🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ರೌಡಿಗಳೊಂದಿಗೆ ಮದ್ಯದ ಪಾರ್ಟಿ ಮಾಡಿದ್ದ ಕಡೂರು ಎಎಸ್ಐ ಸಸ್ಪೆಂಡ್!

---Advertisement---

 

 

​ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಖಾಕಿ ಇಲಾಖೆಗೆ ಮುಜುಗರ ತರುವಂತಹ ಘಟನೆ ನಡೆದಿದ್ದು, ಸಮಾಜಘಾತುಕ ರೌಡಿ ಶೀಟರ್‌ಗಳ ಜೊತೆ ಮದ್ಯದ ಪಾರ್ಟಿ ಆಯೋಜಿಸಿದ್ದ ಸಖರಾಯಪಟ್ಟಣ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ವೀರೇಂದ್ರ ಅವರನ್ನು ಎಸ್‌ಪಿ ಜಿತೇಂದ್ರ ಕುಮಾರ್ ದಾಯ್ಮಾ ಅಮಾನತುಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

​ವಾರದ ಹಿಂದೆ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದ ಬಾರ್‌ವೊಂದರಲ್ಲಿ ಈ ಅತಿರೇಕದ ಘಟನೆ ಜರುಗಿದ್ದು, ಖುದ್ದು ಎಎಸ್ಐ ಅವರೇ ರೌಡಿ ಶೀಟರ್‌ಗಳಿಗೆ ಮದ್ಯದ ಔತಣಕೂಟ ಏರ್ಪಡಿಸಿದ್ದರು ಎನ್ನಲಾಗಿದೆ. ತಡರಾತ್ರಿವರೆಗೂ ಮದ್ಯದ ಹೊಳೆ ಹರಿಸಿ, ಕರ್ಕಶ ಶಬ್ದದಲ್ಲಿ ಧ್ವನಿವರ್ಧಕಗಳನ್ನು ಹಾಕಿ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಕಂಡು ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದರು. ಗ್ರಾಮಸ್ಥರು ಹಾಗೂ ಮಹಿಳೆಯರು ರಾತ್ರೋರಾತ್ರಿ ಬಾರ್ ಎದುರು ಜಮಾಯಿಸಿ ಧಿಕ್ಕಾರ ಕೂಗಿ, ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆಸಿದ್ದರು. ಸಾರ್ವಜನಿಕರ ಹಿತ ಕಾಯಬೇಕಾದ ಅಧಿಕಾರಿಯೇ ರೌಡಿಗಳ ಜೊತೆ ಶಾಮೀಲಾಗಿ ಮೋಜು-ಮಸ್ತಿ ನಡೆಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರಾಥಮಿಕ ತನಿಖೆ ನಡೆಸಿ ಕರ್ತವ್ಯ ಲೋಪದಡಿ ವೀರೇಂದ್ರ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

Join WhatsApp

Join Now

Join Telegram

Join Now