ಮದರಸಗಳ ಕಾರ್ಯವೈಖರಿ ಮತ್ತು ಇರಾನ್ ನಾಯಕ ಖಮೇನಿ ಪರ ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಳ ತೀವ್ರವಾಗಿ ಗುಡುಗಿದ್ದಾರೆ . ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮದರಸಗಳಲ್ಲಿ ಎಳೆಯ ಮಕ್ಕಳ ಮನಸ್ಸಿನಲ್ಲಿ ಹಿಂದೂ ವಿರೋಧಿ ಭಾವನೆ ಮತ್ತು ವಿಷವನ್ನು ತುಂಬಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಮುಸ್ಲಿಂ ಸಮುದಾಯದವರು ಹೋರಾಟಗಳಿಗೆ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುವ ಹಳೆಯ ಚಾಳಿಯನ್ನು ಮುಂದುವರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಪ್ಯಾಲೆಸ್ಟೈನ್ ವಿಷಯಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಮಕ್ಕಳನ್ನು ಮುಂದೆ ಬಿಟ್ಟು ನಾಟಕವಾಡುತ್ತಿರುವುದು ಸರಿಯಲ್ಲ ಎಂದಿರುವ ಅವರು, ದೇಶದ ಬಗ್ಗೆ ಗೌರವ ಕಲಿಸದ ಮತ್ತು ಹಿಂದೂ ವಿರೋಧಿ ನೀತಿ ಹೊಂದಿರುವ ಮದರಸಗಳನ್ನು ಕೂಡಲೇ ನಿಷೇಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇರಾನ್ ನಾಯಕ ಆಯತೊಲ್ಲಾ ಖಮೇನಿ ಸಾವಿನ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಖಂಡಿಸಿದ ಮುತಾಲಿಕ್, ಖಮೇನಿಯನ್ನು ಒಬ್ಬ ‘ರಾಕ್ಷಸ’ ಮತ್ತು ‘ಕ್ರೂರಿ’ ಎಂದು ಬಣ್ಣಿಸಿದ್ದಾರೆ. ಕಾಶ್ಮೀರಕ್ಕೆ ಸಂಬಂಧಿಸಿದ ವಿಧಿ 370 ರದ್ದತಿಯನ್ನು ವಿರೋಧಿಸಿದ್ದ ಮತ್ತು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದ್ದ ವ್ಯಕ್ತಿಯ ಪರವಾಗಿ ನಮ್ಮ ದೇಶದ ಅನ್ನ ತಿಂದು ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಖಮೇನಿಯನ್ನು ಮಹಾತ್ಮ ಗಾಂಧೀಜಿಯವರಿಗೆ ಹೋಲಿಸಿರುವುದನ್ನು ತೀವ್ರವಾಗಿ ಆಕ್ಷೇಪಿಸಿದ ಅವರು, ಅಹಿಂಸಾವಾದಿ ಗಾಂಧೀಜಿಗೆ ಒಬ್ಬ ಹಿಂಸಾವಾದಿಯನ್ನು ಹೋಲಿಸುವುದು ದೇಶಕ್ಕೆ ಮಾಡುವ ಅವಮಾನ ಎಂದಿದ್ದಾರೆ. ಬೆಂಗಳೂರಿನಲ್ಲಿ ನಿಯಮ ಮೀರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿರುವುದನ್ನು ಟೀಕಿಸಿದ ಅವರು, ಇಂತಹ ದೇಶವಿರೋಧಿ ಮನಸ್ಥಿತಿಯ ವ್ಯಕ್ತಿಯ ಪರ ನಿಲ್ಲುವವರಿಗೆ ಮಾನ-ಮರ್ಯಾದೆ ಇದೆಯೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.













Leave a Reply