September 19, 2024

MALNAD TV

HEART OF COFFEE CITY

ಮಳೆಗಾಗಿ ಮಳೆ ದೇವರ ಮೊರೆ ಹೋದ ರಾಜ್ಯ ಸರ್ಕಾರ

1 min read

ಚಿಕ್ಕಮಗಳೂರು : ರಾಜ್ಯದಲ್ಲಿ ಈ ಬಾರಿ ಸ್ಪಷ್ಟ ಬಹುಮತಗಳಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರದ ಪ್ರತಿನಿಧಿಯಾಗಿ ಮಳೆ ದೇವರು ಎಂದೇ ಪ್ರಖ್ಯಾತಿಯಾದ ಶೃಂಗೇರಿಯ ಕಿಗ್ಗಾ ಋಷ್ಯ ಶೃಂಗೇಶ್ವರ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಋತ್ವಿಜರಿಂದ ಪರ್ಜನ್ಯ ಜಪ ಮಾಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ನಂತರ ವಾಡಿಕೆಯಂತೆ ಬರಬೇಕಾದ ಮುಂಗಾರು ಮಳೆಯ ಕೈಕೊಟ್ಟಿತ್ತು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಬರಗಾಲ ಕಾಡುವುದೆಂಬ ಮಾತು ಜನಸಾಮಾನ್ಯರು ಮಾತನಾಡಿಕೊಳ್ಳಲಾರಂಬಿಸಿದರಲ್ಲದೆ, ವಿರೋಧ ಪಕ್ಷದ ರಾಜಕಾರಣಿಗಳು ಈ ಬಗ್ಗೆ ಮಾತನಾಡಿದ್ದರು. ಕನ್ನಂಬಾಡಿ ಅಣೆಕಟ್ಟೆ ಸೇರಿದಂತೆ ರಾಜ್ಯದ ಬಹಳಷ್ಟು ಅಣೆಕಟ್ಟೆಗಳು, ಕೆರೆಗಳು, ನೀರಿನ ಸೆಲೆಗಳು ನೀರಿನ ಮಟ್ಟ ಕುಸಿದು, ಕುಡಿಯುವ ನೀರಿಗೂ ಸಮಸ್ಯೆಯಾಗುವು ಭೀರಿ ಎದುರಾಗಿತ್ತು. ಮಳೆ ಬಾರದೆ ಅನ್ನದಾತನಿಗೆ ಆಕಾಶವೇ ಕಳಚಿದಂತಾದರೆ, ಜನಸಾಮಾನ್ಯರಿಗೆ ದಿನಸಿಪದಾರ್ಥಗಳ ಬೆಲೆ ಗಗನಕ್ಕೆರುವ ಭಯ, ಧನಕರು ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿನ ಅಭಾವ ತಲೆದೋರಬಹುದೆಂಬ ಭಯ ರಾಜ್ಯ ಸರ್ಕಾರಕ್ಕೂ ಕಾಡುತ್ತಿತ್ತು.

ದೇವರು ಧರ್ಮಗಳ ಬಗ್ಗೆ ಅಸಡ್ಡೆ ತೋರುತ್ತ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ  ಕಾಂಗ್ರೆಸ್ ಪಕ್ಷದ ಸರ್ಕಾರವು ಈಗ ದೇವಾಲಯಗಳ ಬಾಗಿಲು ತಟ್ಟುತ್ತಿದ್ದಾರೆ. ಅದರಂತೆ ರಾಜ್ಯದಲ್ಲಿ ಸಮೃದ್ಧ ಮಳೆಗಾಗಿ ರಾಜ್ಯ ಸರ್ಕಾರದಿಂದ ಪೂಜೆ ಶಂಗೇರಿಯ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಮೂಲ ದೇವರಿಗೆ ವಿಶೇಷ ಪೂಜೆಯನ್ನು ಸರ್ಕಾರದ ಪ್ರತಿನಿಧಿಯಾಗಿ ಚೆಲುವರಾಯಸ್ವಾಮಿ ಮಾಡಿಸಿದರು. ಕೃಷಿ ಸಚಿವರಾದ ಅವರು ಮಳೆಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರಲ್ಲದೆ, 20 ಕ್ಕೂ ಹೆಚ್ಚು ಋತ್ವಿಜರಿಂದ ಪರ್ಜನ್ಯ ಜಪ ಮಾಡಿಸಿದರು.

ರಾಜ್ಯಾದ್ಯಂತ ಸಮೃದ್ಧ ಮಳೆಯಾಗಲಿ ಎಂದು ಗ್ಯಾರಂಟಿ ಸರ್ಕಾರದ ಪ್ರತಿನಿಧಿಯಾಗಿ ಕೃಷಿ‌ ಸಚಿವ ಚೆಲುವರಾಯಸ್ವಾಮಿ ಮಳೆ ದೇವರ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿ ಮಳೆಗಾಗಿ ಕೈಮುಗಿದಿದ್ದಾರೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇತರೆ ಭಾಗದಲ್ಲಿ ಮಳೆ ಅಭಾವವಿದೆ. ಹಾಗಾಗಿ, ಸರ್ಕಾರದ ಪ್ರತಿನಿಧಿಯಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಳೆ ದೇವರ ಮೊರೆ ಹೋಗಿದ್ದಾರೆ. ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ 20ಕ್ಕೂ ಹೆಚ್ಚು ಋತ್ವಿಜರಿಂದ ಪರ್ಜನ್ಯ ಜಪ ನಡೆದಿದ್ದು ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಎರಡ್ಮೂರು ದಶಕಗಳಿಂದಲೂ ಕೂಡ ಮಳೆಗಾಗಿ ಆಡಳಿತ ಸರ್ಕಾರ ಇದೇ ಋಷ್ಯಶೃಂಗನ ಮೊರೆ ಹೋದವರೆ. ಈ ಋಷ್ಯಶೃಂಗೇಶ್ವರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೆಚ್ಚಿನ ದೈವವಾಗಿದ್ದು 2017ರಲ್ಲಿ ಡಿಕೆಶಿ ಇಂಧನ ಸಚಿವರಾಗಿದ್ದಾಗ ಕೂಡ ಇಲ್ಲಿ ಮಳೆಗಾಗಿ ಪೂಜೆ ಸಲ್ಲಿಸಿದ್ದರು. ಆಗ ರಾಜ್ಯದಲ್ಲಿ ಸಮೃದ್ಧ ಮಳೆ ಕೂಡ ಆಗಿತ್ತು. ಆಗ, ಋಷ್ಯಶೃಂಗೇಶ್ವರನಿಗೆ ಹರಕೆ ಹೊತ್ತಿದ್ದ ಡಿಕೆಶಿ ರಾಜ್ಯಾದ್ಯಂತ ಸಮೃದ್ಧ ಮಳೆಯಾದ ಹಿನ್ನೆಲೆ ಋಷ್ಯಶೃಂಗೇಶ್ವರನಿಗೆ ಬೆಳ್ಳಿಯ ಮುಖವಾಡ ನೀಡಿ ಹರಕೆ ಕೂಡ ತೀರಿಸಿದ್ದರು. ಇದೀಗ, ಮತ್ತೆ ರಾಜ್ಯದಲ್ಲಿ ಮಳೆ ಅಭಾವವಿದ್ದು ಮಳೆಗಾಗಿ ಸರ್ಕಾರದಿಂದಲೇ ಅಧಿಕೃತ ಪೂಜೆ ನಡೆಯುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!