ಸಾರ್ವಜನಿಕ ಶೌಚಾಲಯಗಳಲ್ಲಿ ‘ಸ್ವಚ್ಛ ಅಭಿಯಾನ’
1 min readಚಿಕ್ಕಮಗಳೂರು: ವಿವಿಧ ಇಲಾಖೆಯ ಸಹಯೋಗದೊಂದಿಗೆ ನಗರದ ಸಾರ್ವಜನಿಕ ಶೌಚಾಲಯದಲ್ಲಿ ‘ಸ್ವಚ್ಛ ಶೌಚಾಲಯ ಅಭಿಯಾನವನ್ನು’ ನಡೆಸಲಾಯಿತು. ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನ ಅಡಿಯಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರ ಸ್ವಚ್ಛ ಕಾರ್ಯಾಲಯ ಇವರುಗಳ ಸಂಯುಕ್ತಾಕ್ಷರದಲ್ಲಿ ಸ್ವಚ್ಛ ಶೌಚಾಲಯ ಅಭಿಯಾನವನ್ನು ನಡೆಸಲಾಯಿತು.
ನಗರ ಸಭೆ ಕಾರ್ಯಾಲಯದ ವತಿಯಿಂದ ಆಯ್ಕೆಯಾದ ನೂಡಲ್ ಅಧಿಕಾರಿ ಮಾತನಾಡಿ, ಸ್ವಚ್ಛ ಭಾರತ್ ಅಭಿಯಾನ ಜಿ 2.0 ಅಡಿಯಲ್ಲಿ ನವೆಂಬರ್ 15ರಿಂದ ಡಿಸೆಂಬರ್ 26ರ ವರೆಗಿನ ಒಂದು ತಿಂಗಳ ‘ಸ್ವಚ್ಛ ಶೌಚಾಲಯ ಅಭಿಯಾನವನ್ನು ನಗರಸಭೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ನಗರದ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಯ ಸರ್ವೇ ಮಾಡಿ ಮಾಹಿತಿಯನ್ನು ನೀಡುವ ಉದ್ದೇಶದಿಂದ ಡೇನೆಲ್ಮ್ ಯೋಜನೆಯಡಿ ಸ್ಥಾಪನೆಯಾಗಿರುವ ಸ್ವಸಾಯ ಸಂಘದ ಆಯ್ದ ಸದಸ್ಯರನ್ನ ಆಯ್ಕೆ ಮಾಡಲಾಗಿದ್ದು, ಅವರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಮಹಿಳೆಯರ ಶೌಚಾಲಯದಲ್ಲಿ ಎಲ್ಲ ಮೂಲ ಸೌಕರ್ಯಗಳು ಮತ್ತು ವ್ಯವಸ್ಥೆಗಳು ಸರಿಯಾಗಿ ಇಲ್ಲವೇ ಎಂದು ಪರಿಶೀಲಿಸಲು ಮಹಿಳಾ ಸದಸ್ಯರೊಬ್ಬರನ್ನು ಮತ್ತು ಪುರುಷರ ಶೌಚಾಲಯದ ವ್ಯವಸ್ಥೆಗಳನ್ನ ಪರಿಶೀಲಿಸಲೆಂದು ನಗರಸಭೆಯಿಂದ ಆಯ್ಕೆಯಾದ ನೋಡಲ್ ಅಧಿಕಾರಿಯನ್ನು ಆಯ್ಕೆ ಮಾಡಲಾಗಿದೆ. ಅವರು ಅಲ್ಲಿರುವ ನ್ಯೂನತೆಗಳನ್ನು ಗುರುತಿಸಿ ಆ ಮಾಹಿತಿಯನ್ನು ನಗರ ಸಭೆಯ ಆರೋಗ್ಯ ಶಾಖೆಗೆ ಮಾಹಿತಿ ನೀಡಿದಲ್ಲಿ ಅವರು ಅದನ್ನು ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಮಾಡುತ್ತಾರೆ. ಇಲ್ಲಿಯವರಿಗೆ 9 ಶೌಚಾಲಯಗಳ ಬಗ್ಗೆ ಸರ್ವೇ ಮಾಹಿತಿಯನ್ನು ನೀಡಿದ್ದೇವೆ ಎಂದು ಹೇಳಿದರು.
ವಿಜಯಪುರ ಮಿಂಚು ಸ್ವಸಹಾಯ ಸಂಘದ ಸದಸ್ಯೆ ಸುಜಾತ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಬರುವ ಶೌಚಾಲಯಗಳು ಪರಿಶೀಲಿಸಿ ಅಲ್ಲಿ ಸರಿಯಾದ ನೀರಿನ ವ್ಯವಸ್ಥೆ, ಗಾಳಿ ಬೆಳಕು, ವಿದ್ಯುತ್ ಎಲ್ಲಾ ಸರಿಯಾಗಿದಿಯೇ ಎಂಬ ಮಾಹಿತಿಯನ್ನು ನಗರಸಭೆಗೆ ನೀಡಿದ್ದೇವೆ. ಶೌಚಾಲಯಗಳಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿರುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g