October 18, 2024

MALNAD TV

HEART OF COFFEE CITY

ಬೋರ್ ವೆಲ್ ಕೊರೆಯುವ ವೇಳೆ ಏಕಾಏಕಿ ಕಂಪಿಸಿದ ಭೂಮಿ : ಭೂ ಕಂಪನದಂತಹ ಅನುಭವ

1 min read

 

ಬೋರ್ ವೆಲ್ ಕೊರೆಯುವ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಬಿರುಕುಬಿಟ್ಟು ಭೂ ಕಂಪನವೇ ಆದಂತೆ ಭೂಮಿ ನಡುಗಿದ ಘಟನೆ ಆಲ್ದೂರು ಪಟ್ಟಣದ ಸರ್ಕಾರಿ ಕಾಲೇಜು ಬಳಿ ನಡೆದಿದೆ. ಕಂಪನ ವೇಳೆಯಲ್ಲಿ ಕೆಲ ಕಟ್ಟಡಗಳ ಗೋಡೆ ಬಿರುಕು ಬಿಟ್ಟಿದೆ

ಬೋರ್ವೆಲ್ ಕೊರೆಯುತ್ತಿದ್ದಂತೆ ಭೂಕಂಪನದ ವಾತಾವರಣ ಉಂಟಾಗಿ ಭೂಮಿ ಬಾಯಿ ಬಿಟ್ಟಂತೆ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಎಲ್ಲೆಂದರಲ್ಲಿ ಭೂಮಿ ಬಿರುಕು ಬಿಟ್ಟು ಜನರಲ್ಲಿ ಆತಂಕ ಮನೆ ಮಾಡಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಇಂತಹ ಘಟನೆ ನಡೆದಿದ್ದು ಬೋರ್ ವೆಲ್ ಕೊರೆಯುವಾಗ ಈ ವಿಚಿತ್ರ ಘಟನೆ ನಡೆದಿದೆ. ಏಕಾಏಕಿ ಬೋರ್ವೆಲ್ ಸುತ್ತಮುತ್ತ ಭೂಮಿ ಬಿರುಕು ಬಿಟ್ಟಿದೆ
ಘಟನೆ ಕಂಡು ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಗಾಬರಿ ಮೂಡಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಬೋರ್ ವೆಲ್ ಕೊರೆದಗ ಈ ಅವಘಡ ಸಂಭವಿಸಿದೆ. ಈ ವೇಳೆ ಕಾಲೇಜಿನ ಬಹುತೇಕ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ.
ಭೂಮಿ ಬಿರುಕಿನಿಂದಾಗಿ ಕಾಲೇಜಿನ ಕೊಠಡಿಗೆ ಹಾನಿ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಲ್ಲೂ ಆತಂಕವಾಗಿತ್ತು.
ಆಲ್ದೂರು ಪಟ್ಟಣದಲ್ಲಿ ಇದೆ ಮೊದಲ ಬಾರಿಗೆ ಇಂಥದೊಂದು ಘಟನೆ ನಡೆದಿದ್ದು, ಸ್ಥಳಕ್ಕೆ ಹತ್ತಿರದ ಸರ್ಕಾರಿ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಬೋರ್ ವೆಲ್ ಕೊರೆಯುವ ವೇಳೆ ಅನುಸರಿಸ ಬೇಕಾದ ಮಾನದಂಡದ ಬಗ್ಗೆ ಇತ್ತೀಚೆಗೆ ಬಾರೀ ಚರ್ಚೆ ನಡೆಯುತ್ತಿತ್ತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!