September 8, 2024

MALNAD TV

HEART OF COFFEE CITY

ನಮ್ಮನ್ನು ನೋಡಿ ಎಲ್ಲರೂ ಹೇದರಬೇಕು ಎಂದು ಲಾಂಗ್ ಹಿಡಿದು ಓಡಾಡಿ ಲಾಕ್ ಆದ ಪುಡಾರಿಗಳು

1 min read

 

ರಾತ್ರೋರಾತ್ರಿ ರಾತ್ರಿ ಫೇಮಸ್ ಆಗೋದು ಅಂದ್ರೆ ಹೀಗೆ ಅನಿಸುತ್ತೆ, ಜನ ನಮ್ಮನ್ನು ಗುರುತಿಸಲಿ, ನಮ್ಮನ್ನು ಕಂಡು ಭಯ ಪಡಲಿ ಅಂತ ಈ ಪುಂಡರು ಮಾಡಿದ್ದೇನು ಗೋತ್ತಾ,, ಕೈಯಲ್ಲಿ ತಲ್ವಾರ್ ಹಿಡಿದು ಕಾರಲ್ಲಿ ಓಡಾಡಿ ಡಿಫರೆಂಟ್ ಆ್ಯಂಗಲ್ ಗಳಲ್ಲಿ ಫೋಟೋ ತಗಿಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಹಾಕಿ ಇದೀಗ ಕಂಬಿ ಹಿಂದೆ ನಿಂತಿದ್ದಾರೆ.

ಲಾಂಗ್ ಹಿಡಿದು ಇನ್ ಸ್ಟಾಗ್ರಾಂನಲ್ಲಿ ನಲ್ಲಿ ಹಂಚಿಕೊಂಡಿದ್ದ ಇಬ್ಬರು ಪೊರ್ಕಿಗಳನ್ನು ಇದೀಗ ಸೆರೆ ಹಿಡಿಯಲಾಗಿದೆ. ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ತಲವಾರ್ ಹಿಡಿದು ಈ ಯುವಕರು ಸುತ್ತಾಡುತಿದ್ದಾಗ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ ಇಬ್ಬರನ್ನು ಎನ್ಆರ್ ಪುರ ಪೊಲೀಸರು ಬಂಧಿಸಿದ್ದಾರೆ. ನರಸಿಂಹರಾಜಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಪಟ್ಟಣದ ಮೆಕಾನಿಕ್ ಗಳಾದ ಸೈಯದ್ ಸಲ್ಮಾನ್ (22), ಮೊಹಮ್ಮದ್ ಸಾಧಿಕ್ (25) ಬಂಧಿತ ಆರೋಪಿಗಳಾಗಿದ್ದಾರೆ. ನಮ್ಮನ್ನು ನೋಡಿ ಜನ ಹೆದರಬೇಕೆಂದು ಲಾಂಗ್ ತೋರಿಸುತ್ತಿದ್ರು ಈ ದುಷ್ಕರ್ಮಿಗಳು, ಕಾರಿನಲ್ಲಿ ಲಾಂಗ್ ಗಳನ್ನು ಇಟ್ಟುಕೊಂಡು ಓಡಾಟ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಎನ್ ಆರ್ ಪುರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ
ತಳವಾರ್ ಝಳಪಿಸಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದ ಪುಡಿ ರೌಡಿಗಳು ಇದೀಗ ಅಂದರ್ ಆಗಿದ್ದಾರೆ. ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!