🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಬೀರೂರು ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ: ‘ಮದಗಜಗಳ ಕಾದಾಟ, ಸರ್ವರೂ ಎಚ್ಚರದಿಂದಿರಬೇಕು’ ಎಂದ ದೈವವಾಣಿ

---Advertisement---

 

 

ಚಿಕ್ಕಮಗಳೂರು: ಕಡೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬೀರೂರಿನ ಮೈಲಾರಲಿಂಗೇಶ್ವರ ಸ್ವಾಮಿಯ ದಸರಾ ಮಹೋತ್ಸವದ ಅಂಗವಾಗಿ ನಸುಕಿನ ಜಾವ ಬಹುನಿರೀಕ್ಷಿತ ಕಾರ್ಣಿಕ ನುಡಿ ಹೊರಬಿದ್ದಿದೆ. ಐತಿಹಾಸಿಕ ಮಹಾನವಮಿ ಬಯಲಿನಲ್ಲಿ ಬೆಳಗಿನ ಜಾವ ಸರಿಯಾಗಿ 4 ಗಂಟೆಗೆ ನಡೆದ ಧಾರ್ಮಿಕ ವಿಧಿವಿಧಾನಗಳ ನಡುವೆ ದೈವವಾಣಿ ಮೊಳಗಿದ್ದು, ಭಕ್ತವೃಂದ ತದೇಕಚಿತ್ತದಿಂದ ಆಲಿಸಿದೆ.

ದೇವಸ್ಥಾನದ ಅರ್ಚಕರಾದ ದಶರಥ ಪೂಜಾರ್ ಅವರು ಬಿಲ್ಲನ್ನೇರಿ, “ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಸೃಷ್ಟಿಗೆ ನಾಡು ಸಿರಿಯಾಯಿತು, ಮದಗಜಗಳು ಕಾದಾಡಿದರೂ ಕತ್ತಲೆಯ ದೀಪಕ್ಕೆ ಬೆಳಕಾಯಿತು, ಸರ್ವರೂ ಎಚ್ಚರದಿಂದಿರಬೇಕು” ಎಂದು ಭವಿಷ್ಯ ನುಡಿದು ಕೆಳಗೆ ಜಿಗಿದಿದ್ದಾರೆ. ಈ ನುಡಿಯು ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗುವ ಜೊತೆಗೆ, ರಾಜಕೀಯ ಅಥವಾ ಪ್ರಭಾವಿ ಶಕ್ತಿಗಳ ನಡುವೆ ತೀವ್ರ ಪೈಪೋಟಿ, ಸಂಘರ್ಷಗಳು ಏರ್ಪಡುವ ಮುನ್ಸೂಚನೆ ನೀಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬೀರೂರು ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯು ವರ್ಷದೊಳಗೆ ನೂರಕ್ಕೆ ನೂರರಷ್ಟು ನಿಜವಾಗುತ್ತದೆ ಎಂಬ ಬಲವಾದ ನಂಬಿಕೆ ಇರುವುದರಿಂದ, ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಭಕ್ತರು ಜಮಾಯಿಸಿದ್ದರು. ಮಹಾನವಮಿ ಬಯಲಿನಲ್ಲಿ ನೆರೆದಿದ್ದ ಅಪಾರ ಭಕ್ತಸಾಗರ ಕಾರ್ಣಿಕದ ಕ್ಷಣದಲ್ಲಿ ಜಯಘೋಷ ಮೊಳಗಿಸಿ, ಸ್ವಾಮಿಯ ದರ್ಶನ ಪಡೆದು ಪುನೀತರಾದರು

Join WhatsApp

Join Now

Join Telegram

Join Now