🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಚಿಕ್ಕಮಗಳೂರು: ಪ್ರತಿಷ್ಠಿತ ಹೋಟೆಲ್‌ನ ಫ್ರೂಟ್ ಸಲಾಡ್‌ನಲ್ಲಿ ಹಾವಿನಂತೆ ಕಾಣುವ ವಿಚಿತ್ರ ಕ್ರಿಮಿ ಪತ್ತೆ!

---Advertisement---

 

ಕಾಫಿನಾಡಿನಲ್ಲಿ ಆಹಾರ ಪದಾರ್ಥಗಳಲ್ಲಿ ಮೇಲಿಂದ ಮೇಲೆ ಹುಳ-ಉಪ್ಪಟೆಗಳು ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ನಗರದ ಪ್ರತಿಷ್ಠಿತ ಖಾಸಗಿ ಹೋಟೆಲೊಂದರಲ್ಲಿ ಗ್ರಾಹಕರು ಆರ್ಡರ್ ಮಾಡಿದ್ದ ಫ್ರೂಟ್ ಸಲಾಡ್‌ನಲ್ಲಿ ಹಾವಿನಂತೆ ಕಾಣುವ ವಿಚಿತ್ರ ಕ್ರಿಮಿಯೊಂದು ಪತ್ತೆಯಾಗಿದೆ.

​ಫ್ರೂಟ್ ಸಲಾಡ್ ಬಟ್ಟಲಿನಲ್ಲಿ ಪತ್ತೆಯಾದ ಈ ವಿಚಿತ್ರ ಜೀವಿಯನ್ನು ‘ಹ್ಯಾಮರ್ ಹೆಡ್’ (Hammerhead worm) ಜಂತು ಎಂದು ಗುರುತಿಸಲಾಗಿದೆ. ನೋಡಲು ಸಣ್ಣ ಹಾವಿನಂತೆ ಕಾಣುವ ಈ ಬೃಹತ್ ಗಾತ್ರದ ಕ್ರಿಮಿ ಸಣ್ಣ ಸಲಾಡ್ ಬಟ್ಟಲಿಗೆ ಹೇಗೆ ಬಂತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿ ಮೂಡಿದೆ.

​ಇದು ನಿಜಕ್ಕೂ ಹೋಟೆಲ್‌ನ ನೈರ್ಮಲ್ಯದ ಕೊರತೆಯಿಂದ ಸಲಾಡ್‌ಗೆ ಸೇರಿಕೊಂಡಿದೆಯಾ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ತಂದು ಬಿಟ್ಟಿದ್ದಾರಾ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.

​ಸರಣಿ ನಿರ್ಲಕ್ಷ್ಯ – ಸಾರ್ವಜನಿಕರ ಆಕ್ರೋಶ:

ಚಿಕ್ಕಮಗಳೂರಿನಲ್ಲಿ ಆಹಾರ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದ್ದು, ಇತ್ತೀಚೆಗಷ್ಟೇ ಹೋಟೆಲೊಂದರ ವಡೆಯಲ್ಲಿ ಹಲ್ಲಿ ಪತ್ತೆಯಾಗಿತ್ತು. ಮತ್ತೊಂದೆಡೆ ಬೇಕರಿಯೊಂದರಲ್ಲಿ ಅವಧಿ ಮೀರಿದ (Expired) ಸಾಸ್ ಬಳಸುತ್ತಿರುವುದು ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೆ, ನಾಟಿ ತುಪ್ಪದ ಹೆಸರಿನಲ್ಲಿ ಡಾಲ್ಡಾ ಹಾಗೂ ವನಸ್ಪತಿಗೆ ಕೆಮಿಕಲ್ ಮಿಕ್ಸ್ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಜಾಲವೂ ಪತ್ತೆಯಾಗಿತ್ತು. ಈ ಸಾಲಿಗೆ ಈಗ ಫ್ರೂಟ್ ಸಲಾಡ್‌ನಲ್ಲಿ ಕ್ರಿಮಿ ಪತ್ತೆಯಾದ ಘಟನೆ ಹೊಸದಾಗಿ ಸೇರ್ಪಡೆಯಾಗಿದೆ.

​ಕಾಫಿನಾಡಿನ ಹೋಟೆಲ್, ಬೇಕರಿ ಹಾಗೂ ರೆಸಾರ್ಟ್‌ಗಳಲ್ಲಿ ಆಹಾರದ ಶುಚಿತ್ವ ಮತ್ತು ಗುಣಮಟ್ಟ ಕ್ಷೀಣಿಸುತ್ತಿದ್ದು, ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ಗಮನ ಹರಿಸಿ ಸೂಕ್ತ ತಪಾಸಣೆ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Join WhatsApp

Join Now