September 19, 2024

MALNAD TV

HEART OF COFFEE CITY

ಬಣಕಲ್ ನಲ್ಲಿ ಯಶಸ್ವಿ ದಂತ ಚಿಕಿತ್ಸಾ ಶಿಬಿರ

1 min read

ಬಣಕಲ್:  ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್, ಬಿ ವಿ ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೆಷನ್, ಶ್ರೀ ಕೃಷ್ಣ ದಂತ ಚಿಕಿತ್ಸಾ ಕೇಂದ್ರ, ಹಾಗೂ ಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ,ದೇರಳಕಟ್ಟೆ  ಮಂಗಳೂರು ಇವರ  ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರವು ಬಣಕಲ್ ಸಾಯಿಕೃಷ್ಣ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಣಕಲ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಪಿ ವಾಸುದೇವ  ಸಾಯಿಕೃಷ್ಣ ಆಸ್ಪತ್ರೆಯು ಬಣಕಲ್ ಬಾಗದ ಜನರಿಗೆ ಆರೋಗ್ಯ ಸಂಜಿವಿನಿಯಾಗಿದೆ. ಬಣಕಲ್ ಸುತ್ತಲಿನ ಊರಿನಲ್ಲಿ ಯಾವುದೇ ಅಪಘಾತಗಳು ನಡೆದಾಗ ತುರ್ತು ಚಿಕಿತ್ಸೆಗೆ ಅನುಕೂಲವಾಗಿದೆ. ಇಂತಹ ಶಿಬಿರವು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣಕಲ್ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಅತಿಕಾ ಬಾನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯ ಡಾ.ಪ್ರಮಾದ ಪ್ರಭಾಕರ್, ದಂತ ಚಿಕಿತ್ಸಾ ವಿಭಾಗದ ಸಂಪರ್ಕಧಿಕಾರಿ ಭರತ್ ಕುಮಾರ್, ಸಾಯಿಕೃಷ್ಣ ಹೆಲ್ತ್ ಸೆಂಟರ್ ಇದರ ನಿರ್ದೇಶಕರಾದ ಶ್ರೀಮತಿ ಭವ್ಯ ನವೀನ್, ಶ್ರೀ ಕೃಷ್ಣ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ಪ್ರಕೃತಿ ಶೆಟ್ಟಿ, ಬಣಕಲ್ ಕ್ರೈಸ್ತರ ಸಂಘದ ಅಧ್ಯಕ್ಷರಾದ ಮೆಲ್ವಿನ್ ಲಸ್ರಾದೊ,
ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್, ಸಾಯಿಕೃಷ್ಣ ಹೆಲ್ತ್ ಸೆಂಟರ್ ನ ವೈದ್ಯಾಧಿಕಾರಿಗಳಾದ ಡಾ.ಮದನ್ ,ಡಾ.ಅಜಿತ್ ಹರಿ, ಡಾ.ಮೌಲ್ಯ, ಸಿಬ್ಬಂದಿಗಳಾದ ಗಣೇಶ್, ಅನಂತ್ ಪ್ರಸಾದ್, ಹೈದರ್ ಅಲಿ  ಮತ್ತಿತರರು ಉಪಸ್ಥಿತರಿದ್ದರು. ಸುಮಾರು 150 ಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!