October 18, 2024

MALNAD TV

HEART OF COFFEE CITY

ಕಷ್ಟವೆಂದು ಬಂದವರಿಗೆ ಬರಿಗೈಯಲ್ಲಿ ಕಳಿಸಲ್ಲ ಈ ಮುಗುಳುವಳ್ಳಿ ಗೌರಿ..!

1 min read

ಚಿಕ್ಕಮಗಳೂರು: ಒಂದು ತಿಂಗಳು ಪ್ರತಿಷ್ಠಾಪಿಸಿ ವಿಸರ್ಜಿಸುವ ಗೌರಿಗೆ ಈ ಗ್ರಾಮದಲ್ಲಿ ವಿಶೇಷಸ್ಥಾನವನ್ನು ನೀಡಲಾಗಿದೆ ಗಣೇಶನ ಹಬ್ಬದಂದು ರಾಜ್ಯದ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿ ವಿಸರ್ಜಿಸುವ ಗೌರಿಮೂರ್ತಿಗಳಲ್ಲಿ ಚಿಕ್ಕಮಗಳೂರು ತಾಲೂಕು ಮುಗುಳುವಳ್ಳಿಯೂ ಒಂದಾಗಿದೆ.

ಈ ಗ್ರಾಮದಲ್ಲಿ ಪ್ರತಿಷ್ಟಾಪಿಸುವ ಗೌರಿಗೆ 270 ವರ್ಷಗಳ ಇತಿಹಾಸವಿದೆ. ಮುಗುಳವಳಿ ಗೌರಮ್ಮನೆಂದರೆ ಕಾಫಿನಾಡೆಂದು ಪ್ರಸಿದ್ದಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಸಿದ್ಧಿ ಪ್ರತಿಷ್ಠಾಪಿಸಿದ ದಿನದಿಂದ ಮೂರು ದಿನಕ್ಕೊಮ್ಮೆ ವಿಶೇಷ ಅಲಂಕಾರ ಮಾಡುತ್ತಿದ್ದು, ವಿವಿಧ ಅಲಂಕಾರದಲ್ಲಿ ಗೌರಿ ಕಂಗೊಳಿಸುತ್ತಾಳೆ.
ಈ ವರ್ಷ ಅರಿಶಿಣದ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಗೌರಿ ಗಣೇಶ ಹಬ್ಬವೆಂದರೆ ಗಣೇಶನಿಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಗಳ ಅಗ್ರಸ್ಥಾನವಿದೆ. ಆದರೆ ಚಿಕ್ಕಮಗಳೂರು ಸಮೀಪದ ಮುಗುಳುವಳ್ಳಿಯಲ್ಲಿ ಗೌರಿಗೆ ಅಗ್ರಸ್ಥಾನಕೊಡಲಾಗಿದೆ. ಎಲ್ಲಾ ಕಡೆಗಳಲ್ಲಿ ಗಣೇಶನ ಪಕ್ಕ ಗೌರಿಯ ಚಿಕ್ಕವಿಗ್ರಹವಿರುತ್ತದೆ ಆದರೆ ಮುಗುಳುವಳ್ಳಿಯಲ್ಲಿ ದೊಡ್ಡಗಾತ್ರದ ಗೌರಿಯನ್ನು ಪೂಜಿಸಲಾಗುತ್ತದೆ. ಗಣೇಶ ವಿಗ್ರಹ ಚಿಕ್ಕದಾಗಿರುತ್ತದೆ.
ವಿವಿಧ ಧಾನ್ಯಗಳಿಂದ ತಯಾರಾಗುವ ಗೌರಿ, ಮೂರು ದಿವಸಗಳಿಗೊಮ್ಮೆ ಒಂದೊಂದು ರೀತಿಯಲ್ಲಿ ಬದಲಾಗುತ್ತಿರುತ್ತಾಳೆ. ಒಂದೇ ಮೂರ್ತಿಗೆ ಮೂರು ದಿವಸಕ್ಕೊಮ್ಮೆ ಹಲವು ರೀತಿಯಲ್ಲಿ ಅಲಂಕರಿಸಿ ಪೂಜಿಸುವುದು ಈ ಗ್ರಾಮದ ವಿಶೇಷತೆ. ಈ ಗ್ರಾಮದಲ್ಲಿ ಗೌರಿಯನ್ನು ಗಣೇಶನಮೂರ್ತಿಯೊಂದಿಗೆ ಪೂಜಿಸಿ ಅಕ್ಟೋಬರ್ 18ಕ್ಕೆ ವಿಸರ್ಜಿಸುತ್ತಿದ್ದು, 270 ವರ್ಷಗಳಿಂದ ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ಗಣೇಶನ ಹಬ್ಬದಂದು ರಾಜ್ಯದ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿ ವಿಸರ್ಜಿಸುವ ಗೌರಿಮೂರ್ತಿಗಳಲ್ಲಿ ಚಿಕ್ಕಮಗಳೂರು ತಾಲೂಕು ಮುಗುಳುವಳ್ಳಿಯೂ ಒಂದಾಗಿದೆ.
ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಮುಗುಳುವಳ್ಳಿಯ ಗೌರಿ ಪರಿಚಿತಳು, ಅರಿಶಿನ, ಕಡಲೆಬೇಳೆ, ಬೆಡ ಹಾಗೂ ಕೇಸರಿಯನ್ನು ಬಳಸಿ ಶಾಸ್ರೋಕ್ತವಾಗಿ ಗೌರಿಯನ್ನು ನಿರ್ಮಿಸಲಾಗುತ್ತದೆ. ಗ್ರಾಮದಲ್ಲಿ 270 ವರ್ಷಗಳಿಂದ ಐದು ಕುಟುಂಬಗಳು ಇಂದಿಗೂ ಈ ರೂಢಿ ಪದ್ಧತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿವೆ.ತಿಂಗಳಲ್ಲಿ 11 ದಿವಸ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೂರು ದಿನಕ್ಕೊಮ್ಮೆ ಹೊಸ ರೂಪಕೊಡಲಾಗುತ್ತದೆ. ಪ್ರತಿನಿತ್ಯ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹರಕೆಕಟ್ಟಿಕೊಂಡು ಹೋಗುತ್ತಾರೆ.


ಗೌರಿ ಹಾಗೂ ಗಣೇಶನನ್ನು ಏಕಕಾಲಕ್ಕೆ ವಿಸರ್ಜಿಸುವುದು ಮುಗುಳುವಳ್ಳಿಯಲ್ಲಿ ಮಾತ್ರ. ಗೌರಿ ಯಾವ ನಕ್ಷತ್ರದಲ್ಲಿ ಬಂದಿರುತ್ತಾಳೋ ಅದೇ ನಕ್ಷತ್ರದಲ್ಲಿ ವಿಸರ್ಜನೆಯಾಗುತ್ತಾಳೆ. ಹರಕೆ ಈಡೇರಿಸುವುದರಲ್ಲಿ ಎತ್ತಿದ ಕೈ. ಮಕ್ಕಳಿಲ್ಲದವರು ಇಲ್ಲಿ ಹರಕೆ ಕಟ್ಟಿಕೊಂಡರೆ ಮಕ್ಕಳಾಗುತ್ತವೆಯಂತೆ. ಕಷ್ಟವೆಂದು ಹೇಳಿಕೊ೦ಡು ಈಕೆಯ ಬಳಿ ಬಂದರೆ ಬರಿಗೈಯಲ್ಲಿ ಕಳಿಸುವುದಿಲ್ಲವಂತೆ, ವರ್ಷದಿಂದ ವರ್ಷಕ್ಕೆ ಈ ದೇವಿ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾಳೆ.ಸಹಸ್ರಾರು ಜನರ ಕಷ್ಟಗಳನ್ನು ನಿವಾರಿಸುವ ಇಷ್ಟದೇವತೆಯನ್ನ ಗ್ರಾಮದವರು ಪ್ರತಿವರ್ಷ ಭಯ ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಬಹಳ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ವಿಸರ್ಜಿಸಲಾಗುತ್ತದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!