October 18, 2024

MALNAD TV

HEART OF COFFEE CITY

ಕಳಸದಲ್ಲಿ ನಿಲ್ಲದ ಗೋ ಕಳ್ಳತನ ಸತ್ತ ರಾಸುಗಳ ರಸ್ತೆಗೆ ಎಸೆದ ಕಿಡಿಗೇಡಿಗಳು

1 min read

ಮೃತಪಟ್ಟ ರಾಸುಗಳನ್ನ ಲಾರಿಯಲ್ಲಿ ತಂದು ರಸ್ತೆಗೆ ಎಸೆದು ಹೋದ ಕಿಡಿಗೇಡಿಗಳು

ಚಿಕ್ಕಮಗಳೂರು. ಮೃತಪಟ್ಟ ಬಿಡಾಡಿ ದನಗಳನ್ನ ಕಿಡಿಗೇಡಿಗಳು ರಸ್ತೆಗೆ ಎಸೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನಕೆರೆ ಸಮೀಪದ ಕಂಚಿಗಾನೆ ಗ್ರಾಮದಲ್ಲಿ ನಡೆದಿದೆ. ಕಂಚಿಗಾನೆ ಗ್ರಾಮದಲ್ಲಿ ಸಾವನಪ್ಪಿದ ಎರಡು ಹಸುಗಳನ್ನು ವಾಹನದಲ್ಲಿ ತಂದ ಕಿಡಿಗೇಡಿಗಳು ರಸ್ತೆಗೆ ಎಸೆದು ಹೋಗಿದ್ದಾರೆ. ಈ ದುಷ್ಕೃತ್ಯ ಗೋ ಕಳ್ಳರದ್ದು ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ. ಸತ್ತ ರಾಸುಗಳ ಮೈ ಮೇಲೆ ಗಾಯದ ಗುರುತುಗಳು ಕೂಡ ಪತ್ತೆಯಾಗಿವೆ. ಕಳೆದ ವಾರ ಕೂಡ ಕಳಸ ತಾಲೂಕಿನ ತೋಟದೂರು ಸಮೀಪ ಇದೇ ರೀತಿ ಸತ್ತ ಹಸುವನ್ನ ರಸ್ತೆಗೆ ಎಸೆದು ಹೋಗಿದ್ದ ಕೃತ್ಯ ನಡೆದಿತ್ತು. ಸ್ಥಳಕ್ಕೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸ ತಾಲೂಕಿನಲ್ಲಿ ಗೋಕಳ್ಳತನ ಯಥೇಚ್ಛವಾಗಿದ್ದು ರಾತ್ರಿ ವೇಳೆ ಕಾರು ಹಾಗೂ ಲಾರಿಗಳಲ್ಲಿ ಬರುವವರು ಗೋವುಗಳನ್ನ ಅಪಹರಿಸಿಕೊಂಡು ಹೋಗುತ್ತಿದ್ದಾರೆ. ಪೊಲೀಸರು ಕೂಡಲೇ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಬಾಳೂರಿನಿಂದ ಕಳಸ ಕಡೆ ಬಂದ ಲಾರಿ ಈ ರೀತಿ ಹಸುಗಳನ್ನ ರಸ್ತೆಗೆ ಎಸೆದು ಹೋಗಿದ್ದಾರೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ‌.‌ ಆದರೆ, ಯಾರು ಅನ್ನೋದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಬಜರಂಗದಳವೇ ಉತ್ತರ ಕೊಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!