October 18, 2024

MALNAD TV

HEART OF COFFEE CITY

ಸತತ 17 ನೇ ಬಾರಿಗೆ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿದ ಸಾಯಿ ಏಂಜಲ್ಸ್ ಪಿ.ಯು ಕಾಲೇಜ್

1 min read

 

ಸತತ 17 ನೇ ಬಾರಿಯು K-CET ಪ್ರವೇಶ ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ಪ್ರತಿಷ್ಠಿತ ಸಾಯಿ ಏಂಜಲ್ಸ್ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ರಾಜ್ಯದ ಮಟ್ಟದಲ್ಲಿ 20 ನೇ ಸ್ಥಾನ ಪಡೆದಿರುವ ಸಾಯಿ ಏಂಜಲ್ಸ್ ವಿದ್ಯಾರ್ಥಿನಿ ನೇಹಾ ಬಿಸ್ಸಿ ಅರ್ಗಿಕಲ್ಚರ್ ನಲ್ಲಿ ಈ ಸಾಧನೆ ಮಾಡಿದ್ದಾಳೆ.

ಕಳೆದ ಶನಿವಾರ ಪ್ರಕಟವಾದ KCET ಪ್ರವೇಶ ಪರೀಕ್ಷೆಗಳ ರ್ಯಾಂಕಿಂಗ್ ನಲ್ಲಿ ಈ ಬಾರಿಯೂ ನಗರದ ಹೊರ ವಲಯದ ಸಾಯಿ ಏಂಜಲ್ಸ್ ಪಿಯು ಕಾಲೇಜು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ. ಮೊದಲ 5000 ವರೆಗಿನ ರ್ಯಾಂಕ್ ಪಟ್ಟಿಯಲ್ಲಿ ವಿವಿಧ ಶ್ರೇಣಿಗಳಲ್ಲಿ 43 ವಿದ್ಯಾರ್ಥಿಗಳು ಸಾಯಿ ಏಂಜಲ್ಸ್ ಕಾಲೇಜಿನವರೇ ಆಗಿದ್ದಾರೆ. ಡಿಸ್ಟ್ರಿಕ್ಟ್ ಟಾಪರ್ ಆಗಿ ಹೊರಹೊಮ್ಮಿರುವ ಕಾಲೇಜಿನ ನೇಹಾ ಬಿಎಸ್ಸಿ ಅರ್ಗಿಕಲ್ಚರ್ ನಲ್ಲಿ ರಾಜ್ಯಕ್ಕೆ 20 ನೇ ಸ್ಥಾನ ಪಡೆದಿದ್ದಾಳೆ. ಉಳಿದಂತೆ ಸತೀಶ್ ದತ್, ನಿಶ್ಚಯ್, ನಿನ್ಯಾಸ್, ದ್ವನಿತ್ ನೃಪತುಂಗ, ಚಂದನ ಬಿ.ಸಿ ರಾಜ್ಯ ಮಟ್ಟದಲ್ಲಿ ಕ್ರಮವಾಗಿ 328,360, 1513,1640, 1975, 2230 ನೇ ರ್ಯಾಂಕ್ ಗಳಿಸಿದ್ದಾರೆ. ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಪೋಷಕರಿಗೂ ಸಹಾ ಕಾಲೇಜಿಗೆ ಕರೆಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಸಾಯಿ ಏಂಜಲ್ಸ್ ಕಾಲೇಜಿನ ಸಮಸ್ತ ಬೋಧಕ ಬೋಧಕೇತರ ಸಿಬ್ಬಂದಿಗಳ ಸಹಕಾರವನ್ನು ನೆನೆದರು. ಕಾಲೇಜಿಗೆ ಆಗಮಿಸಿದ್ದ ಪೋಷಕರು ಸಹಾ ಸಾಯಿ ಏಂಜಲ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತಷ್ಟು ಹೆಚ್ಚಿನ ಸಾಧನೆ ಮಾಡುವಂತೆ ಮುಂಬರುವ ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ಈ ಅಭಿನಂದನೆ ಕಾರ್ಯಕ್ರಮ ಎಂದು ಕಾಲೇಜಿನ ಕಾರ್ಯದರ್ಶಿ ಕಾರ್ತಿಕ್ ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!