ತರೀಕೆರೆಯಲ್ಲಿ ವಸತಿ ಶಾಲೆ ಗೋಧಿ ಹೂತುಹಾಕಿದ ಪ್ರಕರಣ ಬೆಳಕಿಗೆ – 80 ಚೀಲ ವಶ, ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

Spread the love

 

ತರೀಕೆರೆ ತಾಲೂಕಿನ ಹೆಚ್. ರಂಗಾಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಗೋಧಿ ದುರ್ಬಳಕೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜೆಸಿಬಿ ಯಂತ್ರದ ಮೂಲಕ ನಡೆದ ಉತ್ಖನನದಲ್ಲಿ ಸುಮಾರು 70 ರಿಂದ 80 ಚೀಲ ಗೋಧಿಯನ್ನು ಮಣ್ಣಿನೊಳಗೆ ಹೂತು ಹಾಕಿರುವುದು ಪತ್ತೆಯಾಗಿದೆ.

ಈ ವಸತಿ ಶಾಲೆ ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್‌ (KREIS) ವ್ಯಾಪ್ತಿಗೆ ಸೇರಿದ್ದು, ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಗೋಧಿಯನ್ನು ಅಕ್ರಮವಾಗಿ ಮಣ್ಣುಪಾಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧಿಸಿದಂತೆ ವಸತಿ ಶಾಲಾ ಸಿಬ್ಬಂದಿ ಮೇಲಾಧಿಕಾರಿಗಳ ಗಮನಕ್ಕೆ ತರದೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 2 ವರ್ಷಗಳ ಹಿಂದೆ “ಬಳಕೆಗೆ ಯೋಗ್ಯವಿಲ್ಲ” ಎಂಬ ಕಾರಣ ನೀಡಿ ಗೋಧಿಯನ್ನು ಹೂತು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ ನಡೆದ ಉತ್ಖನನದಲ್ಲಿ ದೊಡ್ಡ ಪ್ರಮಾಣದ ಗೋಧಿ ಚೀಲಗಳು ಪತ್ತೆಯಾಗಿರುವುದರಿಂದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

2023-24ರ ಬೇಸಿಗೆ ರಜೆ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಸುಮಾರು ಎರಡು ವರ್ಷಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಮೂಲಕ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಾದ ಅನುದಾನದ ದುರ್ಬಳಕೆ ನಡೆದಿರುವುದು ಬಹಿರಂಗವಾಗಿದೆ.

Leave a Reply

Your email address will not be published. Required fields are marked *