September 8, 2024

MALNAD TV

HEART OF COFFEE CITY

ಸರ್ಕಾರಿ ಬಸ್ ಮಾತ್ರ ಅಲ್ಲ ಹೈಟೆಕ್ ಬಸ್ ನ ಟೈರ್ ಕೂಡಾ ಕಳಚಿ ಬೀಳುತ್ತೆ

1 min read

ಲಕ್ಸುರಿ ಬಸ್ ಗಳಲ್ಲಿ ಸಂಚರಿಸುವವರು ಇನ್ನು ಮುಂದೆ ಭೀತಿಯಲ್ಲಿ ಓಡಾಡಬೇಕಿದೆ. ಕೇವಲ ಸರ್ಕಾರಿ ಬಸ್ ಗಳು ಮಾತ್ರ ಕಳಪೆ ಇರುವುದಿಲ್ಲ , ಈ ಸಿ.ಸಿ ಕ್ಯಾಮರಾ ದೃಶ್ಯ ನೋಡಿದ್ರೆ ನೀವು ಗಾಬರಿ ಆಗೋದು ಗ್ಯಾರೆಂಟಿ. ಹೈಟೆಕ್ ಬಸ್ ಹತ್ತಿ ರಾತ್ರಿ ಮಲಗಿ ಬೆಳಿಗ್ಗೆ ಊರು ತಲುಪುತ್ತೇವೆ ಎಂದುಕೊಂಡರೆ ಅದು ಸುಳ್ಳು

 

ಜಿಲ್ಲೆಯಲ್ಲಿ ಮಳೆಯಲ್ಲಿ ಲಕ್ಸುರಿ ಖಾಸಗಿ ಬಸ್ ಚಲಿಸುತ್ತಿದ್ದಾಗಲೇ ಟಯರ್ ಕಳಚಿ ಬಿದ್ದಿದೆ. ಏಕಾಏಕಿ ಹಿಂಬದಿ ಟೈರ್ ಕಳಚಿ ಪ್ರತಿಷ್ಠಿತ ಸುಗಮ ಖಾಸಗಿ ಬಸ್ ಸ್ಥಗಿತವಾಗಿದೆ ಇದರೊಂದಿಗೆ ಕೂದಲೆಳೆಅಂತರದಲ್ಲಿ ದುರ್ಘಟನೆ ತಪ್ಪಿದಂತಾಗಿದೆ. ಬಾಳೆಹೊನ್ನೂರಿನ ರೋಟರಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ ಬೆಂಗಳೂರಿನಿಂದ ನಿತ್ಯ ಶೃಂಗೇರಿಗೆ ಸಂಚರಿಸುವ ಸುಗಮ ಖಾಸಗಿ ಬಸ್ ನ ಟೈಯರ್ ಕಳಚಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಸ್ಸಿನ ಎರಡು ಟೈಯರ್ ಗಳು ಒಮ್ಮೆಲೆ ಕಳಚಿ ಬೀಳುತ್ತಿದ್ದು ಘಾಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರೆ ಮಹಾ ದುರಂತವೇ ನಡೆಯುತ್ತಿತ್ತು ಅದೃಷ್ಟವಶಾತ್ ಪ್ರಾಣಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!