मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य
---Advertisement---

ನೀರಿಗಾಗಿ ಭದ್ರಾ ನಾಲೆ ಮೇಲೆ ಕೂತು ರೈತರ ಹೋರಾಟ ಮೊದಲು ನಮಗೆ ನೀರು ಬಿಡಿ, ಆಮೇಲೆ ಚಿತ್ರದುರ್ಗಕ್ಕೆ ನೀರು ಬಿಡಿ ಎಂದು ಆಗ್ರಹ

---Advertisement---

ಅಜ್ಜಂಪುರ ತಾಲೂಕಿನ ಹೆಬ್ಬೂರು ಸಮೀಪದ 3ನೇ ಚಾನೆಲ್ ಬಳಿ ರೈತರಿಂದ ಪ್ರತಿಭಟನೆ ನಡೆದಿದೆ. ಭದ್ರಾ ಯೋಜನೆಯ ಕಾಲುವೆಗೆ ನೀರು ಹರಿಯದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು, ಮಣ್ಣು ತುಂಬಿರುವ ಕಾಲುವೆ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಅಜ್ಜಂಪುರ-ಶಿವನಿ ಹೋಬಳಿಯ ಸುಮಾರು 60ರಿಂದ 70 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎಂದು ರೈತರು ಆರೋಪಿಸಿದ್ದಾರೆ. ನಮಗೆ ನೀರಿಲ್ಲದೆ ಸಂಕಷ್ಟದಲ್ಲಿದ್ದೇವೆ, ಆದರೆ ಚಿತ್ರದುರ್ಗಕ್ಕೆ ನೀರು ಹರಿಸಲು ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಮೊದಲು ಅಜ್ಜಂಪುರ ತಾಲೂಕಿನ ಅಜ್ಜಂಪುರ ಹಾಗೂ ಶಿವನಿ ಹೋಬಳಿಯ ರೈತರಿಗೆ ನೀರು ಬಿಡಬೇಕು. ಬಳಿಕ ಚಿತ್ರದುರ್ಗಕ್ಕೆ ನೀರು ಹರಿಸಲಿ ಎಂದು ರೈತರು ಆಗ್ರಹಿಸಿದ್ದಾರೆ.
ನೀರಿಗಾಗಿ ಚಿತ್ರದುರ್ಗದವರು ಭದ್ರಾ ಯೋಜನೆಯ ಕಾಲುವೆಗೆ ಮಣ್ಣು ತುಂಬಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು 8ರಿಂದ 10 ಹಳ್ಳಿಗಳ ಸಾವಿರಾರು ರೈತರು ಭದ್ರಾ ಕಾಲುವೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ನಮಗೆ ನೀರು ನೀಡದೆ ಚಿತ್ರದುರ್ಗಕ್ಕೆ ನೀರು ಹೇಗೆ ಬಿಡುತ್ತೀರಿ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Join WhatsApp

Join Now

Join Telegram

Join Now

Leave a Comment