September 17, 2024

MALNAD TV

HEART OF COFFEE CITY

ಕೆಂಪೇಗೌಡರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು – ಟಿ.ರಾಜಶೇಖರ್

1 min read

ಚಿಕ್ಕಮಗಳೂರು-ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಜನಾಂಗದ ಯುವಕರು ಮೈಗೂಡಿಸಿಕೊಂಡು ಜನಾಂಗದ ಸಂಘಟನೆಯ ಜತೆಗೆ ಸಮಾಜಸೇವೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ತಿಳಿಸಿದರು.
ತಾಲ್ಲೂಕಿನ ಆಲ್ದೂರಿನ ತುಡುಕೂರು ಆಟದ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ೮ನೇ ವರ್ಷದ ೨೦೨೨ ಕ್ರಿಕೇಟ್ ಕಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರ ೫ ಲಕ್ಷ ನೀಡುವುದರ ಜತೆಗೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದರು.

ಜನಾoಗದವರ ಮನವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಂದಿಸಿ ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ೧೦೮ ಅಡಿಯ ಕೆಂಪೇಗೌಡ ರವರ ಪ್ರತಿಮೆ ನಿರ್ಮಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ, ಆಲ್ದೂರಿನ ಮುಖ್ಯ ಸರ್ಕಲ್‌ನಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲು ಜಿಲ್ಲಾಡಳಿತ ಮುಂದಾಗಬೇಕು, ಇದಕ್ಕೆ ಪ್ರತಿಯೋಬ್ಬರು ಪಕ್ಷಾತೀತವಾಗಿ ಸಹಕರಿಸಬೇಕೆಂದು ತಿಳಿಸಿದರು.
ಆಲ್ದೂರಿನ ಯುವಕರು ಪ್ರತಿವರ್ಷ ನಾಡಪ್ರಭು ಕೆಂಪೇಗೌಡರ ಸ್ಮಾರಣಾರ್ಥಕವಾಗಿ ಪ್ರತಿ ವರ್ಷ ಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದಾರೆ, ಮತ್ತು ಇತರೆ ಸಮಾಜಮುಖಿ ಕೆಲಸಗಳಿಗೆ ಒಕ್ಕಲಿಗರ ಸಂಘವು ಸಹಕರಿಸುತ್ತಿದೆ ಎಂದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾರಮೇಶ್ ಮಾತನಾಡಿ ಆಲ್ದೂರಿನ ಯುವಕರು ಪ್ರತಿವರ್ಷ ಕೆಂಪೇಗೌಡರ ಜಯಂತಿ ಅಂಗವಾಗಿ ಕ್ರಿಕೇಟ್ ಪಂದ್ಯಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಡಿ.ಬಿ.ಅಶೋಕ್ ಮಾತನಾಡಿ ಸರ್ಕಾರ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಂದು ಸರ್ಕಾರಿ ರಜೆ ಘೋಷಣೆ ಮಾಡಬೇಕು, ಆಲ್ದೂರಿನ ಯುವಕರು ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಆಯೋಜಿಸಬೇಕು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು, ಆಲ್ದೂರಿನಲ್ಲಿ ಇರುವ ಒಕ್ಕಲಿಗರ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಒಕ್ಕಲಿಗರ ರಾಜ್ಯ ಮತ್ತು ಜಿಲ್ಲಾ ಸಂಘ ಹೆಚ್ಚಿನ ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮಕ್ಕು ಮೊದಲು ಆಲ್ದೂರಿನ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥ ನಡೆಸಿ, ಆಲ್ದೂರಿನ ಕೆಂಪೇಗೌಡ ಸರ್ಕಲ್‌ನಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಉಪಾಧ್ಯಕ್ಷರಾದ ಲಕ್ಷö್ಮಣ್‌ಗೌಡ, ನಿರ್ದೇಶಕರುಗಳಾದ ವಿಕ್ರಾಂತ್, ಶ್ಯಾಮ್, ಮಾಜಿ ನಿರ್ದೇಶಕರಾದ ಕವೀಶ್, ಭವ್ಯನಟೇಶ್, ಅತ್ವೀಕ್, ಮಧು, ತುಡುಕೂರು ಮಂಜು, ಹೆಡದಾಳ್ ಸಂಪತ್, ರಘು, ಶ್ರೀಧರ್, ರವಿ, ದಿನೇಶ್, ಸಂದೀಪ್, ಪ್ರತೀಕ, ನವೀನ್, ಪ್ರತಿಭಾನವೀನ್, ಮೇಘನಾ, ಪೂರ್ಣಿಮ ಇತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!