मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य
---Advertisement---

ವಂಚನೆ ಪ್ರಕರಣದ ಆರೋಪ: ಜಿಲ್ಲಾ ಸರ್ಜನ್ ಹುದ್ದೆಯಿಂದ ಡಾ. ಚಂದ್ರಶೇಖರ್ ರಿಲೀವ್

---Advertisement---

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ (ಡಿಸ್ಟ್ರಿಕ್ಟ್ ಸರ್ಜನ್) ಹುದ್ದೆಯಲ್ಲಿ ದಿಢೀರ್ ಬದಲಾವಣೆ ಮಾಡಲಾಗಿದ್ದು, ಡಾ. ಚಂದ್ರಶೇಖರ್ ಹೆಚ್.ಬಿ. ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿ ಅವರ ಸ್ಥಾನಕ್ಕೆ ಡಾ. ಚಂದ್ರಶೇಖರ್ ಸಾಲಿಮಠ್ ಎಸ್. ಅವರಿಗೆ ಪ್ರಭಾರ ಜವಾಬ್ದಾರಿ ನೀಡಿ ಆದೇಶ ಹೊರಡಿಸಲಾಗಿದೆ. ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅರಿವಳಿಕೆ ವಿಭಾಗದ ತಜ್ಞರಾಗಿರುವ ಸಾಲಿಮಠ್ ಅವರಿಗೆ ಏಪ್ರಿಲ್ 18 ರಿಂದಲೇ ಜಾರಿಗೆ ಬರುವಂತೆ ಈ ಆದೇಶ ನೀಡಲಾಗಿದೆ.
​ಐಎಎಸ್ ಅಧಿಕಾರಿ ಎಂದು ನಂಬಿಸಿ ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರಿಗೆ 41 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಈ ಹಿಂದಿನ ಜಿಲ್ಲಾ ಸರ್ಜನ್ ಹೆಸರು ಕೇಳಿಬಂದಿರುವುದು ಈ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ. ವಂಚನೆ ಎಸಗಿದ ನಕಲಿ ಐಎಎಸ್ ಅಧಿಕಾರಿಯನ್ನು ಜಿಲ್ಲಾ ಸರ್ಜನ್ ಅವರ ಮೂಲಕವೇ ಪರಿಚಯಿಸಲಾಗಿತ್ತು ಎಂಬ ಗಂಭೀರ ಆರೋಪ ದೂರಿನಲ್ಲಿ ಕೇಳಿಬಂದಿತ್ತು. ಇದರೊಂದಿಗೆ ತಾಲೂಕು ಮಟ್ಟದ ಕೆಡಿಪಿ ಸಭೆಗಳಿಗೆ ಸತತವಾಗಿ ಗೈರುಹಾಜರಾದ ಹಿನ್ನೆಲೆಯಲ್ಲಿ ಡಾ. ಚಂದ್ರಶೇಖರ್ ಹೆಚ್.ಬಿ. ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ

Join WhatsApp

Join Now

Join Telegram

Join Now

Leave a Comment