🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಚುಕ್ಕಿ ಜಿಂಕೆ ಬೇಟೆ – ಓರ್ವನ ಬಂಧನ, ಮೂವರು ಪರಾರಿ!

---Advertisement---

 

ಚಿಕ್ಕಮಗಳೂರು: ಉರುಳು ಹಾಕಿ ಚುಕ್ಕಿ ಜಿಂಕೆಯನ್ನು ಬೇಟೆಯಾಡಿ, ಮಾಂಸ ಹಂಚಿಕೊಂಡು ಅಡುಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಇನ್ನುಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ದೇವದಾನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚುಕ್ಕಿ ಜಿಂಕೆಯನ್ನು ಹತ್ಯೆ ಮಾಡಿ ಅಡುಗೆ ಮಾಡುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ, ಶ್ವಾನದ ನೆರವಿನಿಂದ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ. ಅರಣ್ಯ ಇಲಾಖೆಯ ಶ್ವಾನ ರೋಜ್ಹಿ, ಕಾಫಿ ತೋಟದಲ್ಲಿ ಸುಮಾರು 10 ಅಡಿ ಆಳದಲ್ಲಿ ಹೂತುಹಾಕಲಾಗಿದ್ದ ಚುಕ್ಕಿ ಜಿಂಕೆಯ ಅವಶೇಷಗಳನ್ನು ಪತ್ತೆಹಚ್ಚಿದೆ.

ಅಲ್ಲದೆ, ಎರಡು ಮನೆಗಳಲ್ಲಿ ಜಿಂಕೆ ಮಾಂಸವನ್ನು ಹಂಚಿಕೊಂಡು ಅಡುಗೆ ಮಾಡಿರುವುದನ್ನೂ ಶ್ವಾನದ ನೆರವಿನಿಂದ ಪತ್ತೆಹಚ್ಚಲಾಗಿದೆ.

ಈ ಸಂಬಂಧ ಬಾಳೆಹೊನ್ನೂರು ವಲಯ ಅರಣ್ಯ ಕಚೇರಿಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಚುಕ್ಕಿ ಜಿಂಕೆ ಹತ್ಯೆ ಪ್ರಕರಣದಲ್ಲಿ ಪರಮೇಶ್ವರ್ ಗೌಡ ಎಂಬಾತನನ್ನು ಬಂಧಿಸಲಾಗಿದ್ದು, ಕವೀಶ್, ಪೃಥ್ವಿ ರಾಜ್ ಹಾಗೂ ವಿನಯ್ ಎಂಬುವವರು ನಾಪತ್ತೆಯಾಗಿದ್ದಾರೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಮುಂದಿನ ಕ್ರಮ ಕೈಗೊಂಡಿದೆ.

 

Join WhatsApp

Join Now

Join Telegram

Join Now