🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಹೆಣ್ಣುಮಕ್ಕಳಿಂದಲೇ ತಂದೆಯ ಅಂತ್ಯಸಂಸ್ಕಾರ – ಲಿಂಗ ಸಮಾನತೆಗೆ ಮಾದರಿ

---Advertisement---

 

 

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನಲ್ಲಿ ಹೆಣ್ಣುಮಕ್ಕಳು ತಂದೆಯ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಲಿಂಗ ಸಮಾನತೆಯ ಸಂದೇಶ ಸಾರಿದ ಘಟನೆ ನಡೆದಿದೆ.

ಭಾವಸಾರ ಕ್ಷತ್ರಿಯಸಮಾಜದ ಬಿ.ಎಸ್. ವಿಶ್ವನಾಥ ಅವರು ನಿಧನರಾದ ಹಿನ್ನೆಲೆಯಲ್ಲಿ, ಅವರಿಗೆ ಗಂಡು ಮಕ್ಕಳು ಇಲ್ಲದ ಕಾರಣ ಮಗಳು ಐಶ್ವರ್ಯ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾದರು. ತಂಗಿ ಹಾಗೂ ಭಾವನ ಜೊತೆ ಸೇರಿ ಅವರು ಅಂತಿಮ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮೃತದೇಹದ ಸುತ್ತ ಹೆಗಲ ಮೇಲೆ ಕುಡಿಕೆ ಹೊತ್ತು ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಹೆಣ್ಣುಮಕ್ಕಳು ಎಲ್ಲರ ಗಮನ ಸೆಳೆದರು. ಬೀರೂರಿನ ಹಿಂದೂ ರುದ್ರಭೂಮಿಯಲ್ಲಿ ನಿನ್ನೆ ಅಂತ್ಯಕ್ರಿಯೆ ನಡೆಯಿತು.

ಕುಟುಂಬದ ಹಿರಿಯರು ಹೆಣ್ಣುಮಕ್ಕಳ ನಿರ್ಧಾರಕ್ಕೆ ಬೆಂಬಲ ನೀಡಿದ್ದು, ಸಮಾಜದವರು ಮತ್ತು ಸ್ನೇಹಿತರು ಯುವತಿಯರ ಧೈರ್ಯಶಾಲಿ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ.

ಬೀರೂರಿನಲ್ಲಿ ನಡೆದ ಈ ಘಟನೆ ಲಿಂಗ ಸಮಾನತೆಗೆ ಉತ್ತಮ ಮಾದರಿಯಾಗಿ ಗಮನ ಸೆಳೆಯುತ್ತಿದೆ.

Join WhatsApp

Join Now

Join Telegram

Join Now