನು ಮುಂದೆ ಇರುವುದಿಲ್ಲ. ಪಿಟ್ಟಿ ಕೇಸ್ ಗಳಲ್ಲಿ ತಪ್ಪು ಮಾಡಿದವರಿಗೆ ವೃದ್ದಾಶ್ರಮದಲ್ಲಿ ಸೇವೆ ಮಾಡುವ ಶಿಕ್ಷೆಯಂತ ಕಾನೂನು ಹೊಸದಾಗಿ ಬರಲಿವೆ. ಹೆಚ್ಚುತ್ತಿರುವ ಭಯೋತ್ಪಾದನೆ ಕುರಿತು UAPA ಬದಲಾಗಿ BNS 113 ಕಠಿಣ ಶಿಕ್ಷೆ ಬಗ್ಗೆ ಹೇಳಲಿದೆ.

ಇಲ್ಲದ ಕಾನೂನಿಗೆ ಶಿಕ್ಷೆ ಇಲ್ಲ ಎಂದು ಕೃತ್ಯ ಎಸಗುತ್ತಿದ್ದವರಿಗೆ ಹೊಸ BNS ಹುಡುಕಿ ಹುಡುಕಿ ಕಲಂ ಶಿಕ್ಷೆ ಪ್ರಮಾಣ ಸೇರಿಸಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!