🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ವಂದೇ ಮಾತರಂ ವಿವಾದಕ್ಕೆ ಹಿಂದೂ ಮಹಾ ಗಣಪತಿಯ ಎಂಟ್ರಿ..!

---Advertisement---

ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಇದೀಗ ವಂದೇ ಮಾತರಂ ವಿವಾದದ ಕೇಂದ್ರಬಿಂದುವಾಗಿದೆ.

ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸೆಪ್ಟೆಂಬರ್ 10ರಂದು ಆದೇಶ ಹೊರಡಿಸಿರುವ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ತೀವ್ರಗೊಂಡಿದೆ.

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಹಿಂದೂ ಮಹಾ ಗಣಪತಿ ಸೇವಾ ಸಂಘವು ವಿಸರ್ಜನಾ ಮೆರವಣಿಗೆ ವೇಳೆ ಪೂರ್ಣ ವಂದೇ ಮಾತರಂ ಹಾಡುವ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಆರಂಭಿಸಿದೆ.

ಚಿಕ್ಕಮಗಳೂರು ನಗರದ ಏಳು ಪ್ರಮುಖ ವೃತ್ತಗಳ ಪೈಕಿ ಯಾವ ವೃತ್ತದಲ್ಲಿ ಪೂರ್ಣ ವಂದೇ ಮಾತರಂ ಹಾಡಬೇಕು ಎಂಬುದರ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಅಭಿಪ್ರಾಯ ಸಂಗ್ರಹಕ್ಕೆ ಸಾರ್ವಜನಿಕರಿಂದಲೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, “ಎಲ್ಲಾ ವೃತ್ತಗಳಲ್ಲೂ ಹಾಡೋಣ” ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

ಇತ್ತೀಚೆಗೆ ಕರ್ನಾಟಕ ವಿಧಾನಸಭೆಯಲ್ಲೂ ಅಧಿಕೃತವಾಗಿ ಎರಡು ಚರಣಗಳ ಗಾಯನದ ಬಳಿಕ ಬಿಜೆಪಿ ಶಾಸಕರು ಉಳಿದ ಚರಣಗಳನ್ನು ಹಾಡಿದ ಘಟನೆ ವಂದೇ ಮಾತರಂ ವಿಚಾರದ ರಾಜಕೀಯ ಚರ್ಚೆಯನ್ನು ಮತ್ತಷ್ಟು ಮುನ್ನೆಲೆಗೆ ತಂದಿತ್ತು.

ಇದೀಗ ಚಿಕ್ಕಮಗಳೂರಿನ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಈ ವಿಚಾರ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಶನಿವಾರ ಹಿಂದೂ ಮಹಾ ಗಣಪತಿ ವಿಸರ್ಜನೆ ನಡೆಯಲಿದ್ದು, ಮೆರವಣಿಗೆ ವೇಳೆ ಪೂರ್ಣ ವಂದೇ ಮಾತರಂ ಗಾಯನ ನಡೆಯಲಿದೆಯೇ ಎಂಬುದರ ಮೇಲೆ ಗಮನ ನೆಟ್ಟಿದೆ.

Join WhatsApp

Join Now

Join Telegram

Join Now

और पढ़ें